ಇದು ಸೆನೆಗಲ್ ದೇಶ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆದ ಐವತ್ತನೆಯ ವರ್ಷದ ನೆನಪಿಗಾಗಿ ನಿರ್ಮಿಸಿದ್ದು. ಈ ಸ್ಮಾರಕದ ಉದ್ಘಾಟನೆ ಆಗಿದ್ದು 2010ರ ಏಪ್ರಿಲ್‌ನಲ್ಲಿ. ಸೆನೆಗಲ್‌ನ ರಾಜಧಾನಿ ಡಾಕಾರ್‌ನ ಹೊರವಲಯದ ಒಂದು ಬೆಟ್ಟದ ಮೇಲೆ ಇದು ನಿಂತಿದೆ. ಇದು ಆಫ್ರಿಕಾ ಖಂಡದ ಅತಿ ಎತ್ತರದ ಪ್ರತಿಮೆಯೂ ಹೌದು.
ಇದರ ಎತ್ತರ 49 ಮೀಟರ್. ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು ಒಂದು ಮಗು ಜ್ವಾಲಾಮುಖಿಯಿಂದ ಮೇಲೆದ್ದು ಬಂದಂತೆ ಇದನ್ನು ನಿರ್ಮಿಸಲಾಗಿದೆ. ಈ ಮೂವರು ಅಟ್ಲಾಂಟಿಕ್ ಸಮುದ್ರದ ಕಡೆ ಮುಖ ಮಾಡಿದ್ದಾರೆ. ಮಹಿಳೆ ಆಕಾಶದ ಕಡೆ ಮುಖ ತಿರುಗಿಸಿದ್ದಾಳೆ, ಪುರುಷ ಆಕೆಯ ಕೈ ಹಿಡಿದು ಮುನ್ನಡೆಸುತ್ತಿರುವಂತೆ ಇದೆ. ಪುರುಷನು ಮಗುವನ್ನು ತನ್ನ ಬಲಿಷ್ಠ ತೋಳಿನ ಮೇಲೆ ಕೂರಿಸಿಕೊಂಡಿದ್ದಾನೆ.
ಈ ಪ್ರತಿಮೆಯು ಅಮೆರಿಕದ ಸ್ವಾತಂತ್ರ್ಯ ದೇವತೆಯ ಪ್ರತಿಮೆಗಿಂತಲೂ ಎತ್ತರವಾಗಿದೆ. ಇದನ್ನು ಉತ್ತರ ಕೊರಿಯಾದ ನಿರ್ಮಾಣ ಕಂಪನಿಯೊಂದು ನಿರ್ಮಿಸಿದೆ. ಪ್ರವಾಸಿಗರು, ಸ್ಮಾರಕದ ಒಳಗಿನಿಂದ, ಪುರುಷನ ಪ್ರತಿಮೆಯ ತಲೆಯ ಭಾಗದವರೆಗೂ ಹೋಗಿ, ಸಮುದ್ರವನ್ನು ನೋಡಿ ಬರಬಹುದು.
ಇದನ್ನು ಹಿಂದಿನ ಸೋವಿಯತ್ ಒಕ್ಕೂಟದ ಸಮಾಜವಾದಿ ಸ್ಮಾರಕಗಳನ್ನು ಮಾದರಿಯಾಗಿ ಇರಿಸಿಕೊಂಡು ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.