ಡಾ. ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಹಾಗೂ ಬೊಳುವಾರು ಮೊಹಮ್ಮದ್ ಕುಂಞ ೨೦೦೯ರ ಲಂಡನ್ ಪುಸ್ತಕ ಮೇಳಕ್ಕೆ ಆಹ್ವಾನಿತರಾಗಿದ್ದ ಕನ್ನಡ ಬರಹಗಾರರು. ಆ ವರ್ಷ ಭಾರತ ಮೇಳದ ‘ಮಾರ್ಕೆಟ್ ಫೋಕಸ್’ ದೇಶವಾಗಿತ್ತು. ಪ್ರತೀ ವರ್ಷ ಮೇಳಕ್ಕೆ ಹೋಗುತ್ತಿದ್ದ ನಾನು ಮತ್ತು ಜೆರಾಲ್ಡೈನ್ ರೋಸ್ ಕನ್ನಡ ಲೇಖಕರನ್ನು ಭೇಟಿಯಾದೆವು. ಕೆಲವು ದಿನಗಳ ನಂತರ ಪೀಕ್ ಡಿಸ್ಟ್ರಿಕ್ಟ್ ನ್ಯಾಷನಲ್ ಪಾರ್ಕ್‌ನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ ಬೊಳುವಾರು ಮೊಹಮ್ಮದ್ ಕುಂಞ, ಮೇಘಾಲಯದ ಮಮಂಗ್ ದಾಯ್ ಹಾಗೂ ಅರುಣಾಚಲ ಪ್ರದೇಶದ ತೆಮ್ಸುಲಾ ಓ ಅವರನ್ನು ಆಹ್ವಾನಿಸಿದೆವು. ಈ ಕಾರ್ಯಕ್ರಮವನ್ನು ರೂಪಿಸುವುದರ ಹಿಂದೆ ಭಾರತದ ಲೇಖಕರಿಗೆ ಬ್ರಿಟನ್‌ನ ಹಳ್ಳಿಗಾಡು ಪ್ರದೇಶವನ್ನು ನೋಡುವ ಅವಕಾಶ ಕಲ್ಪಿಸುವುದರ ಜೊತೆಗೆ ಅಲ್ಲಿನ ಓದುಗರಿಗೆ ಭಾರತೀಯ ಲೇಖಕರ ಜೊತೆ ಸಂವಾದ ನಡೆಸುವ ಅವಕಾಶ ಕಲ್ಪಿಸುವ ಉದ್ದೇಶವಿತ್ತು.
ನಾವು ಆರಂಭಿಸಿದ ‘ಪೀಕ್ ಲಿಟರೆರಿ ಫೆಸ್ಟಿವಲ್’ನ ಭಾಗವಾಗಿ ಭಾರತದ ಕುರಿತು ಬರೆದಿದ್ದ ಬರಹಗಾರರಿಗಾಗಿ ಹಲವು ಕಾರ್ಯಕ್ರಮಗಳನ್ನು ಈ ಹಿಂದೆಯೂ ಸಂಘಟಿಸಿದ್ದೆವು. ಮಾರ್ಕ್ ಟುಲಿ,ವಿಲಿಯಮ್ ಡ್ಯಾಲ್‌ರಿಂಪಲ್, ರಾಮಚಂದ್ರ ಗುಹಾ ಹಾಗೂ ಪಿಂಕಿ ಲಿಲಾನಿ ಮುಂತಾದವರು ಭಾಗವಹಿಸಿದ್ದ ಈ ಕಾರ್ಯಕ್ರಮಗಳಲ್ಲಿ ಸುಮಾರು 150 ಮಂದಿ ಪಾಲ್ಗೊಂಡಿದ್ದರು. ನಮ್ಮ ಪುಸ್ತಕದ ಅಂಗಡಿ ಇದ್ದ ಪ್ರದೇಶದಲ್ಲಿ ಭಾರತೀಯ ಮೂಲದವರಾರೂ ವಾಸಿಸುತ್ತಿರಲಿಲ್ಲವಾದರೂ ಭಾರತದ ಬಗ್ಗೆ ಆಸಕ್ತರಾದವರ ಸಂಖ್ಯೆ ಕಡಿಮೆಯದ್ದೇನೂ ಆಗಿರಲಿಲ್ಲ. ಲೇಖಕರು ಪುಸ್ತಕಗಳಿಗೆ ಹಸ್ತಾಕ್ಷರ ಹಾಕಿ ಕೊಡುವುದೂ ನಮ್ಮ ಕಾರ್ಯಕ್ರಮದ ಒಂದು ಭಾಗವಾಗಿತ್ತಾದರೂ ಅದನ್ನು ನಡೆಸುವುದಕ್ಕೆ ನಮಗೆ ಸಾಧ್ಯವಾಗಲಿಲ್ಲ. ಏಕೆಂದರೆ ಬೊಳುವಾರು ಅವರ ಯಾವ ಪುಸ್ತಕವೂ ಇಂಗ್ಲಿಷಿನಲ್ಲಿ ಪ್ರಕಟವಾಗಿರಲಿಲ್ಲ. ಮಮಂಗ್ ಮತ್ತು ತೆಮ್ಸುಲಾ ಅವರ ಇಂಗ್ಲಿಷ್ ಕೃತಿಗಳಿದ್ದವಾದರೂ ಅವುಗಳನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ವಿತರಿಸುವವರು ಇರಲಿಲ್ಲ.
ಯಾವುದೇ ಪುಸ್ತಕ ಮೇಳದ ‘ಮಾರ್ಕೆಟ್ ಫೋಕಸ್’ನ ಉದ್ದೇಶ ಇದಕ್ಕೆ ಆಯ್ಕೆಯಾಗಿರುವ ದೇಶದ ಬರಹಗಾರರ ಕೃತಿಗಳನ್ನು ಪ್ರೋತ್ಸಾಹಿಸುವುದು. ಈ ವರ್ಷದ ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ‘ಮಾರ್ಕೆಟ್ ಫೋಕಸ್’ ಫಿನ್ಲೆಂಡ್ ದೇಶ. ಈ ವರ್ಷ ಜರ್ಮನ್
ಬೆಂಗಳೂರಿನ ಜನಸಂಖ್ಯೆಗಿಂತ ಕಡಿಮೆ ಜನರಿರುವ ದೇಶಗಳೇ ಪ್ರತೀ ವರ್ಷ ನೂರಾರು ಕೃತಿಗಳ ಅನುವಾದಕ್ಕೆ ಹಣಕಾಸು ನೆರವು ಒದಗಿಸಿ ಪ್ರೋತ್ಸಾಹಿಸುತ್ತಿವೆ. ಇದು ಕರ್ನಾಟಕ ಸರ್ಕಾರಕ್ಕೆ ಮಾದರಿಯಾಗಬೇಡವೇ? ಕನ್ನಡ ಪುಸ್ತಕ ಪ್ರಾಧಿಕಾರದಂಥ ಸಂಸ್ಥೆಗಳು ಖಾಸಗಿ ಪ್ರಕಾಶಕರ ಜೊತೆಗೆ ಸ್ಪರ್ಧಿಸಬೇಕೇ? ಅಥವಾ ಒಟ್ಟು ಪ್ರಕಟಣಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೇ? |
ಭಾಷೆಯಲ್ಲಿ ಪ್ರಕಟವಾದ ಫಿನ್ನಿಶ್ ಲೇಖಕರ ಪುಸ್ತಕಗಳ ಸಂಖ್ಯೆ 180. ಪ್ರತೀ ವರ್ಷ ಫಿನ್ನಿಶ್ ಲೇಖಕರ ಸುಮಾರು 300 ಪುಸ್ತಕಗಳು ಜಗತ್ತಿನ 40 ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಪ್ರಕಾಶಕರು ಯಾವುದಾದರೂ ಭಾಷೆಗೆ ತಮ್ಮ ಕೃತಿ ಅನುವಾದಗೊಳ್ಳಬೇಕೆಂದು ಬಯಸಿದರೆ, ಅದಕ್ಕೆ ಅಗತ್ಯವಿರುವ ಹಣಕಾಸಿನ ನೆರವನ್ನು ರಾಷ್ಟ್ರೀಯ ಬುಕ್ ಏಜೆನ್ಸಿಗಳು ಒದಗಿಸುತ್ತವೆ.
