ADVERTISEMENT

ಕಲೆ: ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಅವರ ಶಾಂತಿ–ಪ್ರೀತಿಯ ಬಿಂಬಗಳು

ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಬೆಳಗಾವಿ ಜಿಲ್ಲೆಯ ರಾಮದುರ್ಗದವರು

ಪ್ರಜಾವಾಣಿ ವಿಶೇಷ
Published 25 ನವೆಂಬರ್ 2023, 21:30 IST
Last Updated 25 ನವೆಂಬರ್ 2023, 21:30 IST
<div class="paragraphs"><p>ಗಣೇಶ ಪಿ. ದೊಡ್ಡಮನಿ</p></div>

ಗಣೇಶ ಪಿ. ದೊಡ್ಡಮನಿ

   

‘ರವಿ ಕಾಣದ್ದನ್ನು ಕವಿ ಕಂಡ...’ ಅನ್ನುವ ಮಾತಿದೆ. ಅದನ್ನೇ ಮುಂದುವರಿಸಿ, ಕವಿ ಕಂಡಿದ್ದನ್ನು ತನ್ನ ಕುಂಚದಲ್ಲಿ ಲೋಕಕ್ಕೆ ಅನಾವರಣ ಮಾಡುವವನನ್ನು ಕಲೆಗಾರ ಅನ್ನಬಹುದೇನೋ. ಕಲಾವಿದನ ಕೈಚಳಕದಿಂದ ಹೊರಹೊಮ್ಮುವ ಕಲೆಗೆ, ಕಲ್ಪನೆಗೆ ಅವನೇ ಸಾಟಿ. ತನ್ನ ಅಮೂರ್ತ ಕಲ್ಪನೆಗೆ ಮೂರ್ತ ರೂಪ ನೀಡುವ ಸೃಜನಶೀಲ ಕಲಾವಿದರೊಬ್ಬರು 19 ವರ್ಷಗಳಿಂದ ಅದನ್ನೇ ಆರಾಧಿಸುತ್ತಿದ್ದಾರೆ. 

ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಚಿಕ್ಕ ವಯಸ್ಸಿನಿಂದಲೂ ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಚಿತ್ರಕಲೆಯಲ್ಲೇ ಪದವಿ ಪೂರೈಸಿದ ಅವರು ತಮ್ಮ ಗುರು ಶಂಕರ್‌ ಪಾಟೀಲ್‌ ಅವರ ಮಾರ್ಗದರ್ಶನದಲ್ಲಿ ಕುಂಚದ ಜಗತ್ತಿನಲ್ಲಿ ಪಯಣ ಆರಂಭಿಸಿದರು. ತಮ್ಮದೇ ಆದ ಬಣ್ಣ ವೈವಿಧ್ಯವನ್ನು ರೂಢಿಸಿಕೊಂಡಿರುವ ಅವರು, ಕ್ಯಾನ್ವಾಸ್‌ನಲ್ಲಿ ಭಾರತೀಯ ಪರಂಪರೆಯ ಸಾಂಪ್ರದಾಯಿಕ ಶೈಲಿಯಲ್ಲಿ ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸುತ್ತಾರೆ. ಶಾಂತಿ, ಪ್ರಕೃತಿಯನ್ನು ಮರುಕಾಣಿಸುವ ಅವರ ಕಣ್ನೋಟ ವರ್ತಮಾನದಲ್ಲಿ ಹೆಚ್ಚು ಪ್ರಸ್ತುತ. ಸಾಂಪ್ರದಾಯಿಕ ಜೀವನ ಪದ್ಧತಿ, ಸಂಸ್ಕೃತಿಯ ಚೌಕಟ್ಟನ್ನು ದಾಟುವ ಅವರ ಚಿಂತನೆ ವಿಶ್ವಮಾನವ ಸಂಬಂಧವನ್ನು ಬೆಸೆಯಲು ತುಡಿಯುವಂತೆ ಗೋಚರಿಸುತ್ತದೆ. 

