ದಸರಾ ಗೊಂಬೆಗಳ ವೈಭವವನ್ನು ಮಕ್ಕಳಿಗೆ ಆನ್‌ಲೈನ್ ಮೂಲಕ ಪರಿಚಯಿಸುವ ಪುಟ್ಟ ಪ್ರಯತ್ನವೊಂದು ಬೆಂಗಳೂರಿನ ಆರ್.ಟಿ.ನಗರದ ಬಚ್‌ಪನ್ ಪ್ಲೇಸ್ಕೂಲ್‌ನಲ್ಲಿ ನಡೆದಿದೆ.
‘ಕೋವಿಡ್ ಕಾರಣಕ್ಕೆ ಶಾಲೆಗಳು ತೆರೆದಿಲ್ಲ. ನಾಡಿನ ಸಾಂಸ್ಕೃತಿಕ ಬದುಕನ್ನು ಪರಿಚಯಿಸುವ ಪ್ರಯತ್ನ ಇದು.ಕಳೆದ ವರ್ಷದಿಂದ ಶಾಲೆಯಲ್ಲಿ ಗೊಂಬೆ ಪ್ರದರ್ಶನ ಆರಂಭಿಸಿದ್ದೆವು. ಪ್ರತಿ ವರ್ಷವೂ ಗೊಂಬೆಗಳ ಸಂಖ್ಯೆ ಹೆಚ್ಚಿಸುತ್ತಲೇ ಇದ್ದೇವೆ. ಸದ್ಯ ನೂರಕ್ಕೂ ಮೇಲೆ ಗೊಂಬೆಗಳಿವೆ’ ಎನ್ನುತ್ತಾರೆ ಶಾಲೆಯನಿರ್ದೇಶಕರಾದ ಹರಿಪ್ರಿಯಾ ಯಶವಂತ್.
‘ಬೇರೆ ಬೇರೆ ಥೀಮ್ ಇಟ್ಟು ಪ್ರತಿ ವರ್ಷ ಗೊಂಬೆ ಪ್ರದರ್ಶನ ಮಾಡುತ್ತಿದ್ದೆವು. ಕಳೆದ ಬಾರಿ ನಗರ ಮತ್ತು ಹಳ್ಳಿಯ ಪರಿಕಲ್ಪನೆ ಇಟ್ಟಿದ್ದೆವು’ ಎಂದು ಅವರು ವಿವರಿಸುತ್ತಾರೆ.
ಥೀಮ್ ಬೆಂಗಳೂರು- ಮೈಸೂರು: ಈ ಪ್ರದರ್ಶನದಲ್ಲಿ ಬೆಂಗಳೂರು ಮತ್ತು ಮೈಸೂರು ಭಾಗದ ಸಂಸ್ಕೃತಿ ಪರಿಚಯಿಸುವ ಪರಿಕಲ್ಪನೆಯಿದೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಶಾರದಾ ದೇವಸ್ಥಾನ, ಪೂಜಾ ದೃಶ್ಯ ಇಲ್ಲಿದೆ. ಮೈಸೂರಿನ ಅರಮನೆ, ರಾಜರ ದರ್ಬಾರೂ ಪ್ರದರ್ಶನದಲ್ಲಿದೆ. ಪ್ರದರ್ಶನದ ಕರಕುಶಲ ವಸ್ತುಗಳನ್ನುಶಿಕ್ಷಕರೇ ಸಿದ್ಧಪಡಿಸಿದ್ದಾರೆ. ವೀಕ್ಷಿಸಿದ ಮಕ್ಕಳು ತುಂಬಾ ಖುಷಿಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮ ವಹಿಸಿ ನಿಗದಿತ ವೇಳೆಯಲ್ಲಿ ಬಂದು ನೋಡಬಹುದು ಎನ್ನುತ್ತಾರೆ ಹರಿಪ್ರಿಯಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.