ಭಾರತದಲ್ಲಿಯೂ ಇಂಥ ಸಂಸ್ಥೆಗಳಿವೆ. ಆದರೆ ಅವು ‘ಮಾರ್ಕೆಟ್ ಫೋಕಸ್’ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ೨೦೦೬ರಲ್ಲಿ ಫ್ರಾಂಕ್‌ಫರ್ಟ್‌ನಲ್ಲಿ ಪುಸ್ತಕ ಮೇಳದ ‘ಮಾರ್ಕೆಟ್ ಫೋಕಸ್’ ಭಾರತವಾಗಿತ್ತು. ಆದರೆ ಅದರಲ್ಲಿ ಪಾಲ್ಗೊಂಡಿದ್ದ ಅನೇಕ ಭಾರತೀಯ ಲೇಖಕರ ಕೃತಿಗಳು ಅಲ್ಲಿ ಲಭ್ಯವಿರಲಿಲ್ಲ. ಇದಕ್ಕೊಂದು ಕಾರಣ ಅನೇಕರ ಕೃತಿಗಳು ಅನುವಾದಗೊಳ್ಳದೇ ಇರುವುದು. ಅನುವಾದಗೊಂಡಿದ್ದರೂ ಅದನ್ನು ಪ್ರಚಾರ ಮಾಡುವ ವ್ಯವಸ್ಥೆ ಇಲ್ಲದಿರುವುದು. ಆದ್ದರಿಂದ ಭಾರತೀಯ ಕೃತಿಗಳಿಗೆ ಆಯಾಚಿತವಾಗಿ ಒದಗಿ ಬಂದಿದ್ದ ಒಂದು ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಇವತ್ತಿಗೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಲಂಡನ್ ಪುಸ್ತಕ ಮೇಳದಲ್ಲಿ ಈ ವರ್ಷ ಎನ್‌ಬಿಟಿ (ನ್ಯಾಷನಲ್ ಬುಕ್ ಟ್ರಸ್ಟ್) ಅಥವಾ ಸಾಹಿತ್ಯ ಅಕಾಡೆಮಿಗಳು ಸಕ್ರಿಯವಾಗಿ ಭಾಗವಹಿಸಲೇ ಇಲ್ಲ. ಸಾಹಿತ್ಯ ಅಕಾಡೆಮಿಯು ತನ್ನ ‘ವಿದೇಶಗಳಲ್ಲಿ ಭಾರತೀಯ ಸಾಹಿತ್ಯ’ ಯೋಜನೆಯಡಿ ಎರಡು–ಮೂರು ಪುಸ್ತಕಗಳನ್ನು ಅನುವಾದಿಸಿ ವಿದೇಶೀ ಪ್ರಕಾಶಕರ ಮೂಲಕ ಪ್ರಕಟಿಸುವ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಅದರ ಕಾರ್ಯದರ್ಶಿ ಶ್ರೀನಿವಾಸ್ ಹೇಳುತ್ತಾರೆ. ನ್ಯಾಶನಲ್ ಬುಕ್ ಟ್ರಸ್ಟ್ ಕಳೆದ ವರ್ಷ ಒಂದು ಪುಸ್ತಕದ ಅನುವಾದಕ್ಕೆ ಧನಸಹಾಯ ಮಾಡಿದೆ.
ನಾವು ೨೦೦೯ರಲ್ಲಿ ಯು.ಕೆ.ಯಲ್ಲಿ ಪುಸ್ತಕ ಪ್ರಕಟಣಾ ಸಂಸ್ಥೆಯನ್ನು ಆರಂಭಿಸಿದಾಗಲೇ ಭಾರತೀಯ ಕೃತಿಗಳ ಅನುವಾದವನ್ನೂ ನಮ್ಮ ವ್ಯವಹಾರದ ಭಾಗವಾಗಿಸಿಕೊಂಡೆವು. ಇದರಂತೆ ಬೊಳುವಾರು ಮೊಹಮ್ಮದ್ ಕುಂಞ ಅವರ ‘ಪಾಪು ಗಾಂಧಿ–ಬಾಪು ಗಾಂಧಿ ಆದ ಕಥೆ’ ಕೃತಿಯನ್ನು ಅನುವಾದಿಸಿ ಇಂಗ್ಲಿಷಿನಲ್ಲಿ ಪ್ರಕಟಿಸಲು ತೀರ್ಮಾನಿಸಿದೆವು. ೨೦೧೧ರಲ್ಲಿ ಪ್ರಕಟವಾಗಿದ್ದ ಮೂಲ ಕೃತಿಯನ್ನು ಆರ್ಯ ಅನುವಾದಿಸಿದರು. ಜೆರಾಲ್ಡಿನ್ ರೋಸ್ ಅದನ್ನು ಸಂಪಾದಿಸಿದರು. ಡಾ.ಯು.ಆರ್. ಅನಂತಮೂರ್ತಿ ಅದನ್ನು ಅನಾವರಣಗೊಳಿಸಿದರು. ಅದಕ್ಕೆ ಈ ವರ್ಷ ‘ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ ಬಂತು. ಬೊಳುವಾರರ ಸಣ್ಣ ಕಥೆಗಳ ಅನುವಾದ ಕೂಡ ಮುದ್ರಣಕ್ಕೆ ಸಿದ್ಧಗೊಂಡಿದೆ. ಅವರ ಸಾವಿರಕ್ಕೂ ಮಿಕ್ಕ ಪುಟಗಳ, ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿಡೀ ಸಂಚರಿಸುವ ಬೃಹತ್ ಕಾದಂಬರಿ ಕೂಡ ಅನುವಾದಗೊಳ್ಳುತ್ತಿದೆ. ಇಷ್ಟೇ ಅಲ್ಲದೆ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ ಮತ್ತು ಮಮತಾ ಸಾಗರ ಅವರ ಪುಸ್ತಕಗಳ ಇಂಗ್ಲಿಷ್ ಅನುವಾದಗಳನ್ನೂ ಪ್ರಕಟಿಸಿದ್ದೇವೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ದೇವನೂರು ಮಹದೇವ ಅವರ ‘ಎದೆಗೆ ಬಿದ್ದ ಅಕ್ಷರ’, ವೈದೇಹಿ ಅವರ ‘ಗುಲಾಬಿ ಟಾಕೀಸ್’ ಮತ್ತಿತರ ಕೃತಿಗಳ ಅನುವಾದದ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಅವೆಲ್ಲಾ ಪ್ರಕಟಗೊಳ್ಳಬೇಕಿದೆ.
ಕಳೆದ ಶತಮಾನದ ಶ್ರೇಷ್ಠ ಕಾದಂಬರಿ ಎಂದು ಅನೇಕ ಬರಹಗಾರರು ಬಣ್ಣಿಸಿದ, 1967ರಲ್ಲಿ ಪ್ರಕಟಗೊಂಡ ‘ಮಲೆಗಳಲ್ಲಿ ಮದುಮಗಳು’ ಕೃತಿ ಮುಂದಿನ ವರ್ಷ ಇಂಗ್ಲಿಷ್‌ನಲ್ಲಿ ಲಭ್ಯವಾಗಲಿದೆ. ಇಂಥ ಕೃತಿ ಇಂಗ್ಲಿಷ್‌ನಲ್ಲಿ ಪ್ರಕಟಗೊಳ್ಳಲು ನಾಲ್ಕು ದಶಕಗಳು ಬೇಕಾಯಿತೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಅನುವಾದ ಸಂಸ್ಕೃತಿ ಮತ್ತು ಅದರ ಹಿಂದಿನ ರಾಜಕೀಯವನ್ನೂ ಗಮನಿಸಬೇಕಿದೆ. ಇದು 1913ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ದೊರೆತ ನಂತರ ಭಾರತದ ಯಾವುದೇ ಲೇಖಕನಿಗೆ ನೊಬೆಲ್ ಪ್ರಶಸ್ತಿ ಯಾಕೆ ಸಂದಿಲ್ಲ ಎಂಬ ಸಂಗತಿಯ ಮೇಲೂ ಇದು ಬೆಳಕು ಚೆಲ್ಲುತ್ತದೆ. ಭಾರತೀಯ ಭಾಷೆಗಳಲ್ಲಿ ಸೊಗಸಾಗಿ ಬರೆದಿರುವ ಇನ್ನೂ ಅನೇಕರ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ, ಪ್ರಕಟಿಸಿ, ಪ್ರೋತ್ಸಾಹ ನೀಡಬೇಕಿದೆ. ಇತರ ಅಂತಾರಾಷ್ಟ್ರೀಯ ಪ್ರಕಾಶಕರಿಗೆ ಈ ಕೃತಿಗಳ ಕುರಿತು ಅರಿವು ಮೂಡಿಸಿ ಅವರನ್ನು ಅನುವಾದದ ಪ್ರಕಟಣೆಯಲ್ಲಿ ತೊಡಗಿಸುವ ಲಿಟರರಿ ಏಜನ್ಸಿಯ ಕೆಲಸವನ್ನೀಗ ನಾವು ಮಾಡುತ್ತಿದ್ದೇವೆ.
ನಮ್ಮ ಬೆಂಗಳೂರಿನ ಜನಸಂಖ್ಯೆಗಿಂತ ಕಡಿಮೆ ಜನರಿರುವ ದೇಶಗಳೇ ಪ್ರತೀ ವರ್ಷ ನೂರಾರು ಕೃತಿಗಳ ಅನುವಾದಕ್ಕೆ ಹಣಕಾಸು ನೆರವು ಒದಗಿಸಿ ಪ್ರೋತ್ಸಾಹಿಸುತ್ತವಿದೆ. ಇದು ಕರ್ನಾಟಕ ಸರ್ಕಾರಕ್ಕೂ ಮಾದರಿಯಾಗಬೇಡವೇ? ಅಖಿಲ ಭಾರತ ಮಟ್ಟದಲ್ಲಿರುವ ಸಂಸ್ಥೆಗಳ ಮರ್ಜಿಗೆ ಕಾಯದೆ ಕೆಲಸ ಮಾಡುವ ಒಂದು ವಿಧಾನವನ್ನು ಕರ್ನಾಟಕ ಸರ್ಕಾರ ಈ ಮೂಲಕ ತೋರಿಸಿಕೊಡಬಹುದು. ಕನ್ನಡ ಪುಸ್ತಕ ಪ್ರಾಧಿಕಾರದಂಥ ಸಂಸ್ಥೆಗಳು ಖಾಸಗಿ ಪ್ರಕಾಶಕರ ಜೊತೆಗೆ ತಾವು ಸ್ಪರ್ಧಿಸಬೇಕೇ? ಅಥವಾ ಒಟ್ಟು ಪ್ರಕಟಣಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೇ ಎಂಬುದರ ಬಗ್ಗೆ ತೀರ್ಮಾನಕ್ಕೆ ಬರಬೇಕು.
