ಜೋ ಜೋ ಶಾರದೆ ಬ್ರಹ್ಮನರಾಣಿ
ಜೋ ಜೋ ಮಂಗಳೆ ಕಲಕೀರವಾಣಿ
ಜೋ ಜೋ ವೀಣಾ ಪುಸ್ತಕಪಾಣಿ
ಜೋ ಜೋ ಸುಪ್ರಪ್ರವೀಣೆ ಕಲ್ಯಾಣಿ ||ಜೋ ಜೋ||
ನಲವಿನಿಂದಲಿ ವಿದ್ಯೆನಿಲಯದಿ ನಿಂದು
ಒಲಿದೆಮ್ಮ ಹರಸು ನೀನೆಲೆ ಗುಣಸಿಂಧು
ನೆಲೆಯಾಗಿರಮ್ಮ ನೀ ರಸನೆಯೊಳಿಂದು
ಶಿರಬಾಗಿ ನಮಿಪೆವು ನಾವು ಎಂದೆಂದು ||ಜೋಜೋ|
ಮಕ್ಕಳ ಮೇಲತಿ ಪ್ರಿಯಳಾದ ಬಾಲೇ
ತಕ್ಕ ವಿದ್ಯೆಯನಿತ್ತು ಪೊರೆಯಸು ಶೀಲೇ
ಸಕ್ಕರೆಯಂದದಿ ರಸನೆಯ ಮೇಲೆ
ತಕ್ಕ ಥೈಯೆನ್ನುತ್ತ ಕುಣಿಗುಣಮಾಲೆ ||ಜೋಜೋ|
ನಂಬಿದ ಭುಕುತರ ಪೊರೆವ ಪ್ರವೀಣೆ
ಬೆಂಬಿಡದೆಮ್ಮನು ಪಾಲಿಸೆ ಜಾಣೆ
ತುಂಬುರಗಾನದಿ ನಿನಗೆಣೆಕಾಣೆ
ತುಂಬಿ ಸಂತೋಷವ ಕರುಣಿಸೆ ನೀನೇ ||ಜೋಜೋ||
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.