ಮನ್ನಾಲಾಡ್ತ ಬುದ್ಬುಟ್ಟೆ, ಅಮ್ಮ
ಮಂಡಿ ಚಲ್ಮ ಕಿತ್ಬಂತು!
ನೋಡು ಲಕ್ತ ಸುಲಿತಯ್ತೆ,
ಕಾಲು ಬಾಲ ನೋಯ್ತಯ್ತೆ
ಮನ್ನಿಗೆ ಬುದ್ದಿ ಇಲ್ವಾ ಅಮ್ಮ?
ಪಾಪುನ್ ಬೀಲಿಸ್ಬುಡ್ತು
ಚಲ್ಮ ಕಿತ್ತು ಲಕ್ತ ಬಂದ್ಲೆ
ಅಂಟ್ಕೊಂಡ್ ನೋಡ್ತ ನಗ್ತು
ಆಡ್ತಾ ಆಡ್ತಾ ಅನ್ನ ಮಾಡ್ದೆ
ಸಾಲು ಇನ್ನು ಆಗ್ಲಿಲ್ಲ
ಸಾಲಿಗೆ ಸೊಪ್ಪು ಕುಯ್ತಾ ಇದ್ದೆ
ಕಲ್ಲು ತಾಗಿ ಬುದ್ಬುಟ್ಟೆ
ಪಾಪು ಕನ್ನ ನೋಡು ಅಮ್ಮ
ನೀಲು ಸಲಿತಾ ಅಯ್ತೆ
ಅಡುಗೆ ಬುಟ್ಟು ಪಾಪುನೆತ್ಕೊ
ಕಾಲು ಬಾಲ ನೋಯ್ತಯ್ತೆ
ಅಮ್ಮ ಅಮ್ಮ ಪಾಪ ಇನ್ನು
ಮನ್ನಲಾಡಲ್ಲಮ್ಮ
ಅನ್ನ ಸಾಲು ಅಡುಗೆ ಆಟ
ಇನ್ನು ಆಡಲ್ಲಮ್ಮ
ಇನ್ಮುಂದೆ ನಿನ್ ಹತ್ಲಾನೆ
ಇಲ್ಲೆ ಒಲಗೆ ಕೂರ್ತೀನಿ
ಕಾಲು ನೋವು ಸಲಿಹೋದ್ಮೇಲೆ
ಅಮ್ಮ, ಹೊಲಗಡೆ ಆಡ್ತೀನಿ
ಸಂತೋಷ ಗುಡ್ಡಿಯಂಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.