ಬೆಂಗಳೂರು:‘ಸಪ್ತಗಿರಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳುವಿದ್ಯುತ್ ಚಾಲಿತ ದ್ವಿಚಕ್ರ ವಾಹನ, ಉಳುಮೆ ಹಾಗೂ ಬೀಜ ಬಿತ್ತನೆ ಉಪಕರಣವನ್ನು ಸಂಶೋಧಿಸಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲಕೆ.ಎಲ್.ಶಿವಬಸಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ವಿದ್ಯಾರ್ಥಿಗಳು ಬಜಾಜ್ ಚೇತಕ್ ಸ್ಕೂಟರ್ ಅನ್ನು ಸುಮಾರು ₹12,000 ವೆಚ್ಚದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌ಆಗಿ ಪರಿವರ್ತಿಸಿದ್ದಾರೆ. ಗಂಟೆಗೆ 30 ರಿಂದ 35 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದ್ದು, ಒಟ್ಟು 4 ಬ್ಯಾಟರಿಗಳಿವೆ. ಬ್ಯಾಟರಿ ಚಾರ್ಜ್ ಮಾಡಲು 3 ರಿಂದ 4 ಗಂಟೆ ಸಮಯ ಬೇಕಾಗುತ್ತದೆ.ಹೆಚ್ಚಾಗುತ್ತಿರುವ ಭೂತಾಪಮಾನ ಮತ್ತು ಇಂಧನ ಉಳಿತಾಯಕ್ಕೆ ಇದು ಸಹಕಾರಿಯಾಗಲಿದೆ’ಎಂದು ಅವರು ತಿಳಿಸಿದರು.
‘ಉಳುಮೆ ಹಾಗೂ ಬೀಜ ಬಿತ್ತನೆ ಉಪಕರಣವನ್ನು ₹600 ರಿಂದ ₹800 ವೆಚ್ಚದಲ್ಲಿ ಸಂಶೋಧಿಸಿದ್ದು, ಬಿತ್ತನೆಯ ಅಂತರವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಉಳಿಮೆ ಮಾಡುವುದರಿಂದ ಹಿಡಿದು ಬಿತ್ತನೆ ಬೀಜಗಳ ಆಯ್ಕೆ, ಕಟಾವಿನವರೆಗೂ ಈ ಉಪಕರಣವನ್ನು ಬಳಸಬಹುದು. ಬೀಜಗಳನ್ನು ತುಂಬುವ ಡ್ರಮ್‌ನಲ್ಲಿ ಎಲ್ಲಾ ವಿಧದ ಬೀಜಗಳನ್ನು ಹಾಕಬಹುದಾಗಿದ್ದು, ನಿರ್ವಹಣೆ ಕೂಡಾ ಅತ್ಯಂತ ಸುಲಭವಾಗಿದೆ’ ಎಂದರು.
ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಮಹಾದೇವಸ್ವಾಮಿ, ಪ್ರೊ.ಪ್ರಶಾಂತ್‌ಕುಮಾರ್, ಪ್ರೊ.ಮಹೇಶ್ ಹಾಗೂವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.