ದೇವವಟ್ಟೆ
ದೇವವಟ್ಟೆ (ನಾ). ದೇವಲೋಕದ ಹಾದಿ
ದಶರಥನು ಗುರುಗಳಾದ ವಾಮದೇವ, ವಸಿಷ್ಠ ಹಾಗೂ ಸಚಿವರನ್ನು ಕರೆಸಿ, ತನ್ನ ಬಾಳ ಬಯಕೆಯನ್ನು ಹೀಗೆ ತಿಳಿಸುವನು: ‘ಓ ವಂದ್ಯರಿರ, ಬಾಳಿಗೆ ಕಣ್ಣಿನಂತಿರುವ ಕಂದರನ್ನು ಪಡೆಯುವ ದೇವಮಾರ್ಗವನ್ನು ನನಗೆ ತಿಳಿಸಿ. ನನ್ನ ಎದೆಯ ಬೆಂಕಿಯನ್ನು ಆರಿಸಿ ಸುಗ್ಗಿಯನ್ನು ತನ್ನಿ.’
ಆ ಸಂದರ್ಭದಲ್ಲಿ ಕುವೆಂಪು ಅವರು ‘ದೇವಮಾರ್ಗ’ವನ್ನು ‘ದೇವವಟ್ಟೆ’ ಪದದಿಂದ ಅಭಿವ್ಯಕ್ತಿಸಿದ್ದಾರೆ.
‘ದೇವವಟ್ಟೆಯನುಸಿರಿಮೆನಗೆ, ಓ ವಂದ್ಯರಿರ;
ತವಿಸಿಮೆನ್ನೆದೆಯಗ್ಗಿಯಂ, ಬರಿಸಿ ಸುಗ್ಗಿಯಂ.’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.