ಓಜೋನ್ ಪದರದ ಮಹತ್ವ
ಓಜೋನ್ ಎಂದರೇನು?
ಅದು ಆಮ್ಲಜನಕದ ಒಂದು ರೂಪ. ಅದರ ರಾಸಾಯನಿಕ ಸಂಕೇತ ‘ಓ’.
ಸಾಮಾನ್ಯ ಆಮ್ಲಜನಕಕ್ಕಿಂತ ಅದು ಹೇಗೆ ಭಿನ್ನ?
ಸಾಮಾನ್ಯ ಆಮ್ಲಜನಕವು ಎರಡು ಪರಮಾಣುಗಳನ್ನು ಒಳಗೊಂಡಿರುತ್ತದೆ. ಓಜೋನ್‌ನಲ್ಲಿ ಮೂರು ಪರಮಾಣುಗಳಿರುತ್ತವೆ.
ಓಜೋನ್ ಹೇರಳವಾಗಿ ಇರುವುದು ಎಲ್ಲಿ?
ವಾಯುಮಂಡಲದ ‘ಸ್ಟ್ರಾಟೋಸ್ಫಿಯರ್’ನಲ್ಲಿ 15ರಿಂದ 50 ಕಿ.ಮೀ. ಮೇಲ್ಮಟ್ಟದ ಪ್ರದೇಶದಲ್ಲಿ ಅದು ಯಥೇಚ್ಛವಾಗಿ ಇರುತ್ತದೆ. ಭೂಮಂಡಲದ ಜೀವಿಗಳಿಗೆ ಓಜೋನ್ ತುಂಬಾ ಮುಖ್ಯ.
ಯಾಕೆ?
ಸೂರ್ಯನಿಂದ ಹೊಮ್ಮುವ ಅಪಾಯಕಾರಿಯಾದ ಅತಿನೇರಳೆ ವಿಕಿರಣಗಳ ಬಹುಪಾಲನ್ನು ಓಜೋನ್ ಹೀರಿಕೊಳ್ಳುತ್ತದೆ. ಒಂದು ವೇಳೆ ಓಜೋನ್‌ನ ಈ ಫಿಲ್ಟರ್ ಇರದೇ ಇದ್ದರೆ ಇಷ್ಟು ಹೊತ್ತಿಗೆ ಭೂಮಿಯ ಜೀವಿಗಳೆಲ್ಲಾ ನಾಶವಾಗಿರುತ್ತಿದ್ದವು.
ದಿನದಿಂದ ದಿನಕ್ಕೆ ಓಜೋನ್ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿರುವುದು ಏಕೆ?
ಕ್ಲೋರೊಪ್ಯಿರೊ, ಇಂಗಾಲದಂಥ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಓಜೋನ್ ಪದರ ತೆಳುವಾಗುತ್ತಿದೆ ಎಂಬುದು ವಿಜ್ಞಾನಿಗಳಿಗೆ ಸ್ಪಷ್ಟವಾಗಿದೆ. ಹಾಗಾಗಿ ಆ ಪದರಕ್ಕೆ ಇನ್ನೂ ಹೆಚ್ಚು ಹಾನಿ ಮಾಡದಂತೆ ಕ್ಲೋರೊಪ್ಯಿರೊ ಹಾಗೂ ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸಲು ಸಲಹೆಗಳು ವಿಶ್ವದ ವಿವಿಧೆಡೆಯಿಂದ ಹರಿದು ಬರುತ್ತಿವೆ.
ಚಿಕಿತ್ಸೆಯಲ್ಲೂ ಓಜೋನ್ ಬಳಸುತ್ತಾರಾ?
‘ಸ್ಲಿಪ್ ಡಿಸ್ಕ್’ನಿಂದಾಗಿ ಬೆನ್ನುನೋವು ಇರುವವರಿಗೆ ಓಜೋನ್ ಚುಚ್ಚುಮದ್ದನ್ನು ನೀಡುತ್ತಾರೆ. ಹಾನಿಗಾಳಗಾದ ಬೆನ್ನುಮೂಳೆಯನ್ನು ಹಿಡಿದುಕೊಳ್ಳುವ ವೃತ್ತಾಕಾರದ ‘ಡಿಸ್ಕ್’ಗೆ ಓಜೋನ್ ಅನ್ನು ಚುಚ್ಚುಮದ್ದಿನ ಮೂಲಕ ಕೊಡುತ್ತಾರೆ. ಇದರಿಂದ ನೋವು ಬಹುತೇಕ ನಿವಾರಣೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.