ವಿಶ್ವವಿದ್ಯಾಲಯಗಳು ಹೊರಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಅನುವಾದ, ಅನುವಾದ ಸಂಬಂಧಿ ಅಧ್ಯಯನ ಹಾಗೂ ತೌಲನಿಕ ಸಾಹಿತ್ಯದ ಅಧ್ಯಯನವನ್ನು ಉತ್ತೇಜಿಸಬೇಕು. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ತೌಲನಿಕ ಅಧ್ಯಯನವು ಅಲ್ಲಿನ ಕನ್ನಡ ವಿದ್ಯಾರ್ಥಿಗಳ ಪಠ್ಯದ ಐಚ್ಛಿಕ ಭಾಗವಾಗಿ ಉಳಿದಿಲ್ಲ. ಇಂಥ ವಿಷಯಗಳಲ್ಲಿ ಬದಲಾವಣೆಗೆ ಕೇವಲ ಸರ್ಕಾರ ಸಂಸ್ಥೆಗಳನ್ನು ಅವಲಂಬಿಸುವುದರಿಂದ ಪ್ರಯೋಜನವಿಲ್ಲ. ಬರಹಗಾರರು, ಅನುವಾದಕರು ಹಾಗೂ ಪ್ರಕಾಶಕರು ಸೇರಿದಂತೆ ಆಸಕ್ತರು ಒಗ್ಗೂಡಿ ಈ ಸಮಸ್ಯೆ ಬಗೆಹರಿಸಲು ಒಂದು ಕಾರ್ಯತಂತ್ರವನ್ನು ರೂಪಿಸಬೇಕು. ಆಗಷ್ಟೇ ಅನುವಾದದಲ್ಲಿ ಪ್ರಗತಿ ಸಾಧಿಸಲು ಸಾಧ್ಯ.
ತಮಿಳು, ಮಲಯಾಳಂ, ಮರಾಠಿ ಹಾಗೂ ಬಂಗಾಳಿ ಸಂಸ್ಕೃತಿಯಲ್ಲಿ ಓದುಗ ಸಮುದಾಯವು ಪುಸ್ತಕಗಳನ್ನು ಖರೀದಿಸುವ ಮೂಲಕ ಪ್ರಕಾಶಕ ವಲಯವು ಆರೋಗ್ಯದಿಂದ ಇರುವಂತೆ ಮಾಡಿದ್ದು, ಇದರಿಂದ ಕರ್ನಾಟಕ ಕೂಡ ಕಲಿಯುವುದು ಇದೆ. ‘ಬೆಂಗಳೂರು ಪುಸ್ತಕ ಮೇಳ’ವನ್ನು ಕಳೆದ ವರ್ಷ ರದ್ದುಪಡಿಸಲಾಯಿತು. ಅದಕ್ಕೂ ಹಿಂದಿನ ವರ್ಷ ಅಲ್ಲಿ ನಮ್ಮ ಮಳಿಗೆಯಿತ್ತು. ಮೇಳಕ್ಕೆ ಬಂದವರ ಸ0ಖ್ಯೆ ಕಡಿಮೆ ಇದ್ದರಿ0ದ ನಮ್ಮ ಆದಾಯಕ್ಕೆ ಹೊಡೆತ ಬಿದ್ದಿತ್ತು.
ಕುಪ್ಪಳಿಯಲ್ಲಿ ಶಿಬಿರಕ್ಕೆ ಹೋದಾಗ ನಾನು ಕೆ.ಟಿ. ಶಿವಪ್ರಸಾದ್ ಅವರ ಜೊತೆ ನಂಜುಂಡಸ್ವಾಮಿ, ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯ ಜೊತೆಗಿನ ಅವರ ದಿನಗಳ ಕುರಿತು ಚರ್ಚಿಸಿದೆ. ಬಹಳ ಹಿಂದೆಯೇ ತೇಜಸ್ವಿ ಅವರಿಗೆ ಅರಿವಾಗಿದ್ದ ಸಾಂಸ್ಕೃತಿಕ ಬದಲಾವಣೆ ತಮ್ಮ ಆದ್ಯತೆ ಎಂದು ಹೇಳಿದ ಕೆ.ಟಿ. ಶಿವಪ್ರಸಾದ್, ಆ ತಿಳಿವಳಿಕೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಶಿಬಿರ ಒಂದು ಹೆಜ್ಜೆಯಾಗಿದೆ ಎಂದು ಮಾತು ಸೇರಿಸಿದರು. ಶಿಬಿರದಲ್ಲಿಯೇ ಸಾಂಸ್ಕೃತಿಕ ಬದಲಾವಣೆ ಆಗಬೇಕಿತ್ತು. ಯಾಕೆಂದರೆ, ಅಲ್ಲಿ ಉಪನ್ಯಾಸ ಕೊಟ್ಟವರಲ್ಲಾ ಪುರುಷರೇ. ಅಷ್ಟೇ ಅಲ್ಲ ಎಲ್ಲರೂ ಊಟಕ್ಕೆ ವಿಳಂಬವಾಗುವಷ್ಟು ಮಾತನಾಡುತ್ತಿದ್ದರು. ಪುರುಷ ಪ್ರಾಧಾನ್ಯದ ಈ ಸಂಸ್ಕೃತಿಗೆ ಕಳೆದ ತಿಂಗಳು ನಡೆದ ಯು.ಕೆ. ಕನ್ನಡ ಬಳಗದ ವಾರ್ಷಿಕ ಕಾರ್ಯಕ್ರಮದಲ್ಲೂ ಸಾಕ್ಷ್ಯ ಸಿಕ್ಕಿತು. ಅಲ್ಲಿಗೆ ಆಹ್ವಾನಿತರಾಗಿ ಕರ್ನಾಟಕದಿಂದ ಬಂದಿದ್ದವರೆಲ್ಲಾರೂ ಗಂಡಸರೇ. ವೇದಿಕೆ ತುಂಬಾ ಗಂಡಸರು. ಒಬ್ಬ ಭಾಷಣಕಾರರು, ‘ಕರ್ನಾಟಕವನ್ನು ನಾವು ಬಿಟ್ಟರೂ ಕನ್ನಡ ಸಂಸ್ಕೃತಿ ನಮ್ಮನ್ನು ಬಿಡುವುದಿಲ್ಲ’ ಎಂದರು! ಫ್ರಾಂಕ್‌ಫುರ್ಟ್ ಮತ್ತು ಶಾರ್ಜ ಪುಸ್ತಕ ಮೇಳದಲ್ಲಿ ಸಾಹಿತ್ಯ ಅಕಾಡೆಮಿಯಿಂದ ಲೇಖಕರು ಮಾತ್ರ ಆಹ್ವಾನಿತರಾಗಿದ್ದರು. ಮೊನ್ನೆ ಬೆಂಗಳೂರಿನ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲೂ ಗಂಡಸರೇ. ಇರುವ ಸಾಹಿತ್ಯ ಅಕಾಡೆಮಿಯನ್ನು ಗಂಡಸರು ವಸಾಹತೀಕರಣ ಮಾಡಿರುವದರಿಂದ ಹೆಂಗಸರಿಗೆ ಇನ್ನೊಂದು ಸಾಹಿತ್ಯ ಅಕಾಡೆಮಿಯ ಅವಶ್ಯಕತೆ ಇದೆ.
ನಮ್ಮ ತಲೆಮಾರಿನಿಂದ ಸಾಂಸ್ಕೃತಿಕ ಬದಲಾವಣೆಯನ್ನು ಬಯಸುವುದು ಸ್ವಲ್ಪ ಅತಿ ಎನ್ನಿಸಬಹುದು. ಯಾಕೆಂದರೆ, ವಸಾಹತುಶಾಹಿ ಕಾಲದ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಕ್ಲಬ್‌ಗಳ ಸದಸ್ಯತ್ವ ಹಾಗೂ ಸಾಂಸ್ಥಿಕ ಸೌಕರ್ಯಗಳನ್ನು ಪಡೆಯುವ ಮನಸ್ಸುಳ್ಳವರು ಇಲ್ಲಿದ್ದಾರೆಯೇ ವಿನಾ ವಸಾಹತೋತ್ತರ ಅಧ್ಯಯನ ಅಥವಾ ಪ್ಯಾಲಸ್ತೇನ್‌ನ ವಸಾಹತೀಕರಣದ ಕುರಿತು ಆಸಕ್ತಿ ಇರುವವರು ಇಲ್ಲ. ನಗರದಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ಚಾಲನೆ ಮಾಡಲು ಬಯಸುವ ಮನಸ್ಸುಗಳಿಗೆ ಸಾರ್ವಜನಿಕ ಸಾರಿಗೆಯ ಕುರಿತು ಒಲವಿಲ್ಲ. ನಿವೇಶನಗಳು,ಅಪಾರ್ಟ್‌ಮೆಂಟ್‌ಗಳನ್ನು ದಕ್ಕಿಸಿಕೊಳ್ಳಲು ಬಯಸುವವರಿದ್ದಾರೆಯೇ ವಿನಾ ರಿಯಲ್ ಎಸ್ಟೇಟ್ ಮಿಲಿಯನೇರ್‌ಗಳಿಂದಾಗಿ ಭೂಮಿ ಕಳೆದುಕೊಂಡ ರೈತರ ಕುರಿತು ಆಸಕ್ತಿ ಇರುವವರು ಇಲ್ಲ. ಮುಂದಿನ ತಲೆಮಾರಿನವರು ‘ರೌಂಡ್ ಟೇಬಲ್ ಇಂಡಿಯಾ.