ADVERTISEMENT

ರವೀಂದ್ರ ಕಲಾಕ್ಷೇತ್ರದಲ್ಲಿ ಉಪನ್ಯಾಸ ಮತ್ತು ಯಕ್ಷಗಾನ ಫೆ.17ಕ್ಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 15:32 IST
Last Updated 16 ಫೆಬ್ರುವರಿ 2024, 15:32 IST
   

ರಂಗಚಂದಿರ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಫೆ.17 ಶನಿವಾರ ಉಪನ್ಯಾಸ, ಅಭಿನಂದನೆ ಹಾಗೂ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಸಂಜೆ 6 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಅಭಿನಂದನೆ ಕಾರ್ಯಕ್ರಮವಿದೆ. ಸಂಗೀತ ವಿದ್ವಾಂಸರಾದ ವಿದ್ಯಾಭೂಷಣ ಅವರು ಅಭಿನಂದಿಸಲಿದ್ದಾರೆ. ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಧರಣೀದೇವಿ ಮಾಲಗತ್ತಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿ.ಎನ್.ಮೋಹನ್, ಬಹುರೂಪಿ ಪ್ರಕಾಶನ, ಆರ್.ಕೆ.ಹೆಗಡೆ, ಗೌರವಾಧ್ಯಕ್ಷರು, ರಂಗಚಂದಿರ  ಭಾಗವಹಿಸಲಿದ್ದಾರೆ. ನ. ರವಿಕುಮಾರ. ಅಭಿನವ, ಬೆಂಗಳೂರು ಇವರು ಸಂಯೋಜನೆ ಮಾಡಿದ್ದಾರೆ. ಸಂಜೆ:5

ನಂತರ, ಲಕ್ಷ್ಮೀಶ ತೋಳ್ಳಾಡಿ ಅವರಿಂದ ‘ಮಹಾಭಾರತದಲ್ಲಿ ಮಾತು ಮತ್ತು ಮೌನ’ ಉಪನ್ಯಾಸ. ಸಂಜೆ 6.30 ಗಂಟೆಗೆ  ಸಂಜೆ 7 ರಿಂದ 8ರ ವರೆಗೆ ಉಡುಪಿಯ ಥಿಯೇಟರ್‌ ಯಕ್ಷ ಸಂಸ್ಥೆಯಿಂದ ಚಕ್ರವ್ಯೂಹ ಯಕ್ಷಗಾನ ಪ್ರಸ್ತುತಿ ಇದೆ. 

ADVERTISEMENT

ನಮ್ಮೊಂದಿಗೆ ಡಾ. ಸುಂದರ್ ಸರುಕ್ಕೆ, ಡಾ. ಎ.ನಾರಾಯಣ, ಶಶಿಧರ ಅಡಪ, ಸಚ್ಚಿದಾನಂದ ಹೆಗಡೆ, ಎಂಎಎನ್ ಇಸ್ಮಾಯಿಲ್, ಪುರುಷೋತ್ತಮ ಅವರು ಭಾಗವಹಿಸಲಿದ್ದಾರೆ ಎಂದು ರಂಗಚಂದಿರ ಕಾರ್ಯದರ್ಶಿ ಜಿಪಿಒ ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.