ADVERTISEMENT

ಸುಮಾರು ಹದಿನೈದು ವರ್ಷಗಳ ಕಾಲ ಬುದ್ಧನ ಪ್ರತಿರೂಪ ಮೂಡಿಸುತ್ತಾ ಬಂದ ಅವರು ಒಂದು ದಿನ ಬುದ್ಧನನ್ನು ವೈಯಕ್ತಿಕವಾಗಿ ತಾನು ಅನುಸರಿಸುತ್ತೇನಾ ಎಂದು ತಮ್ಮನ್ನು ಪ್ರಶ್ನಿಸಿಕೊಂಡರು. ಆಗ ಅವರಿಗೆ ದಕ್ಕಿದ್ದು ವರ್ಷದ ಮೊದಲ ಮಳೆಯ ಅನುಭವ. ಬೇಸಿಗೆಯ ನಂತರ ಬೀಳುವ ವರ್ಷಧಾರೆಯಿಂದ ಹೊಮ್ಮುವ ಮಣ್ಣಿನ ಸುವಾಸನೆ ಮೂಗಿಗೆ ಅಡರಿದೆ. ಅದರಿಂದಲೋ ಏನೋ ಪುಳಕಿತರಾಗಿದ್ದಾರೆ. ಅದೇ ಭಾವವನ್ನು ಕಳೆದ ಆರು ವರ್ಷಗಳಿಂದ ಮೂಡಿಸುತ್ತಿರುವುದಾಗಿ ಹೇಳುತ್ತಾರೆ ಅವರು.

ಕೆಲವೇ ಸೆಕೆಂಡ್‌ಗಳಲ್ಲಿ ಇವರು ತಮ್ಮ ಕಲ್ಪನೆಯನ್ನು ಕಲೆಯಾಗಿ ಮೂಡಿಸಬಲ್ಲರು. ಚಿತ್ರಕಲೆಯ ಮೇಲಿನ ಪ್ರೇಮ ಅವರನ್ನು ವಿಶ್ವದ ಹಲವು ದೇಶಗಳನ್ನು ಸುತ್ತಾಡಿಸಿದೆ.

ಗಣೇಶ ಅವರಿಗೆ ಮೊದಲು ಚಿತ್ರಕಲೆ ಅಭ್ಯಾಸಕ್ಕೆ ಹಣದ ತೊಂದರೆ ಆಗಿತ್ತು. ಅದು ಈ ಕಾಲದ ಕೆಲವರಿಗಾದರೂ ಆಗದೇ ಇರಲಿ ಎಂದೇ  ಅವರು ತಮ್ಮ ಹೆತ್ತ ತಾಯಿ ಮಾಲಾ ಹಾಗೂ ಹೊಟ್ಟೆ ತುಂಬಿಸಿದ ತಾಯಿ ಕಲಾ ಇವರಿಬ್ಬರ ಹೆಸರಿನಲ್ಲಿ ‘ಕಲಾಮಾಲಾ ಫೌಂಡೇಶನ್‌’ ಅನ್ನು ಕಳೆದ ವರ್ಷ ಪ್ರಾರಂಭಿಸಿದರು. ಪ್ರತಿ ವರ್ಷ ಈ ಫೌಂಡೇಶನ್‌ನಿಂದ  ಚಿತ್ರಕಲಾ ವಿಭಾಗದ ಅಂತಿಮ ವರ್ಷದ ಐವರು ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಏಪ್ರಿಲ್‌ 4ರಂದು ತಲಾ 20 ಸಾವಿರ ರೂಪಾಯಿ ನೀಡುತ್ತಾರೆ. ವಿದೇಶದಲ್ಲಿ ಚಿತ್ರಕಲಾ ವಿದ್ಯಾಭ್ಯಾಸಕ್ಕೆ ತಮಗೆ ಸಿಕ್ಕ ಅವಕಾಶವು ಹಣದ ಕೊರತೆಯಿಂದಾಗಿ ಕೈತಪ್ಪಿತ್ತು. ಹಾಗೆ ಯಾರಿಗೂ ಆಗಕೂಡದೆನ್ನುವುದು ಗಣೇಶ ಅವರ ಆಶಯ.

