ಸೆಪ್ಟೆಂಬರ್ 18 ವಿಶ್ವ ಬಿದಿರು ದಿನ. ಈ ದಿನವನ್ನುಬಿದಿರಿನ ಕುರಿತು ಜಾಗತಿಕವಾಗಿ ತಿಳಿವಳಿಕೆ ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತಿದೆ.
ಬಿದಿರು ಯಾವುದೇ ಆರೈಕೆಯಿಲ್ಲದೆ ತಾನಾಗಿಯೇ ಬೆಳೆಯುತ್ತದೆ. ಅದರಿಂದ ನೂರಾರು ಉಪಯೋಗಗಳಿವೆ. ಆದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಮಾರ್ಗವನ್ನು ನಾವು ಅರಿತುಕೊಂಡಿಲ್ಲ. ಆರ್ಥಿಕವಾಗಿ, ಪರಿಸರಕ್ಕೆ ಪೂರಕವಾಗಿರುವ ಬಿದಿರನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ದಕ್ಷಿಣ ಏಷ್ಯಾ ಬ್ಯಾಂಬೂ ಫೌಂಡೇಶನ್ ಜಾಗೃತಿ ಮೂಡುಸುತ್ತಿದೆ.
ಜಗತ್ತಿನಲ್ಲಿ 550ಬಿದಿರು ಪ್ರಭೇದಗಳಿವೆ ಎಂದು ಗುರುತಿಸಲಾಗಿದೆ. ಭಾರತದಲ್ಲಿ 126 ಜಾತಿಯ ಬಿದಿರುಗಳನ್ನು ಪತ್ತೆ ಮಾಡಲಾಗಿದೆ. ಆದರೆ ನಮಗೆ 40 ಬಗೆಯ ಬಿದಿರುಗಳ ಮಾತ್ರ ಹೆಚ್ಚಾಗಿ ಕಾಣಸಿಗುತ್ತವೆ.
ಈಶಾನ್ಯ ಭಾರತದಲ್ಲಿ ಹೆಚ್ಚಾಗಿ ಬಿದಿರು ಬೆಳೆಯಲಾಗುತ್ತದೆ. ಅಲ್ಲಿನ ಸರ್ಕಾರಗಳು ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡುತ್ತವೆ. ಅಸ್ಸಾಂ, ಮಣಿಪುರ, ಮೇಘಾಲಯ ಸರ್ಕಾರಗಳುಬಿದಿರಿನ ಉತ್ಪನ್ನಗಳ ತಯಾರಿಕೆ, ಮಾರಾಟ ಹಾಗೂ ಮಾರುಕಟ್ಟೆ ಬಗ್ಗೆ ಜನರಲ್ಲಿಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ.
2009ರಲ್ಲಿ ಸೆಪ್ಟೆಂಬರ್ 18ರಂದು ಮೊದಲ ಬಾರಿಗೆ ಥೈಲ್ಯಾಂಡ್ ದೇಶದಲ್ಲಿ ಬಿದಿರು ದಿನವನ್ನು ಆಚರಿಸಲಾಯಿತು. ಈ ದಿನಾಚರಣೆಗೆ ವಿಶ್ವಸಂಸ್ಥೆ ಕೂಡ ಮಾನ್ಯತೆ ನೀಡಿತ್ತು.
ಅಂದಿನಿಂದ ಪ್ರತಿ ವರ್ಷವೂ ಭಾರತ ಸೇರಿದಂತೆ ವಿವಿಧ ದೇಶಗಳು ಬಿದಿರು ದಿನವನ್ನು ಆಚರಣೆ ಮಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.