ನೀವು ರಂಗದಲಿ ಸ್ವಚ್ಛಂದ ಛಂದದಲಿ ಮೆರೆದು
ಚಪ್ಪಾಳೆ ಸಿಳ್ಳೆ ಬಿದ್ದಾಗ
ಒಂದಲ್ಲ ಎರಡಲ್ಲ ನೂರು ನೂರು ಗಿರ್ಕಿ ಹೊಡೆದು
ಅರಸಾಗಬೇಕಾದವರು ಪುಂಡುವೇಷದವರಾದಿರಿ
ನಿಮಗೆ ಪಂಜನು ಹಿಡಿದು
ರಂಗ ತೋರಿದ ನಾವು
ಬೆಳಕು ಹರಿಯಲು
ರಾಮಕೃಷ್ಣರು ಬಂದೆ ಬರುವರು
ಎಂದು ಭಾವಿಸಿ ಚೌಕಿಯಲಿ ಕೈ ಕೈ ಹೊಸೆಯುತ್ತ
ಮಂಗಳದ ಹಾಡ ಬಯಸುತ್ತಿದ್ದೇವೆ
ಕುಣಿವ ನೀವೂ ಸೋತು
ಭಾಗವತರತ್ತ ನೋಡುತ್ತಲೇ ಇದ್ದೀರಿ
ಅವರು ಆ ಹಾಡ ಮರೆತು
ಮರಮರಳಿ ನಿಮ್ಮನ್ನು ಪುಂಡು ವೇಷಕ್ಕೆ ಅಣಿಮಾಡಿ
ಆರ್ಭಟೆ ಕೊಡುತ್ತಲೇ ಇದ್ದಾರೆ
ನಿಮಗೀಗ ಕುಣಿತ ಅನಿವಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.