ಮೀರಾ ಮೆಚ್ಚುಗೆ

ಚಿತ್ರಕಲೆಗಳ ಪ್ರದರ್ಶನ ವೀಕ್ಷಣೆಗೆ ಬಂದಿದ್ದಂತಹ ಹಿರಿಯ ಚಿತ್ರಕಲಾ ಕಲಾವಿದೆ ಮೀರಾ ಗ್ಯಾನ್‌ಚಂದ್‌, ‘ಗಣೇಶ ಅವರಿಗೆ ಅವರೇ ಸಾಟಿ. ಪ್ರತಿಯೊಂದು ಚಿತ್ರದಲ್ಲಿಯೂ ಅವರು ಹಲವಾರು ಬಣ್ಣಗಳನ್ನು ಬಳಸಿದ್ದಾರೆ. ನಾನು ನನ್ನ ಚಿತ್ರಗಳಲ್ಲಿ ಇಷ್ಟೊಂದು ಬಣ್ಣಗಳನ್ನು ಎಂದೂ ಬಳಸಿಲ್ಲ. ಅವರ ಚಿತ್ರಗಳು ಮನಸ್ಸಿಗೆ ಮುದ ನೀಡುತ್ತವೆ’ ಎಂದು ಶ್ಲಾಘಿಸಿದ್ದು ಒಂದು ರೀತಿಯಲ್ಲಿ ಒಳ್ಳೆಯ ಸರ್ಟಿಫಿಕೇಟೇ ಹೌದು.

50ನೇ ಪ್ರದರ್ಶನ

ಬೆಳಗಾವಿ ಜಿಲ್ಲೆಯ ರಾಮದುರ್ಗದ ಗಣೇಶ ಪಿ. ದೊಡ್ಡಮನಿ ಅವರ ಚಿತ್ರಕಲಾ ಪ್ರದರ್ಶನವು ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಗ್ಯಾಲರಿ 3ರಲ್ಲಿ ಪ್ರದರ್ಶಿತವಾಗುತ್ತಿದೆ. ಇದು ಅವರ 50ನೇ ಚಿತ್ರಕಲಾ ಪ್ರದರ್ಶನವಾಗಿದ್ದು, ನವೆಂಬರ್ 26ರವರೆಗೂ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.

ಗಣೇಶ್ ಪಿ. ದೊಡ್ಡಮನಿ ಅವರ ವರ್ಣಚಿತ್ರಗಳು

ಗಣೇಶ್ ಪಿ. ದೊಡ್ಡಮನಿ ಅವರ ವರ್ಣಚಿತ್ರಗಳು

50ನೇ ಪ್ರದರ್ಶನ

ಬೆಳಗಾವಿ ಜಿಲ್ಲೆಯ ರಾಮದುರ್ಗದ ಗಣೇಶ ಪಿ. ದೊಡ್ಡಮನಿ ಅವರ ಚಿತ್ರಕಲಾ ಪ್ರದರ್ಶನವು ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಗ್ಯಾಲರಿ 3ರಲ್ಲಿ ಪ್ರದರ್ಶಿತವಾಗುತ್ತಿದೆ. ಇದು ಅವರ 50ನೇ ಚಿತ್ರಕಲಾ ಪ್ರದರ್ಶನವಾಗಿದ್ದು ನವೆಂಬರ್ 26ರವರೆಗೂ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.

ಗಣೇಶ್ ಪಿ. ದೊಡ್ಡಮನಿ ಅವರ ವರ್ಣಚಿತ್ರಗಳು

ಗಣೇಶ್ ಪಿ. ದೊಡ್ಡಮನಿ ಅವರ ವರ್ಣಚಿತ್ರಗಳು

ಗಣೇಶ್ ಪಿ. ದೊಡ್ಡಮನಿ ಅವರ ವರ್ಣಚಿತ್ರ

ಗಣೇಶ್ ಪಿ. ದೊಡ್ಡಮನಿ ಅವರ ವರ್ಣಚಿತ್ರಗಳು

ಗಣೇಶ್ ಪಿ. ದೊಡ್ಡಮನಿ ಅವರ ವರ್ಣಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.