ADVERTISEMENT

ಪದಬಂಧ

ಮಿನುಗುಮಿಂಚು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಪದಬಂಧ ಶುರುವಾದದ್ದು ಹೇಗೆ?
೧೯೧೩ರಲ್ಲಿ ದಿ ನ್ಯೂಯಾರ್ಕ್ ವರ್ಲ್ಡ್‌ನ ಸಂಪಾದಕ ಆರ್ಥರ್ ವೈನ್ ಕ್ರಿಸ್‌ಮಸ್‌ಗಾಗಿ ವಿಶೇಷ ಸಂಚಿಕೆ ರೂಪಿಸುತ್ತಿದ್ದರು. ಅದರಲ್ಲಿ ಹೊಸತೇನನ್ನಾದರೂ ಪ್ರಕಟಿಸಬೇಕೆಂಬುದು ಅವರ ಬಯಕೆ. ಆಗ ಅವರಿಗೆ ಪದಬಂಧ ರೂಪಿಸುವ ಯೋಚನೆ ಹೊಳೆಯಿತು. ಅದನ್ನು ಅವರು ವರ್ಡ್ ಕ್ರಾಸ್ ಎಂದು ಕರೆದರು. ವಿಶ್ವದ ಮೊದಲ ಪದಬಂಧ ಅದೇ.

ಮೊದಲ ಕ್ರಾಸ್ ವರ್ಡ್ ಅಥವಾ ಪದಬಂಧ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದದ್ದು ಯಾವಾಗ?
ಡಿಸೆಂಬರ್ ೧೩, ೧೯೧೩ರಲ್ಲಿ. ಆಮೇಲೆ ಪ್ರತಿ ಭಾನುವಾರ ಪದಬಂಧ ಪ್ರಕಟಿಸುವುದು ಪರಿಪಾಠವಾಯಿತು.

ಅದು ಜನಪ್ರಿಯವಾಯಿತೆ?
ಅದು ಎಷ್ಟು ಜನಪ್ರಿಯವಾಯಿತೆಂದರೆ ೧೯೨೪ರಲ್ಲಿ ಸಿಮೊನ್ ಹಾಗೂ ಶುಸ್ಟರ್ ಹೊಸ ಪ್ರಕಾಶಕ ಸಂಸ್ಥೆ ಪ್ರಾರಂಭಿಸಿದಾಗ, ಅವರು ಮೊದಲು ಪ್ರಕಟಿಸಲು ಉದ್ದೇಶಿಸಿದ ಪುಸ್ತಕ ಪದಬಂಧಗಳದ್ದು.

ADVERTISEMENT

ಆ ಪುಸ್ತಕ ಚೆನ್ನಾಗಿ ಮಾರಾಟವಾಯಿತೇ?
ಮೊದಮೊದಲಿಗೆ ಮಾರಾಟ ಚೆನ್ನಾಗಿಯೇನೂ ಇರಲಿಲ್ಲ. ಕ್ರಮೇಣ ಬೇಡಿಕೆ ಕುದುರಿತು. ೧೯೨೪ರ ಕೊನೆಯ ಹೊತ್ತಿಗೆ ಅವರು ಪದಬಂಧ ಕುರಿತ ಇನ್ನೂ ಎರಡು ಪುಸ್ತಕ ಪ್ರಕಟಿಸಿದರು. ಎರಡೂ ಪುಸ್ತಕಗಳ ೩.೫ ಲಕ್ಷಕ್ಕೂ ಹೆಚ್ಚು ಪ್ರತಿ ಖರ್ಚಾದವು.

ಬೇರೆ ದೇಶಗಳಲ್ಲಿ ಪದಬಂಧ ಜನಪ್ರಿಯವಾದದ್ದು ಯಾವಾಗ?
೧೯೨೪ರಲ್ಲಿ ಸಿಮೊನ್ ಹಾಗೂ ಶುಸ್ಟರ್ ಪ್ರಕಟಿಸಿದ ಪುಸ್ತಕದಿಂದ ಅಮೆರಿಕದಲ್ಲಿ ಪದಬಂಧಗಳ ಮೋಹ ಬೆಳೆಯಿತು. ಕೆಲವೇ ವರ್ಷಗಳಲ್ಲಿ ಬ್ರಿಟನ್ ಮತ್ತಿತರ ದೇಶಗಳಿಗೆ ಈ ಜನಪ್ರಿಯತೆ ಹಬ್ಬಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.