ಕಾಮ್’ ತರಹದ ಬೆಳವಣಿಗೆಗಳನ್ನು ಗಮನಿಸಿ, ಮುಖ್ಯವಾಹಿನಿ ಮಾಧ್ಯಮ ಹಾಗೂ ಪ್ರಸಕ್ತ ಮುದ್ರಣ ವ್ಯವಸ್ಥೆಯಿಂದ ಹೊರಗಿಟ್ಟ ಸಾಮಾಜಿಕ ವಲಯ ಹಾಗೂ ಸಮುದಾಯಗಳ ಕುರಿತು ಹೇಗೆ ಅರಿವು ಬೆಳಸಿ ಚರ್ಚೆ ಮಾಡಬಹುದೆಂದು ಕಲಿತುಕೊಳ್ಳಬಹುದು. ಈ ವರ್ಷ ನಡೆದ ಹತ್ತು ದಿನಗಳ ಅವಧಿಯ ಚೆನ್ನೈ ಪುಸ್ತಕ ಮೇಳಕ್ಕೆ 10 ಲಕ್ಷ ಜನ ಭೇಟಿ ನೀಡಿದರು. ಅಲ್ಲಿ 24ಲಕ್ಷ ತಮಿಳು ಪುಸ್ತಕಗಳೂ ಸೇರಿದಂತೆ 30 ಲಕ್ಷ ಪುಸ್ತಕಗಳು ಮಾರಾಟವಾಗಿ,ಸುಮಾರು 15ಕೋಟಿ ರೂಪಾಯಿಗಳ ವಹಿವಾಟು ನಡೆಯಿತು. ಮೇಳದಲ್ಲಿ ತಮಿಳು ಪುಸ್ತಕಗಳ ಮಾರಾಟದಲ್ಲಿ ಹಿಂದಿನ ಸಾಲಿಗಿಂತ ಶೇ 20ರಷ್ಟು ಏರಿಕೆಯಾಯಿತು. ಕಳೆದ ಏಳು ವರ್ಷಗಳಲ್ಲಿ ಪುಸ್ತಕ ಮಾರಾಟದ ಪ್ರಮಾಣ ಅಲ್ಲಿ ಶೇ 80ರಷ್ಟು ಏರಿಕೆಯಾಗಿದೆ. ಕೋಲ್ಕತ್ತ ಪುಸ್ತಕ ಮೇಳ, ನವದೆಹಲಿ ಪುಸ್ತಕ ಮೇಳ ಹಾಗೂ ಕೇರಳದ ಹಲವು ಪುಸ್ತಕ ಮೇಳಗಳು ಬಂಗಾಳಿ, ಹಿಂದಿ ಹಾಗೂ ಮಲಯಾಳಿ ಭಾಷೆಯ ಕೃತಿಗಳ ಮಾರಾಟಕ್ಕೆ ಸಹಾಯಕವಾಗಿವೆ. ಕೇರಳದಲ್ಲಿ ನಡೆಯುವ ‘ಎಳುತ್ತಿನಿರುತ್ತ್’ ಎಂಬ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳಿಂದ ಮೊದಲ ಅಕ್ಷರಗಳನ್ನು ಬರೆಯಿಸಿದ್ದು ಸಾಹಿತಿಗಳು. ಈ ಸಲ ಜ್ವಾನಪೀಠ ಪ್ರಶಸ್ತಿ ಪುರಸ್ಕೃತ ಎಂ.ಟಿ. ವಾಸುದೇವನ್ ನಾಯರ್ ತೃಶೂರ್ ಸಮೀಪದ ತುಂಜನ್ ಪರಂಬಿನಲ್ಲಿ ನಡೆದ‘ವಿದ್ಯಾರಂಭಂ’ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ತುಂಜನ್ ಪರಂಬಿನಲ್ಲಿ 16ನೇ ಶತಮಾನದ ಮಲಯಾಳಂ ಕವಿ ತುಂಜತ್ ಎಳುತ್ತಚ್ಚನ್ ಅವರ ಮನೆ ಇದೆ. ತುಂಜನ್ ಪರಂಬ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಎಂ.ಟಿ. ವಾಸುದೇವನ್ ನಾಯರ್ ವಾರ್ಷಿಕ ಸಾಹಿತ್ಯ ಉತ್ಸವ ಹಾಗೂ ಮತ್ತಿತರ ಕಾರ್ಯಕ್ರಮಗಳ ಮೂಲಕ ಈ ಊರನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಇದನ್ನವರು ತಮ್ಮ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಳಿಗಿಂತ ಮಿಗಿಲಾದದ್ದು ಎಂದು ಪರಿಗಣಿಸಿದ್ದಾರೆ.
ಕಲೆಯನ್ನು ಜನರು ನೋಡುವ ಬಗೆಯನ್ನೇ ಬದಲಾಯಿಸಿದ ಮಹತ್ವದ ಪುಸ್ತಕ ‘ವೇಸ್ ಆಫ್ ಸೀಯಿಂಗ್’ ಪ್ರಕಟವಾಗಿ ನಾಲ್ಕು ದಶಕಗಳು ಕಳೆದರೂ ಕನ್ನಡಕ್ಕೆ ಅನುವಾದಗೊಂಡಿರಲಿಲ್ಲ. ಕಳೆದ ವರ್ಷ ಅದನ್ನು ಎಚ್.ಎ.ಅನಿಲ್ ಕುಮಾರ್ ಕನ್ನಡಕ್ಕೆ ಅನುವಾದಿಸಿದರು. ಸಮಾಜದ ಸಾಂಸ್ಕೃತಿಕ ಹಾಗೂ ರಾಜಕೀಯ ಸಂವಾದಕ್ಕೆ ಇಂಬುಗೊಡುವಂಥ ಅನೇಕ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಳ್ಳಬೇಕಾದ ಅಗತ್ಯವಿದೆ. ಇವು ನಮ್ಮ ಆಧುನಿಕ ಸಂಸ್ಥಾನಗಳ ಅಡಿಯಲ್ಲಿ ಇರುವ ಪಟ್ಟಭದ್ರ ವಿದ್ವಾಂಸರು ಹಾಕಿಕೊಡುತ್ತಿರುವ ಬೌದ್ಧಿಕ ಚೌಕಟ್ಟುಗಳಿಂದ ನಮ್ಮನ್ನು ಸ್ವತಂತ್ರಗೊಳಿಸಿಕೊಳ್ಳಲು ಅಗತ್ಯ.
ಮುಖ್ಯಡಾ. ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಹಾಗೂ ಬೊಳುವಾರು ಮೊಹಮ್ಮದ್ ಕುಂಞ ೨೦೦೯ರ ಲಂಡನ್ ಪುಸ್ತಕ ಮೇಳಕ್ಕೆ ಆಹ್ವಾನಿತರಾಗಿದ್ದ ಕನ್ನಡ ಬರಹಗಾರರು. ಆ ವರ್ಷ ಭಾರತ ಮೇಳದ ‘ಮಾರ್ಕೆಟ್ ಫೋಕಸ್’ ದೇಶವಾಗಿತ್ತು. ಪ್ರತೀ ವರ್ಷ ಮೇಳಕ್ಕೆ ಹೋಗುತ್ತಿದ್ದ ನಾನು ಮತ್ತು ಜೆರಾಲ್ಡೈನ್ ರೋಸ್ ಕನ್ನಡ ಲೇಖಕರನ್ನು ಭೇಟಿಯಾದೆವು. ಕೆಲವು ದಿನಗಳ ನಂತರ ಪೀಕ್ ಡಿಸ್ಟ್ರಿಕ್ಟ್ ನ್ಯಾಷನಲ್ ಪಾರ್ಕ್‌ನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ ಬೊಳುವಾರು ಮೊಹಮ್ಮದ್ ಕುಂಞ, ಮೇಘಾಲಯದ ಮಮಂಗ್ ದಾಯ್ ಹಾಗೂ ಅರುಣಾಚಲ ಪ್ರದೇಶದ ತೆಮ್ಸುಲಾ ಓ ಅವರನ್ನು ಆಹ್ವಾನಿಸಿದೆವು. ಈ ಕಾರ್ಯಕ್ರಮವನ್ನು ರೂಪಿಸುವುದರ ಹಿಂದೆ ಭಾರತದ ಲೇಖಕರಿಗೆ ಬ್ರಿಟನ್‌ನ ಹಳ್ಳಿಗಾಡು ಪ್ರದೇಶವನ್ನು ನೋಡುವ ಅವಕಾಶ ಕಲ್ಪಿಸುವುದರ ಜೊತೆಗೆ ಅಲ್ಲಿನ ಓದುಗರಿಗೆ ಭಾರತೀಯ ಲೇಖಕರ ಜೊತೆ ಸಂವಾದ ನಡೆಸುವ ಅವಕಾಶ ಕಲ್ಪಿಸುವ ಉದ್ದೇಶವಿತ್ತು.
ನಾವು ಆರಂಭಿಸಿದ ‘ಪೀಕ್ ಲಿಟರೆರಿ ಫೆಸ್ಟಿವಲ್’ನ ಭಾಗವಾಗಿ ಭಾರತದ ಕುರಿತು ಬರೆದಿದ್ದ ಬರಹಗಾರರಿಗಾಗಿ ಹಲವು ಕಾರ್ಯಕ್ರಮಗಳನ್ನು ಈ ಹಿಂದೆಯೂ ಸಂಘಟಿಸಿದ್ದೆವು. ಮಾರ್ಕ್ ಟುಲಿ,ವಿಲಿಯಮ್ ಡ್ಯಾಲ್‌ರಿಂಪಲ್, ರಾಮಚಂದ್ರ ಗುಹಾ ಹಾಗೂ ಪಿಂಕಿ ಲಿಲಾನಿ ಮುಂತಾದವರು ಭಾಗವಹಿಸಿದ್ದ ಈ ಕಾರ್ಯಕ್ರಮಗಳಲ್ಲಿ ಸುಮಾರು 150 ಮಂದಿ ಪಾಲ್ಗೊಂಡಿದ್ದರು. ನಮ್ಮ ಪುಸ್ತಕದ ಅಂಗಡಿ ಇದ್ದ ಪ್ರದೇಶದಲ್ಲಿ ಭಾರತೀಯ ಮೂಲದವರಾರೂ ವಾಸಿಸುತ್ತಿರಲಿಲ್ಲವಾದರೂ ಭಾರತದ ಬಗ್ಗೆ ಆಸಕ್ತರಾದವರ ಸಂಖ್ಯೆ ಕಡಿಮೆಯದ್ದೇನೂ ಆಗಿರಲಿಲ್ಲ. ಲೇಖಕರು ಪುಸ್ತಕಗಳಿಗೆ ಹಸ್ತಾಕ್ಷರ ಹಾಕಿ ಕೊಡುವುದೂ ನಮ್ಮ ಕಾರ್ಯಕ್ರಮದ ಒಂದು ಭಾಗವಾಗಿತ್ತಾದರೂ ಅದನ್ನು ನಡೆಸುವುದಕ್ಕೆ ನಮಗೆ ಸಾಧ್ಯವಾಗಲಿಲ್ಲ. ಏಕೆಂದರೆ ಬೊಳುವಾರು ಅವರ ಯಾವ ಪುಸ್ತಕವೂ ಇಂಗ್ಲಿಷಿನಲ್ಲಿ ಪ್ರಕಟವಾಗಿರಲಿಲ್ಲ. ಮಮಂಗ್ ಮತ್ತು ತೆಮ್ಸುಲಾ ಅವರ ಇಂಗ್ಲಿಷ್ ಕೃತಿಗಳಿದ್ದವಾದರೂ ಅವುಗಳನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ವಿತರಿಸುವವರು ಇರಲಿಲ್ಲ.
