ಶಿಶುನಾಳ ಶರೀಫಜ್ಜನ ತತ್ವಪದದಂತೆ ನೀನಾರಿಗಲ್ಲದವಳು ಬಿದಿರು ಎಂಬುದರ ದರ್ಶನವೇ ಇಲ್ಲಿದೆ. ಹುಟ್ಟಿದ ಹಸುಗೂಸನ್ನು ಇಡುವ ಮೊರ, ಬಾಗಿನ ನೀಡುವ ಮೊರದಿಂದ ಆರಂಭವಾಗಿ, ರೊಟ್ಟಿಬುಟ್ಟಿ, ತರಕಾರಿ ಬುಟ್ಟಿ, ಕೋಳಿಮಂಕರಿ, ಹೂಬುಟ್ಟಿ ಬದುಕಿನ ಬುತ್ತಿಯನ್ನೇ ಮುಚ್ಚಟೆಯಿಂದ ಕಾದಿಡುವ ವಿವಿಧ ಬುಟ್ಟಿಗಳು. ಜೀವನದ ಜಾತ್ರೆಯಲ್ಲಿ ಮೇಲೇರಲು ಏಣಿಗಳು, ಆಲಂಕಾರಿಕ ವಸ್ತುವೈವಿಧ್ಯಗಳೊಂದಿಗೆ ಮೈಮನ ಹಗುರಗೊಳಿಸುವ ಚಾಪೆ, ಕರ್ಟನ್‌ಗಳು. ಮಳೆಗಾಲದಲ್ಲಿ ಹಿತವೆನಿಸುವ ಕಳಲೆ ಸಾರು, ಉಪ್ಪಿನಕಾಯಿಗೂ ಬಿದಿರು. ಸತ್ತರೆ ಚಟ್ಟಕ್ಕೂ ಬೇಕು. ಹುಟ್ಟಿನಿಂದಾರಂಭಿಸಿ, ಚಿರನಿದ್ರೆಯ ತನಕ ಜೊತೆಗಿರುವ ಬಿದಿರಿನ ಲೋಕದ ಸುಂದರ ಚಿತ್ರಗಳನ್ನು ಸೆರೆ ಹಿಡಿದವರು ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್ ಎಂ.ಎಸ್. ಮಂಜುನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.