ADVERTISEMENT

ವಿ'ಭಜನೆ'

ಬಿ.ಆರ್.ಲಕ್ಷ್ಮಣರಾವ್
Published 2 ಸೆಪ್ಟೆಂಬರ್ 2017, 19:30 IST
Last Updated 2 ಸೆಪ್ಟೆಂಬರ್ 2017, 19:30 IST
ವಿ'ಭಜನೆ'
ವಿ'ಭಜನೆ'   

"ನಾವು ನೀವಲ್ಲ, ನಾವೇ ಬೇರೆ..

ಜಾತಿ..ಬೇರೆ, ಧರ್ಮ..ಬೇರೆ..
ದೇಶ..ಬೇರೆ, ಭಾಷೆ.. ಬೇರೆ..
ರೀತಿ..ನೀತಿ..ದೇವರು.. ದಿಂಡರು..
ಎಲ್ಲಾ ಬೇರೆ ಬೇರೆ;
ಬೇರು ಒಂದಾದರೇನು?
ಬೊಡ್ಡೆ ಒಂದಾದರೇನು?
ರೆಂಬೆ..ಕೊಂಬೆ..ಹೀಚು..ಹಣ್ಣು..
ಎಲ್ಲಾ ಬೇರೇನೆ.."

ಇದು ಇಂದಿನ ಭಜನೆ.

ADVERTISEMENT

ಯರ್ರಾಬಿರ್ರಿ ವಿಭಜನೆಗೊಂಡರೆ
ಹೀಗೆ ಸಮಾಜದ ಜೀವಕಣ,
ಅಣ್ಣಾ..
ಅದು ಕ್ಯಾನ್ಸರ್ ಲಕ್ಷಣ!

ಇನ್ನು ಕ್ಷಣಗಣನೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.