ಯಾವುದೇ ಪುಸ್ತಕ ಮೇಳದ ‘ಮಾರ್ಕೆಟ್ ಫೋಕಸ್’ನ ಉದ್ದೇಶ ಇದಕ್ಕೆ ಆಯ್ಕೆಯಾಗಿರುವ ದೇಶದ ಬರಹಗಾರರ ಕೃತಿಗಳನ್ನು ಪ್ರೋತ್ಸಾಹಿಸುವುದು. ಈ ವರ್ಷದ ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ‘ಮಾರ್ಕೆಟ್ ಫೋಕಸ್’ ಫಿನ್ಲೆಂಡ್ ದೇಶ. ಈ ವರ್ಷ ಜರ್ಮನ್ ಭಾಷೆಯಲ್ಲಿ ಪ್ರಕಟವಾದ ಫಿನ್ನಿಶ್ ಲೇಖಕರ ಪುಸ್ತಕಗಳ ಸಂಖ್ಯೆ 180. ಪ್ರತೀ ವರ್ಷ ಫಿನ್ನಿಶ್ ಲೇಖಕರ ಸುಮಾರು 300 ಪುಸ್ತಕಗಳು ಜಗತ್ತಿನ 40 ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಪ್ರಕಾಶಕರು ಯಾವುದಾದರೂ ಭಾಷೆಗೆ ತಮ್ಮ ಕೃತಿ ಅನುವಾದಗೊಳ್ಳಬೇಕೆಂದು ಬಯಸಿದರೆ, ಅದಕ್ಕೆ ಅಗತ್ಯವಿರುವ ಹಣಕಾಸಿನ ನೆರವನ್ನು ರಾಷ್ಟ್ರೀಯ ಬುಕ್ ಏಜೆನ್ಸಿಗಳು ಒದಗಿಸುತ್ತವೆ.
ಭಾರತದಲ್ಲಿಯೂ ಇಂಥ ಸಂಸ್ಥೆಗಳಿವೆ. ಆದರೆ ಅವು ‘ಮಾರ್ಕೆಟ್ ಫೋಕಸ್’ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ೨೦೦೬ರಲ್ಲಿ ಫ್ರಾಂಕ್‌ಫರ್ಟ್‌ನಲ್ಲಿ ಪುಸ್ತಕ ಮೇಳದ ‘ಮಾರ್ಕೆಟ್ ಫೋಕಸ್’ ಭಾರತವಾಗಿತ್ತು. ಆದರೆ ಅದರಲ್ಲಿ ಪಾಲ್ಗೊಂಡಿದ್ದ ಅನೇಕ ಭಾರತೀಯ ಲೇಖಕರ ಕೃತಿಗಳು ಅಲ್ಲಿ ಲಭ್ಯವಿರಲಿಲ್ಲ. ಇದಕ್ಕೊಂದು ಕಾರಣ ಅನೇಕರ ಕೃತಿಗಳು ಅನುವಾದಗೊಳ್ಳದೇ ಇರುವುದು. ಅನುವಾದಗೊಂಡಿದ್ದರೂ ಅದನ್ನು ಪ್ರಚಾರ ಮಾಡುವ ವ್ಯವಸ್ಥೆ ಇಲ್ಲದಿರುವುದು. ಆದ್ದರಿಂದ ಭಾರತೀಯ ಕೃತಿಗಳಿಗೆ ಆಯಾಚಿತವಾಗಿ ಒದಗಿ ಬಂದಿದ್ದ ಒಂದು ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಇವತ್ತಿಗೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಲಂಡನ್ ಪುಸ್ತಕ ಮೇಳದಲ್ಲಿ ಈ ವರ್ಷ ಎನ್‌ಬಿಟಿ (ನ್ಯಾಷನಲ್ ಬುಕ್ ಟ್ರಸ್ಟ್) ಅಥವಾ ಸಾಹಿತ್ಯ ಅಕಾಡೆಮಿಗಳು ಸಕ್ರಿಯವಾಗಿ ಭಾಗವಹಿಸಲೇ ಇಲ್ಲ. ಸಾಹಿತ್ಯ ಅಕಾಡೆಮಿಯು ತನ್ನ ‘ವಿದೇಶಗಳಲ್ಲಿ ಭಾರತೀಯ ಸಾಹಿತ್ಯ’ ಯೋಜನೆಯಡಿ ಎರಡು–ಮೂರು ಪುಸ್ತಕಗಳನ್ನು ಅನುವಾದಿಸಿ ವಿದೇಶೀ ಪ್ರಕಾಶಕರ ಮೂಲಕ ಪ್ರಕಟಿಸುವ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಅದರ ಕಾರ್ಯದರ್ಶಿ ಶ್ರೀನಿವಾಸ್ ಹೇಳುತ್ತಾರೆ. ನ್ಯಾಶನಲ್ ಬುಕ್ ಟ್ರಸ್ಟ್ ಕಳೆದ ವರ್ಷ ಒಂದು ಪುಸ್ತಕದ ಅನುವಾದಕ್ಕೆ ಧನಸಹಾಯ ಮಾಡಿದೆ.
ನಾವು ೨೦೦೯ರಲ್ಲಿ ಯು.ಕೆ.ಯಲ್ಲಿ ಪುಸ್ತಕ ಪ್ರಕಟಣಾ ಸಂಸ್ಥೆಯನ್ನು ಆರಂಭಿಸಿದಾಗಲೇ ಭಾರತೀಯ ಕೃತಿಗಳ ಅನುವಾದವನ್ನೂ ನಮ್ಮ ವ್ಯವಹಾರದ ಭಾಗವಾಗಿಸಿಕೊಂಡೆವು. ಇದರಂತೆ ಬೊಳುವಾರು ಮೊಹಮ್ಮದ್ ಕುಂಞ ಅವರ ‘ಪಾಪು ಗಾಂಧಿ–ಬಾಪು ಗಾಂಧಿ ಆದ ಕಥೆ’ ಕೃತಿಯನ್ನು ಅನುವಾದಿಸಿ ಇಂಗ್ಲಿಷಿನಲ್ಲಿ ಪ್ರಕಟಿಸಲು ತೀರ್ಮಾನಿಸಿದೆವು. ೨೦೧೧ರಲ್ಲಿ ಪ್ರಕಟವಾಗಿದ್ದ ಮೂಲ ಕೃತಿಯನ್ನು ಆರ್ಯ ಅನುವಾದಿಸಿದರು. ಜೆರಾಲ್ಡಿನ್ ರೋಸ್ ಅದನ್ನು ಸಂಪಾದಿಸಿದರು. ಡಾ.ಯು.ಆರ್. ಅನಂತಮೂರ್ತಿ ಅದನ್ನು ಅನಾವರಣಗೊಳಿಸಿದರು. ಅದಕ್ಕೆ ಈ ವರ್ಷ‘ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ ಬಂತು. ಬೊಳುವಾರರ ಸಣ್ಣ ಕಥೆಗಳ ಅನುವಾದ ಕೂಡ ಮುದ್ರಣಕ್ಕೆ ಸಿದ್ಧಗೊಂಡಿದೆ. ಅವರ ಸಾವಿರಕ್ಕೂ ಮಿಕ್ಕ ಪುಟಗಳ, ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿಡೀ ಸಂಚರಿಸುವ ಬೃಹತ್ ಕಾದಂಬರಿ ಕೂಡ ಅನುವಾದಗೊಳ್ಳುತ್ತಿದೆ. ಇಷ್ಟೇ ಅಲ್ಲದೆ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ ಮತ್ತು ಮಮತಾ ಸಾಗರ ಅವರ ಪುಸ್ತಕಗಳ ಇಂಗ್ಲಿಷ್ ಅನುವಾದಗಳನ್ನೂ ಪ್ರಕಟಿಸಿದ್ದೇವೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ದೇವನೂರು ಮಹದೇವ ಅವರ ‘ಎದೆಗೆ ಬಿದ್ದ ಅಕ್ಷರ’, ವೈದೇಹಿ ಅವರ ‘ಗುಲಾಬಿ ಟಾಕೀಸ್’ ಮತ್ತಿತರ ಕೃತಿಗಳ ಅನುವಾದದ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಅವೆಲ್ಲಾ ಪ್ರಕಟಗೊಳ್ಳಬೇಕಿದೆ.
