ಪರಿಸರವೆಂದರೆ ಏನೋ ನರಹರಿ
ಹೇಳೋ ಸರಸರನೆ
ಈಗಲೆ ಹೇಳುವೆ ಕೇಳೇ ಶುಭಕರಿ
ತಿಳಿಯೇ ಬಿರಬಿರನೆ
ನಾನು ನೀನು ಅಪ್ಪ ಅಮ್ಮ
ಇಡೀ ನಮ್ಮ ಮನೆ
ಪ್ರಾಣಿ ಪಕ್ಷಿ ಗಿಡವು ಮರವು
ಏಡಿ ಕಪ್ಪೆ ಹಾವೂನೇ
ನೆಲವು ಗಾಳಿಯು ನೀರೂ
ಬೆಂಕಿ ಆಕಾಶ
ಸಾಲು ಸಾಲು ಜಗತ್ತಿಗೆಲ್ಲ
ಪರಿಸರವೇ ಅವಕಾಶ
ನಮಗೂ ಪ್ರಾಣಿಗು ನೆಲಕೂ ಜೀವಕು
ಎಲ್ಲಕು ಇದೆ ಸಂಬಂಧ
ಆಕಾಶಕ್ಕು ವಾಯುದೇವನಿಗೂ
ಬಿಡಿಸಲಾಗದ ಅನುಬಂಧ
ಸಹಕರಿಸುತ್ತ ಒಬ್ಬರಿಗೊಬ್ಬರು
ಉಳಿಸಲೆಬೇಕು ಸಮತೋಲ
ಪರಿಸರವನ್ನು ಮಲಿನಗೊಳಸದೆ
ಇದ್ದರೆ ಉಳಿವುದು ಜೀವಜಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.