ADVERTISEMENT

 ಪಂಚವರ್ಣಿ ಏಕವ್ಯಕ್ತಿ ನಾಟಕ ಪ್ರದರ್ಶನ ಇದೇ 30ರಂದು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 22:02 IST
Last Updated 25 ಅಕ್ಟೋಬರ್ 2024, 22:02 IST
ಡಾ. ಮೀರಾ ಹೆಚ್ ಎನ್
ಡಾ. ಮೀರಾ ಹೆಚ್ ಎನ್   

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರಾಯೋಜಿಸುತ್ತಿರುವ ಡಾ. ಮೀರಾ ಹೆಚ್.ಎನ್ ಅವರ ‘ಪಂಚವರ್ಣಿ’ ಏಕವ್ಯಕ್ತಿ ನಾಟಕ ಪ್ರದರ್ಶನವು ಇದೇ 30ರಂದು ಮಲ್ಲೇಶ್ವಂನ  ಎಮ್.ಎಲ್.ಎ. ಕಾಲೇಜಿನ ಸಭಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ.

ಈ ನಾಟಕವು ಈ ಶತಶತಮಾನಗಳ ಹಾಗೂ ಪ್ರಸ್ತುತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಣ್ಣ ಪ್ರಯತ್ನವಾಗಿದೆ.

‘ಪಂಚವರ್ಣಿ’ ನಾಟಕವು ದ್ರೌಪದಿಯ ಬದುಕಿನ ಆಯ್ಕೆಗಳ ಅಂತರಂಗ - ಬಹಿರಂಗವಾದರೂ, ಇಂದಿನ ಎಲ್ಲ ಹೆಣ್ಣುಮಕ್ಕಳಿಗೂ ಅನ್ವಯಿಸಬಹುದಾದ ಸಾರ್ವಕಾಲಿಕ ಸತ್ಯದ ಅನಾವರಣವಿದೆ.

ADVERTISEMENT

ಕಾಜಾಣ ಪ್ರಸ್ತುತಿಯಾದ ಈ ಏಕವ್ಯಕ್ತಿ ದೃಶ್ಯರೂಪಕದ ಸಾಹಿತ್ಯ ರಚನೆ, ವಿನ್ಯಾಸ ಹಾಗೂ ನಿರ್ದೇಶನವನ್ನು ಖ್ಯಾತ ಸಾಹಿತಿ ಹಾಗೂ ರಂಗನಿರ್ದೇಶಕ ಡಾ. ಬೇಲೂರು ರಘುನಂದನ್ ಮಾಡಿದ್ದು, ಡಾ. ಮೀರಾ  ಎಚ್. ಎನ್ ಅಭಿನಯಿಸಲಿದ್ದಾರೆ. ಈ ಪ್ರಯೋಗಕ್ಕೆ ಶ್ರೀನಿವಾಸ್ ಪಿ.ಎಚ್. ಅವರ ಹಿನ್ನೆಲೆ ಗಾಯನ ಹಾಗೂ ಸಂಗೀತವಿದ್ದು, ರವಿಶಂಕರ್ ಅವರ ಬೆಳಿಕಿನ ವಿನ್ಯಾಸ ಹಾಗೂ ‌ಶ್ರೀನಿ ಸಂಪತ್ ಲಕ್ಷ್ಮಿಯವರ ಸಂಗೀತ ನಿರ್ವಹಣೆ ಇದೆ.

ಡಾ. ಮೀರಾ ಎಚ್. ಎನ್. ಮೂಲತಃ ತುಮಕೂರಿನವರಾಗಿದ್ದು, ವೃತ್ತಿಯಲ್ಲಿ ಅಧ್ಯಾಪಕಿ, ಪ್ರವೃತ್ತಿಯಿಂದ ಬಹು ಆಯಾಮದ ಕಲಾವಿದೆ‌. ಶೇಶಾದ್ರಿಪುರಂ ಕಾಲೇಜಿನ ಪ್ರಾಂಶುಪಾಲೆಯಾಗಿ ಕೆಲಸ ನಿರ್ವಹಿಸಿದ ಇವರು, ಈಗ ಎಮ್.ಎಲ್‌.ಎ ಕಾಲೇಜಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಾಪಕಿಯಾಗಿದ್ದಾರೆ. ಮುಕ್ತ, ಮಂಥನ, ಮಗಳು ಜಾನಕಿ ಇತ್ಯಾದಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಇವರು ಕೂಚುಪುಡಿ ನೃತ್ಯಗಾತಿಯೂ ಹೌದು. ‘ಪಂಚವರ್ಣೆ' ಇವರ ಅಭಿನಯದ ಮೊದಲ ಏಕವ್ಯಕ್ತಿ ರಂಗಪ್ರಸ್ತುತಿ.

 ಪಂಚವರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.