ಕಳೆದ ಶತಮಾನದ ಶ್ರೇಷ್ಠ ಕಾದಂಬರಿ ಎಂದು ಅನೇಕ ಬರಹಗಾರರು ಬಣ್ಣಿಸಿದ, 1967ರಲ್ಲಿ ಪ್ರಕಟಗೊಂಡ ‘ಮಲೆಗಳಲ್ಲಿ ಮದುಮಗಳು’ ಕೃತಿ ಮುಂದಿನ ವರ್ಷ ಇಂಗ್ಲಿಷ್‌ನಲ್ಲಿ ಲಭ್ಯವಾಗಲಿದೆ. ಇಂಥ ಕೃತಿ ಇಂಗ್ಲಿಷ್‌ನಲ್ಲಿ ಪ್ರಕಟಗೊಳ್ಳಲು ನಾಲ್ಕು ದಶಕಗಳು ಬೇಕಾಯಿತೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಅನುವಾದ ಸಂಸ್ಕೃತಿ ಮತ್ತು ಅದರ ಹಿಂದಿನ ರಾಜಕೀಯವನ್ನೂ ಗಮನಿಸಬೇಕಿದೆ. ಇದು 1913ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ದೊರೆತ ನಂತರ ಭಾರತದ ಯಾವುದೇ ಲೇಖಕನಿಗೆ ನೊಬೆಲ್ ಪ್ರಶಸ್ತಿ ಯಾಕೆ ಸಂದಿಲ್ಲ ಎಂಬ ಸಂಗತಿಯ ಮೇಲೂ ಇದು ಬೆಳಕು ಚೆಲ್ಲುತ್ತದೆ. ಭಾರತೀಯ ಭಾಷೆಗಳಲ್ಲಿ ಸೊಗಸಾಗಿ ಬರೆದಿರುವ ಇನ್ನೂ ಅನೇಕರ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ, ಪ್ರಕಟಿಸಿ, ಪ್ರೋತ್ಸಾಹ ನೀಡಬೇಕಿದೆ. ಇತರ ಅಂತಾರಾಷ್ಟ್ರೀಯ ಪ್ರಕಾಶಕರಿಗೆ ಈ ಕೃತಿಗಳ ಕುರಿತು ಅರಿವು ಮೂಡಿಸಿ ಅವರನ್ನು ಅನುವಾದದ ಪ್ರಕಟಣೆಯಲ್ಲಿ ತೊಡಗಿಸುವ ಲಿಟರರಿ ಏಜನ್ಸಿಯ ಕೆಲಸವನ್ನೀಗ ನಾವು ಮಾಡುತ್ತಿದ್ದೇವೆ.
ನಮ್ಮ ಬೆಂಗಳೂರಿನ ಜನಸಂಖ್ಯೆಗಿಂತ ಕಡಿಮೆ ಜನರಿರುವ ದೇಶಗಳೇ ಪ್ರತೀ ವರ್ಷ ನೂರಾರು ಕೃತಿಗಳ ಅನುವಾದಕ್ಕೆ ಹಣಕಾಸು ನೆರವು ಒದಗಿಸಿ ಪ್ರೋತ್ಸಾಹಿಸುತ್ತವಿದೆ. ಇದು ಕರ್ನಾಟಕ ಸರ್ಕಾರಕ್ಕೂ ಮಾದರಿಯಾಗಬೇಡವೇ? ಅಖಿಲ ಭಾರತ ಮಟ್ಟದಲ್ಲಿರುವ ಸಂಸ್ಥೆಗಳ ಮರ್ಜಿಗೆ ಕಾಯದೆ ಕೆಲಸ ಮಾಡುವ ಒಂದು ವಿಧಾನವನ್ನು ಕರ್ನಾಟಕ ಸರ್ಕಾರ ಈ ಮೂಲಕ ತೋರಿಸಿಕೊಡಬಹುದು. ಕನ್ನಡ ಪುಸ್ತಕ ಪ್ರಾಧಿಕಾರದಂಥ ಸಂಸ್ಥೆಗಳು ಖಾಸಗಿ ಪ್ರಕಾಶಕರ ಜೊತೆಗೆ ತಾವು ಸ್ಪರ್ಧಿಸಬೇಕೇ? ಅಥವಾ ಒಟ್ಟು ಪ್ರಕಟಣಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೇ ಎಂಬುದರ ಬಗ್ಗೆ ತೀರ್ಮಾನಕ್ಕೆ ಬರಬೇಕು.
ವಿಶ್ವವಿದ್ಯಾಲಯಗಳು ಹೊರಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಅನುವಾದ, ಅನುವಾದ ಸಂಬಂಧಿ ಅಧ್ಯಯನ ಹಾಗೂ ತೌಲನಿಕ ಸಾಹಿತ್ಯದ ಅಧ್ಯಯನವನ್ನು ಉತ್ತೇಜಿಸಬೇಕು. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ತೌಲನಿಕ ಅಧ್ಯಯನವು ಅಲ್ಲಿನ ಕನ್ನಡ ವಿದ್ಯಾರ್ಥಿಗಳ ಪಠ್ಯದ ಐಚ್ಛಿಕ ಭಾಗವಾಗಿ ಉಳಿದಿಲ್ಲ. ಇಂಥ ವಿಷಯಗಳಲ್ಲಿ ಬದಲಾವಣೆಗೆ ಕೇವಲ ಸರ್ಕಾರ ಸಂಸ್ಥೆಗಳನ್ನು ಅವಲಂಬಿಸುವುದರಿಂದ ಪ್ರಯೋಜನವಿಲ್ಲ. ಬರಹಗಾರರು, ಅನುವಾದಕರು ಹಾಗೂ ಪ್ರಕಾಶಕರು ಸೇರಿದಂತೆ ಆಸಕ್ತರು ಒಗ್ಗೂಡಿ ಈ ಸಮಸ್ಯೆ ಬಗೆಹರಿಸಲು ಒಂದು ಕಾರ್ಯತಂತ್ರವನ್ನು ರೂಪಿಸಬೇಕು. ಆಗಷ್ಟೇ ಅನುವಾದದಲ್ಲಿ ಪ್ರಗತಿ ಸಾಧಿಸಲು ಸಾಧ್ಯ.
ತಮಿಳು, ಮಲಯಾಳಂ, ಮರಾಠಿ ಹಾಗೂ ಬಂಗಾಳಿ ಸಂಸ್ಕೃತಿಯಲ್ಲಿ ಓದುಗ ಸಮುದಾಯವು ಪುಸ್ತಕಗಳನ್ನು ಖರೀದಿಸುವ ಮೂಲಕ ಪ್ರಕಾಶಕ ವಲಯವು ಆರೋಗ್ಯದಿಂದ ಇರುವಂತೆ ಮಾಡಿದ್ದು, ಇದರಿಂದ ಕರ್ನಾಟಕ ಕೂಡ ಕಲಿಯುವುದು ಇದೆ. ‘ಬೆಂಗಳೂರು ಪುಸ್ತಕ ಮೇಳ’ವನ್ನು ಕಳೆದ ವರ್ಷ ರದ್ದುಪಡಿಸಲಾಯಿತು. ಅದಕ್ಕೂ ಹಿಂದಿನ ವರ್ಷ ಅಲ್ಲಿ ನಮ್ಮ ಮಳಿಗೆಯಿತ್ತು. ಮೇಳಕ್ಕೆ ಬಂದವರ ಸ0ಖ್ಯೆ ಕಡಿಮೆ ಇದ್ದರಿ0ದ ನಮ್ಮ ಆದಾಯಕ್ಕೆ ಹೊಡೆತ ಬಿದ್ದಿತ್ತು.
ಕುಪ್ಪಳಿಯಲ್ಲಿ ಶಿಬಿರಕ್ಕೆ ಹೋದಾಗ ನಾನು ಕೆ.ಟಿ. ಶಿವಪ್ರಸಾದ್ ಅವರ ಜೊತೆ ನಂಜುಂಡಸ್ವಾಮಿ, ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯ ಜೊತೆಗಿನ ಅವರ ದಿನಗಳ ಕುರಿತು ಚರ್ಚಿಸಿದೆ. ಬಹಳ ಹಿಂದೆಯೇ ತೇಜಸ್ವಿ ಅವರಿಗೆ ಅರಿವಾಗಿದ್ದ ಸಾಂಸ್ಕೃತಿಕ ಬದಲಾವಣೆ ತಮ್ಮ ಆದ್ಯತೆ ಎಂದು ಹೇಳಿದ ಕೆ.ಟಿ. ಶಿವಪ್ರಸಾದ್, ಆ ತಿಳಿವಳಿಕೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಶಿಬಿರ ಒಂದು ಹೆಜ್ಜೆಯಾಗಿದೆ ಎಂದು ಮಾತು ಸೇರಿಸಿದರು. ಶಿಬಿರದಲ್ಲಿಯೇ ಸಾಂಸ್ಕೃತಿಕ ಬದಲಾವಣೆ ಆಗಬೇಕಿತ್ತು. ಯಾಕೆಂದರೆ, ಅಲ್ಲಿ ಉಪನ್ಯಾಸ ಕೊಟ್ಟವರಲ್ಲಾ ಪುರುಷರೇ. ಅಷ್ಟೇ ಅಲ್ಲ ಎಲ್ಲರೂ ಊಟಕ್ಕೆ ವಿಳಂಬವಾಗುವಷ್ಟು ಮಾತನಾಡುತ್ತಿದ್ದರು. ಪುರುಷ ಪ್ರಾಧಾನ್ಯದ ಈ ಸಂಸ್ಕೃತಿಗೆ ಕಳೆದ ತಿಂಗಳು ನಡೆದ ಯು.ಕೆ. ಕನ್ನಡ ಬಳಗದ ವಾರ್ಷಿಕ ಕಾರ್ಯಕ್ರಮದಲ್ಲೂ ಸಾಕ್ಷ್ಯ ಸಿಕ್ಕಿತು. ಅಲ್ಲಿಗೆ ಆಹ್ವಾನಿತರಾಗಿ ಕರ್ನಾಟಕದಿಂದ ಬಂದಿದ್ದವರೆಲ್ಲಾರೂ ಗಂಡಸರೇ. ವೇದಿಕೆ ತುಂಬಾ ಗಂಡಸರು. ಒಬ್ಬ ಭಾಷಣಕಾರರು, ‘ಕರ್ನಾಟಕವನ್ನು ನಾವು ಬಿಟ್ಟರೂ ಕನ್ನಡ ಸಂಸ್ಕೃತಿ ನಮ್ಮನ್ನು ಬಿಡುವುದಿಲ್ಲ’ ಎಂದರು! ಫ್ರಾಂಕ್‌ಫುರ್ಟ್ ಮತ್ತು ಶಾರ್ಜ ಪುಸ್ತಕ ಮೇಳದಲ್ಲಿ ಸಾಹಿತ್ಯ ಅಕಾಡೆಮಿಯಿಂದ ಲೇಖಕರು ಮಾತ್ರ ಆಹ್ವಾನಿತರಾಗಿದ್ದರು. ಮೊನ್ನೆ ಬೆಂಗಳೂರಿನ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲೂ ಗಂಡಸರೇ. ಇರುವ ಸಾಹಿತ್ಯ ಅಕಾಡೆಮಿಯನ್ನು ಗಂಡಸರು ವಸಾಹತೀಕರಣ ಮಾಡಿರುವದರಿಂದ ಹೆಂಗಸರಿಗೆ ಇನ್ನೊಂದು ಸಾಹಿತ್ಯ ಅಕಾಡೆಮಿಯ ಅವಶ್ಯಕತೆ ಇದೆ.
