2020ರ ಹತ್ತು ತಿಂಗಳುಗಳನ್ನು ಕೊರೊನಾ ವೈರಸ್ ಮಂಕಾಗಿಸಿದೆ. ಸಂದ ವರ್ಷದ ನೋವುಗಳನ್ನು ಮರೆತು ಹೊಸ ಭರವಸೆಯ ಬೆಳಕಿನೊಂದಿಗೆ ವಿನೂತನ ರೀತಿಯಲ್ಲಿ 2021ರ ಆಗಮನವನ್ನು ಸ್ವಾಗತಿಸಲು ಪ್ರಜಾವಾಣಿಯು ವಿಶೇಷ ಫೇಸ್‌ಬುಕ್ಪ್ರಸಾರ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಇದು ಸಂಭ್ರಮಿಸುವ ಕಾಲ ಅಲ್ಲ. ಆದರೆ ಕೊರೊನಾ ದಾಳಿಯಿಂದ ಮುದುಡಿದಮನಗಳಿಗೆ ಭರವಸೆ ತುಂಬುವ ನಿಟ್ಟಿನಲ್ಲಿ ಡಿಸೆಂಬರ್ 31ರ ಸಂಜೆಯಿಂದ ಮಧ್ಯರಾತ್ರಿವರೆಗೂ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ (Fb.com/prajavani.net) ಕಲಾವಿದರು ಭರವಸೆಯ ಸಂದೇಶವನ್ನು ಸಾರಲಿದ್ದಾರೆ.
ಡಿ.31ರ ಸಂಜೆ 7ರಿಂದ ಕವಿ ಎಚ್.ಡುಂಡಿರಾಜ್ ಅವರ ಹನಿಗವನಗಳ ರಸದೌತಣ, ಬೆಳಗಾವಿಯ ಚೌಡಿಕೆ ಮೇಳ, ಅಮೆರಿಕದಿಂದ ಗೀತ ಗಾಯನ, ಇಂಪು ಸಂಗೀತ ಸಂಸ್ಥೆಯ ಇಂಪಾದ ಗೀತೆಗಳು, ಅಂಧ ಮಕ್ಕಳಿಂದ ನೃತ್ಯರೂಪಕ ಹಾಗೂ ಕೊನೆಯಲ್ಲಿ ಅರಸೀಕೆರೆಯ 'ಚಿಟ್ ಮೇಳ' - ಇವುಗಳು ಕನ್ನಡಿಗರ ಮನಕ್ಕೆ ಸಾಂತ್ವನ ನೀಡಲಿವೆ. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಸಂಘಟನೆಯಲ್ಲಿ ರೂಪುಗೊಂಡ ಈ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ:
ಮಂಗಳವಾರ, 31ನೇ ಡಿಸೆಂಬರ್ 2020
ಸಂಜೆ 7 ರಿಂದ 7.45: ಕವಿ ಎಚ್.ಡುಂಡಿರಾಜ್ ಅವರ Honeyಗವನಗಳ ರಸದೌತಣ, ನಗುವಿನ ತೋರಣ.
ರಾತ್ರಿ 7.45 ರಿಂದ 8.30:ಪ್ರಜಾವಾಣಿ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ 5.30 ಲಕ್ಷ ಮಂದಿ ವೀಕ್ಷಿಸಿದ ಕಾರ್ಯಕ್ರಮ ನೀಡಿದ, ಅಂತರರಾಷ್ಟ್ರೀಯ ಚೌಡಿಕೆ ಕಲಾವಿದೆ, ಬೆಳಗಾವಿಯ ಅಥಣಿಯ ಕೆ.ರಾಧಾ ಬಾಯಿ ಮತ್ತು ತಂಡದಿಂದ ಚೌಡಿಕೆ ಮೇಳ.
ರಾತ್ರಿ 8.30 ರಿಂದ 10.00:ಅಮೆರಿಕದ ವರ್ಜೀನಿಯಾದ ರಿಚ್ಮಂಡ್‌ನಿಂದ ಸೌಮ್ಯಾ ಕೃಷ್ಣ ಅವರಿಂದ 'ನಿನ್ನ ಬಾಂದಳದಂತೆ ನನ್ನ ಮನವಿರಲಿ' - ಸಮಸ್ತ ಕನ್ನಡಿಗರಿಗೆ ವಿವಿಧ ಕವಿಗಳ ಕಾವ್ಯ ಗಾಯನದ ಮೂಲಕ ಶುಭ ಹಾರೈಕೆ.
ರಾತ್ರಿ 10ರಿಂದ 11.20:ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಕರನ್ನು ಸೆಳೆದ ಇಂಪು ಸಂಗೀತ ಸಂಸ್ಥೆಯ ಶೈಲಜಾ, ಎಚ್.ಆರ್.ಕೆ.ಪ್ರಸಾದ್ ಮತ್ತು ಕಿಶೋರ್ ಅವರಿಂದ, 'ಕನ್ನಡ ಚಿತ್ರ ರಂಗದ ಎಂದೂ ಮರೆಯಲಾಗದ ಗೀತೆಗಳು'.
ರಾತ್ರಿ 11.20 ರಿಂದ 12 ಮಧ್ಯರಾತ್ರಿ:ಭಾರತ್ ನಗರದ ದೀಪಾ ಅಂಧಮಕ್ಕಳ ಶಾಲೆಯ ಸದಸ್ಯರಿಂದ "ಒಂದೇ ವೃಕ್ಷದ ಕೊಂಬೆಗಳು ನಾವು" ವಿಶೇಷ ನೃತ್ಯ ರೂಪಕ. ಕೋರಿಯೋಗ್ರಫಿ ಮತ್ತು ನಿರ್ದೇಶನ ಡಾ.ಸುಪರ್ಣಾ ವೆಂಕಟೇಶ್, ತಾಂತ್ರಿಕ ನಿರ್ದೇಶಕರು ಸಾಯಿ ವೆಂಕಟೇಶ್. ಸಿ.ಅಶ್ವಥ್ ಸಂಗೀತ ನೀಡಿದ್ದ ಜಿಎಸ್ಎಸ್ ಅವರ ಕವಿತೆಗಳಿಗೆ ಈ ಪ್ರತಿಭಾನ್ವಿತರು ಹೆಜ್ಜೆ ಹಾಕಲಿದ್ದಾರೆ. ನಿರೂಪಣೆ: ಸುಷ್ಮಾ, ನಿರ್ಮಾಣ: ಶಾಂತಾರಾಮ್.
2021ರ ಗಂಟೆ 00-00 ರಿಂದ 00.45:ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ 3.20 ಲಕ್ಷಕ್ಕೂ ಹೆಚ್ಚು ಮಂದಿ ಆನಂದಿಸಿದ ಕಾರ್ಯಕ್ರಮ ಪ್ರಸ್ತುತಪಡಿಸಿದ ಅರಸೀಕೆರೆಯ ಕುಮಾರಯ್ಯ ಮತ್ತು ತಂಡದವರಿಂದ ದೇಶೀ ವಾದ್ಯಗಳ 'ಚಿಟ್ ಮೇಳ'. ನಿರೂಪಣೆ: ಸುಮಾ ಪ್ರಸಾದ್, ಚಿಕ್ಕಮಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.