ADVERTISEMENT

ತಾಮರಾ – ಚಿತ್ರಕಲಾ ಪ್ರದರ್ಶನ

ಹರವು ಸ್ಫೂರ್ತಿ
Published 5 ಜುಲೈ 2020, 19:30 IST
Last Updated 5 ಜುಲೈ 2020, 19:30 IST
ಸದಾನಂದ, ಕಲಾವಿದ
ಸದಾನಂದ, ಕಲಾವಿದ   

ಕೊರೊನಾಲಾಕ್‌ಡೌನ್‌ ಅವಧಿಯಲ್ಲಿ ಸೊರಗಿದ್ದ ಚಿತ್ರ ಕಲಾ ಪ್ರದರ್ಶನಗಳು ಈಗ ಒಂದೊಂದಾಗಿ ಚೇತರಿಸಿಕೊಳ್ಳಲಾರಂಭಿಸಿವೆ. ಕಲಾವಿದ ಪಿ.ಕೆ.ಸದಾನಂದ ಅವರು ‘ತಾಮರಾ – ದ ಜೆನೆಸಿಸ್‌ ಆಫ್ ನೇಚರ್‌‘ ಹೆಸರಿನಲ್ಲಿ ನಿಸರ್ಗದೊಳಗಿನ ಅಧ್ಯಾತ್ಮ ಮತ್ತು ಶಾಂತಿಯನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಸಂದೀಪ್‌ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್‌ ಸಹಯೋಗದಲ್ಲಿಬೆಂಗಳೂರಿನ ಅಶೋಕ ನಗರದ, ಶಾಂತಲಾ ನಗರದ 7ನೇ ಅಡ್ಡರಸ್ತೆಯಲ್ಲಿರುವಜಿ– ಗ್ಯಾಲರಿಯಲ್ಲಿ ಈ ಕಲಾ ಪ್ರದರ್ಶನ ಆರಂಭವಾಗಿದೆ.

ಈ ಚಿತ್ರಕಲಾ ಪ್ರದರ್ಶನದಲ್ಲಿ ಶುದ್ಧತೆ, ಜ್ಞಾನೋದಯ ಮತ್ತು ಪುನರ್ಜನ್ಮ ಇವುಗಳ ಸಂಕೇತವನ್ನು ವ್ಯಕ್ತಪಡಿಸುವ ಕಮಲದ ಹೂವುಗಳ ಚಿತ್ರಗಳಿವೆ. ಗೀತಾಂಜಲಿ ಫೌಂಡೇಷನ್ ಜತೆ ಚಿತ್ರಕಲಾ ಪ್ರದರ್ಶನದ ಬಗ್ಗೆ ಚರ್ಚಿಸಿ, ಈ ಪ್ರದರ್ಶನಕ್ಕಾಗಿಯೇ ಹೊಸ ಕಲಾಕೃತಿಗಳನ್ನು ರಚಿಸಿದ್ದಾರೆ ಸದಾನಂದ ಅವರು. ಒಟ್ಟಾರೆ 10 ಕಲಾಕೃತಿಗಳು ಕಲಾಸಕ್ತರ ಭೇಟಿಗಾಗಿ ಕಾದಿವೆ.

ADVERTISEMENT

’ಈ ಚಿತ್ರಗಳನ್ನು ರಚಿಸಲು ಸುಮಾರು 30 ವರ್ಷಗಳಿಂದ ಬೌದ್ಧ ಧಾರ್ಮಿಕ ಕಲೆಗಳ ಬಗ್ಗೆ ಅಧ್ಯಯನಕ್ಕಾಗಿ ಅಜಂತಾ ಮತ್ತು ಎಲ್ಲೋರಾ ಗುಹೆಗಳಿಗೆ ಭೇಟಿ ನೀಡಿದ್ದೆ. ಅಲ್ಲಿನ ಶಿಲ್ಪಗಳು ಕಮಲದ ಹೂವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ’ಕಲೆಯಲ್ಲಿ ಕಮಲದ ಹೂ‘ ಕುರಿತುಹೆಚ್ಚಿನ ಹುಡುಕಾಟ ನಡೆಸಿದೆ. ಕಮಲಕ್ಕೆ ನಿರ್ದಿಷ್ಟ ತತ್ವಗಳು ಮತ್ತು ವ್ಯಕ್ತಿತ್ವವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅದರ ಫಲವೇ ಈ ಚಿತ್ರಕಲಾ ಪ್ರದರ್ಶನ‘ ಎನ್ನುತ್ತಾರೆ ಸದಾನಂದ.

ಸದಾನಂದ ಅವರು ಚಿತ್ರ ಕುಸುರಿಯಲ್ಲಿ ಕಮಲದ ಹೂವನ್ನು ಮನಸ್ಸಿನ ಸಂಕೇತವಾಗಿ ಬಳಸಿದ್ದಾರೆ. ಚಿತ್ರಗಳಿಗೆ ಬಳಸಿರುವ ಬಣ್ಣಗಳ ಮೂಲಕವೂ ಕಲಾಸಕ್ತರಿಗೆ ವಿಷಯವನ್ನು ಸಂವಹನ ಮಾಡುತ್ತವೆ. ಚಿತ್ರಗಳ ಹಿನ್ನೆಲೆಗೆ ಬಳಸಿರುವ ನೀಲಿಬಣ್ಣ ಅನಂತ, ಸ್ಥಿರ ಹಾಗೂ ಶಾಂತಿಯನ್ನು ಸಂಕೇತಿಸುತ್ತವೆ.

ಈ ಹಿಂದೆ ತೈಲ ವರ್ಣ ಹಾಗೂಟೆಂಪೆರಾ ವರ್ಣ (ಮರದ ಮೇಲೆ ಚಿತ್ರ ರಚಿಸಲು ಬಳಸುವ ಬಣ್ಣ) ಹಾಗೂ ಇತರೆಮಿಶ್ರ ಮಾಧ್ಯಮವನ್ನು ಕಲಾಕೃತಿ ರಚಿಸಲು ಬಳಸುತ್ತಿದ್ದರು ಸದಾನಂದ. ಇತ್ತೀಚಿಗೆ ದೆಹಲಿ, ಜೈಪುರ, ಕೋಲ್ಕತಾ ಮತ್ತು ನ್ಯೂಯಾರ್ಕ್‌ನಿಂದ ತರಿಸಿದ ನೈಸರ್ಗಿಕ ಬಣ್ಣಗಳಿಂದ ಕೃತಿಗಳು ರಚಿಸುತ್ತಿದ್ದಾರೆ. ಮನಸ್ಸು, ಪ್ರಕೃತಿ ಮತ್ತು ಅಧ್ಯಾತ್ಮವನ್ನು ಚಿತ್ರಿಸಿರುವ ಈ ಸರಣಿ ಕಲಾಕೃತಿಗಳಿಗೆ ನೈಸರ್ಗಿಕ ಬಣ್ಣವನ್ನೇ ಬಳಸಿದ್ದಾರೆ.

ಚಿತ್ರಕಲಾ ಪ್ರದರ್ಶನದ ಸ್ಥಳ: ಜಿ– ಗ್ಯಾಲರಿ, 7ನೇ ಅಡ್ಡ ರಸ್ತೆ, ಶಾಂತಲಾ ನಗರ, ಅಶೋಕ ನಗರ.

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.