ನಮ್ಮ ತಲೆಮಾರಿನಿಂದ ಸಾಂಸ್ಕೃತಿಕ ಬದಲಾವಣೆಯನ್ನು ಬಯಸುವುದು ಸ್ವಲ್ಪ ಅತಿ ಎನ್ನಿಸಬಹುದು. ಯಾಕೆಂದರೆ, ವಸಾಹತುಶಾಹಿ ಕಾಲದ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಕ್ಲಬ್‌ಗಳ ಸದಸ್ಯತ್ವ ಹಾಗೂ ಸಾಂಸ್ಥಿಕ ಸೌಕರ್ಯಗಳನ್ನು ಪಡೆಯುವ ಮನಸ್ಸುಳ್ಳವರು ಇಲ್ಲಿದ್ದಾರೆಯೇ ವಿನಾ ವಸಾಹತೋತ್ತರ ಅಧ್ಯಯನ ಅಥವಾ ಪ್ಯಾಲಸ್ತೇನ್‌ನ ವಸಾಹತೀಕರಣದ ಕುರಿತು ಆಸಕ್ತಿ ಇರುವವರು ಇಲ್ಲ. ನಗರದಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ಚಾಲನೆ ಮಾಡಲು ಬಯಸುವ ಮನಸ್ಸುಗಳಿಗೆ ಸಾರ್ವಜನಿಕ ಸಾರಿಗೆಯ ಕುರಿತು ಒಲವಿಲ್ಲ. ನಿವೇಶನಗಳು,ಅಪಾರ್ಟ್‌ಮೆಂಟ್‌ಗಳನ್ನು ದಕ್ಕಿಸಿಕೊಳ್ಳಲು ಬಯಸುವವರಿದ್ದಾರೆಯೇ ವಿನಾ ರಿಯಲ್ ಎಸ್ಟೇಟ್ ಮಿಲಿಯನೇರ್‌ಗಳಿಂದಾಗಿ ಭೂಮಿ ಕಳೆದುಕೊಂಡ ರೈತರ ಕುರಿತು ಆಸಕ್ತಿ ಇರುವವರು ಇಲ್ಲ. ಮುಂದಿನ ತಲೆಮಾರಿನವರು ‘ರೌಂಡ್ ಟೇಬಲ್ ಇಂಡಿಯಾ.ಕಾಮ್’ ತರಹದ ಬೆಳವಣಿಗೆಗಳನ್ನು ಗಮನಿಸಿ, ಮುಖ್ಯವಾಹಿನಿ ಮಾಧ್ಯಮ ಹಾಗೂ ಪ್ರಸಕ್ತ ಮುದ್ರಣ ವ್ಯವಸ್ಥೆಯಿಂದ ಹೊರಗಿಟ್ಟ ಸಾಮಾಜಿಕ ವಲಯ ಹಾಗೂ ಸಮುದಾಯಗಳ ಕುರಿತು ಹೇಗೆ ಅರಿವು ಬೆಳಸಿ ಚರ್ಚೆ ಮಾಡಬಹುದೆಂದು ಕಲಿತುಕೊಳ್ಳಬಹುದು. ಈ ವರ್ಷ ನಡೆದ ಹತ್ತು ದಿನಗಳ ಅವಧಿಯ ಚೆನ್ನೈ ಪುಸ್ತಕ ಮೇಳಕ್ಕೆ 10 ಲಕ್ಷ ಜನ ಭೇಟಿ ನೀಡಿದರು. ಅಲ್ಲಿ 24ಲಕ್ಷ ತಮಿಳು ಪುಸ್ತಕಗಳೂ ಸೇರಿದಂತೆ 30 ಲಕ್ಷ ಪುಸ್ತಕಗಳು ಮಾರಾಟವಾಗಿ,ಸುಮಾರು 15ಕೋಟಿ ರೂಪಾಯಿಗಳ ವಹಿವಾಟು ನಡೆಯಿತು. ಮೇಳದಲ್ಲಿ ತಮಿಳು ಪುಸ್ತಕಗಳ ಮಾರಾಟದಲ್ಲಿ ಹಿಂದಿನ ಸಾಲಿಗಿಂತ ಶೇ 20ರಷ್ಟು ಏರಿಕೆಯಾಯಿತು. ಕಳೆದ ಏಳು ವರ್ಷಗಳಲ್ಲಿ ಪುಸ್ತಕ ಮಾರಾಟದ ಪ್ರಮಾಣ ಅಲ್ಲಿ ಶೇ 80ರಷ್ಟು ಏರಿಕೆಯಾಗಿದೆ. ಕೋಲ್ಕತ್ತ ಪುಸ್ತಕ ಮೇಳ, ನವದೆಹಲಿ ಪುಸ್ತಕ ಮೇಳ ಹಾಗೂ ಕೇರಳದ ಹಲವು ಪುಸ್ತಕ ಮೇಳಗಳು ಬಂಗಾಳಿ, ಹಿಂದಿ ಹಾಗೂ ಮಲಯಾಳಿ ಭಾಷೆಯ ಕೃತಿಗಳ ಮಾರಾಟಕ್ಕೆ ಸಹಾಯಕವಾಗಿವೆ. ಕೇರಳದಲ್ಲಿ ನಡೆಯುವ ‘ಎಳುತ್ತಿನಿರುತ್ತ್’ ಎಂಬ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳಿಂದ ಮೊದಲ ಅಕ್ಷರಗಳನ್ನು ಬರೆಯಿಸಿದ್ದು ಸಾಹಿತಿಗಳು. ಈ ಸಲ ಜ್ವಾನಪೀಠ ಪ್ರಶಸ್ತಿ ಪುರಸ್ಕೃತ ಎಂ.ಟಿ. ವಾಸುದೇವನ್ ನಾಯರ್ ತೃಶೂರ್ ಸಮೀಪದ ತುಂಜನ್ ಪರಂಬಿನಲ್ಲಿ ನಡೆದ‘ವಿದ್ಯಾರಂಭಂ’ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ತುಂಜನ್ ಪರಂಬಿನಲ್ಲಿ 16ನೇ ಶತಮಾನದ ಮಲಯಾಳಂ ಕವಿ ತುಂಜತ್ ಎಳುತ್ತಚ್ಚನ್ ಅವರ ಮನೆ ಇದೆ. ತುಂಜನ್ ಪರಂಬ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಎಂ.ಟಿ. ವಾಸುದೇವನ್ ನಾಯರ್ ವಾರ್ಷಿಕ ಸಾಹಿತ್ಯ ಉತ್ಸವ ಹಾಗೂ ಮತ್ತಿತರ ಕಾರ್ಯಕ್ರಮಗಳ ಮೂಲಕ ಈ ಊರನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಇದನ್ನವರು ತಮ್ಮ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಳಿಗಿಂತ ಮಿಗಿಲಾದದ್ದು ಎಂದು ಪರಿಗಣಿಸಿದ್ದಾರೆ.
ಕಲೆಯನ್ನು ಜನರು ನೋಡುವ ಬಗೆಯನ್ನೇ ಬದಲಾಯಿಸಿದ ಮಹತ್ವದ ಪುಸ್ತಕ ‘ವೇಸ್ ಆಫ್ ಸೀಯಿಂಗ್’ ಪ್ರಕಟವಾಗಿ ನಾಲ್ಕು ದಶಕಗಳು ಕಳೆದರೂ ಕನ್ನಡಕ್ಕೆ ಅನುವಾದಗೊಂಡಿರಲಿಲ್ಲ. ಕಳೆದ ವರ್ಷ ಅದನ್ನು ಎಚ್.ಎ.ಅನಿಲ್ ಕುಮಾರ್ ಕನ್ನಡಕ್ಕೆ ಅನುವಾದಿಸಿದರು. ಸಮಾಜದ ಸಾಂಸ್ಕೃತಿಕ ಹಾಗೂ ರಾಜಕೀಯ ಸಂವಾದಕ್ಕೆ ಇಂಬುಗೊಡುವಂಥ ಅನೇಕ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಳ್ಳಬೇಕಾದ ಅಗತ್ಯವಿದೆ. ಇವು ನಮ್ಮ ಆಧುನಿಕ ಸಂಸ್ಥಾನಗಳ ಅಡಿಯಲ್ಲಿ ಇರುವ ಪಟ್ಟಭದ್ರ ವಿದ್ವಾಂಸರು ಹಾಕಿಕೊಡುತ್ತಿರುವ ಬೌದ್ಧಿಕ ಚೌಕಟ್ಟುಗಳಿಂದ ನಮ್ಮನ್ನು ಸ್ವತಂತ್ರಗೊಳಿಸಿಕೊಳ್ಳಲು ಅಗತ್ಯ.
ಮುಖ್ಯವಾಹಿನಿ ಸಿನಿಮಾ ಹಾಗೂ ಸಾಹಿತ್ಯ ಹಾಗೂ ಕಲೆಯ ನಡುವಿನ ಕೊಂಡಿ ಕಳಚಿಕೊಂಡಿರುವುದೂ ಒಂದು ಸಮಸ್ಯೆಯೇ ಸರಿ. ಈ ವರ್ಷ ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ಕೊನೆಯ ದಿನ ಸಂಜೆ ಹಳೆಯ ನಗರಿಯನ್ನು ನಾವು ಸುತ್ತಾಡಲು ಹೋಗಿದ್ದೆವು. 1868ರಲ್ಲಿ ‘ರಿವರ್ ಮೇನ್’ ಮೇಲೆ ನಿರ್ಮಿಸಲಾದ ಐಸರ್ನರ್ ಸ್ಟೆಗ್ ಎಂಬ ಉಕ್ಕಿನ ಸೇತುವೆಯ ಮೇಲೆ ನಮಗೆ ಬೆಂಗಳೂರಿನ ನಾಲ್ವರು ಯುವ ಎಂಜಿನಿಯರ್‌ಗಳು ಸಿಕ್ಕರು. ಅವರು ಫ್ರಾಂಕ್‌ಫರ್ಟ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆಂದು ಕೇಳಿ ಆಶ್ಚರ್ಯವಾಯಿತು. ಅವರಿಗೆ ಪುಸ್ತಕ ಮೇಳದ ವಿಷಯ ತಿಳಿದಿರಲಿಲ್ಲ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಹಾಗೂ ಪರೀಕ್ಷೆಯ ಉಸಾಬರಿಯು ಕರ್ನಾಟಕದ ಯುವ ತಲೆಮಾರನ್ನು ಸಾಹಿತ್ಯ, ಸಂಸ್ಮೃತಿಯಿಂದ ಬೇರ್ಪಡಿಸಿದೆ ಎನ್ನಿಸಿತು. ಓದುವ ಸಂಸ್ಕೃತಿಯನ್ನು ಉತ್ತೇಜಿಸಿ, ಸಾಂಸ್ಕೃತಿಕ ಬದಲಾವಣೆ ತರಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ.
‘ಗಿಫ್ಟ್ ಎ ಬುಕ್ ಎಕ್ಸ್‌ಚೇಂಜ್ ಎ ಬುಕ್’ (ಪುಸ್ತಕದ ಉಡುಗೊರೆ ಕೊಡಿ, ಪುಸ್ತಕ ವಿನಿಮಯ ಮಾಡಿಕೊಳ್ಳಿ) ಚಟುವಟಿಕೆಯು ಅಂಥ ಒಂದು ಸ್ಥಳೀಯ ಚಟುವಟಿಕೆ. ಕಳೆದ ವರ್ಷ ಡಿಸೆಂಬರ್ 29ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಜನ್ಮದಿನದ ಸಂದರ್ಭದ ಕಾರ್ಯಕ್ರಮದಲ್ಲಿ ಡಾ. ಯು.ಆರ್. ಅನಂತಮೂರ್ತಿ ಪುಸ್ತಕಗಳನ್ನು ವಿನಿಮಯ ಮಾಡಿಕೊಂಡರು. ಈ ವರ್ಷ ಪುಸ್ತಕ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಡಿಸೆಂಬರ್ 28ರಂದು ಬೆಂಗಳೂರಿನ ರಂಗೋಲಿ ಮೆಟ್ರೊ ಸೆಂಟರ್‌ನಲ್ಲಿ ಐಡಿಯಾಸ್ ಫೆಸ್ಟಿವಲ್‌ನ ಭಾಗವಾಗಿ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿಯೂ ನೀವು ಇಂಥ ಕಾರ್ಯಕ್ರಮವನ್ನು ಆಯೋಜಿಸುತ್ತೀರಿ ಎಂದು ಆಶಿಸುತ್ತಾ, 2015ನ್ನು ಓದಿನ ಮೂಲಕ ಬರಮಾಡಿಕೊಳ್ಳೋಣ. ಹಾಗೆ ಆದಲ್ಲಿ ಕರ್ನಾಟಕದಲ್ಲಿ ಓದುವ ಸಂಸ್ಕೃತಿ ಸುಧಾರಿಸಿ, ಸಾಂಸ್ಕೃತಿಕ ಬದಲಾವಣೆಯೂ ಸಾಧ್ಯವಾದೀತು.
ವಾಹಿನಿ ಸಿನಿಮಾ ಹಾಗೂ ಸಾಹಿತ್ಯ ಹಾಗೂ ಕಲೆಯ ನಡುವಿನ ಕೊಂಡಿ ಕಳಚಿಕೊಂಡಿರುವುದೂ ಒಂದು ಸಮಸ್ಯೆಯೇ ಸರಿ. ಈ ವರ್ಷ ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ಕೊನೆಯ ದಿನ ಸಂಜೆ ಹಳೆಯ ನಗರಿಯನ್ನು ನಾವು ಸುತ್ತಾಡಲು ಹೋಗಿದ್ದೆವು. 1868ರಲ್ಲಿ ‘ರಿವರ್ ಮೇನ್’ ಮೇಲೆ ನಿರ್ಮಿಸಲಾದ ಐಸರ್ನರ್ ಸ್ಟೆಗ್ ಎಂಬ ಉಕ್ಕಿನ ಸೇತುವೆಯ ಮೇಲೆ ನಮಗೆ ಬೆಂಗಳೂರಿನ ನಾಲ್ವರು ಯುವ ಎಂಜಿನಿಯರ್‌ಗಳು ಸಿಕ್ಕರು. ಅವರು ಫ್ರಾಂಕ್‌ಫರ್ಟ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆಂದು ಕೇಳಿ ಆಶ್ಚರ್ಯವಾಯಿತು. ಅವರಿಗೆ ಪುಸ್ತಕ ಮೇಳದ ವಿಷಯ ತಿಳಿದಿರಲಿಲ್ಲ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಹಾಗೂ ಪರೀಕ್ಷೆಯ ಉಸಾಬರಿಯು ಕರ್ನಾಟಕದ ಯುವ ತಲೆಮಾರನ್ನು ಸಾಹಿತ್ಯ, ಸಂಸ್ಮೃತಿಯಿಂದ ಬೇರ್ಪಡಿಸಿದೆ ಎನ್ನಿಸಿತು. ಓದುವ ಸಂಸ್ಕೃತಿಯನ್ನು ಉತ್ತೇಜಿಸಿ, ಸಾಂಸ್ಕೃತಿಕ ಬದಲಾವಣೆ ತರಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ.
‘ಗಿಫ್ಟ್ ಎ ಬುಕ್ ಎಕ್ಸ್‌ಚೇಂಜ್ ಎ ಬುಕ್’ (ಪುಸ್ತಕದ ಉಡುಗೊರೆ ಕೊಡಿ, ಪುಸ್ತಕ ವಿನಿಮಯ ಮಾಡಿಕೊಳ್ಳಿ) ಚಟುವಟಿಕೆಯು ಅಂಥ ಒಂದು ಸ್ಥಳೀಯ ಚಟುವಟಿಕೆ. ಕಳೆದ ವರ್ಷ ಡಿಸೆಂಬರ್ 29ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಜನ್ಮದಿನದ ಸಂದರ್ಭದ ಕಾರ್ಯಕ್ರಮದಲ್ಲಿ ಡಾ. ಯು.ಆರ್. ಅನಂತಮೂರ್ತಿ ಪುಸ್ತಕಗಳನ್ನು ವಿನಿಮಯ ಮಾಡಿಕೊಂಡರು. ಈ ವರ್ಷ ಪುಸ್ತಕ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಡಿಸೆಂಬರ್ 28ರಂದು ಬೆಂಗಳೂರಿನ ರಂಗೋಲಿ ಮೆಟ್ರೊ ಸೆಂಟರ್‌ನಲ್ಲಿ ಐಡಿಯಾಸ್ ಫೆಸ್ಟಿವಲ್‌ನ ಭಾಗವಾಗಿ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿಯೂ ನೀವು ಇಂಥ ಕಾರ್ಯಕ್ರಮವನ್ನು ಆಯೋಜಿಸುತ್ತೀರಿ ಎಂದು ಆಶಿಸುತ್ತಾ, 2015ನ್ನು ಓದಿನ ಮೂಲಕ ಬರಮಾಡಿಕೊಳ್ಳೋಣ. ಹಾಗೆ ಆದಲ್ಲಿ ಕರ್ನಾಟಕದಲ್ಲಿ ಓದುವ ಸಂಸ್ಕೃತಿ ಸುಧಾರಿಸಿ, ಸಾಂಸ್ಕೃತಿಕ ಬದಲಾವಣೆಯೂ ಸಾಧ್ಯವಾದೀತು.
(ಲೇಖಕರು ‘ಕಡಲು ಪ್ರಕಾಶನ’ದ ಮೂಲಕ ಕನ್ನಡದ ಪ್ರಮುಖ ಕೃತಿಗಳನ್ನು ಇಂಗ್ಲಿಷ್‌ಗೆ ಪರಿಚಯಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡ–ಇಂಗ್ಲಿಷ್ ಸಾಹಿತ್ಯದ ಕೊಡುಕೊಳು ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.