ADVERTISEMENT

ಹುತಾತ್ಮರ ದಿವಸ: ಅಮರ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ನೆನಪು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 7:09 IST
Last Updated 23 ಮಾರ್ಚ್ 2022, 7:09 IST
 ಭಗತ್ ಸಿಂಗ್, ರಾಜಗುರು, ಸುಖದೇವ್
ಭಗತ್ ಸಿಂಗ್, ರಾಜಗುರು, ಸುಖದೇವ್   

ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರಾದಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನವಾದ ಇಂದು (ಮಾ.23) ಅವರತ್ಯಾಗ ಬಲಿದಾನದ ಸ್ಮರಣೆಗಾಗಿ ‘ಬಲಿದಾನ ದಿವಸ‘ (ಹುತ್ಮಾತರ ದಿನ) ಎಂದು ಆಚರಿಸಲಾಗುತ್ತದೆ.

ಅಮರ ಸೇನಾನಿಗಳಾದಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಜ್ ರಾಜಗುರು ಅವರ ಪರಾಕ್ರಮ, ತ್ಯಾಗ, ಹೋರಾಟ ಮತ್ತು ಆದರ್ಶಗಳನ್ನು ಈ ದಿನ ಸ್ಮರಿಸಲಾಗುತ್ತದೆ. ದೇಶದ ಜನರು ಸೇರಿದಂತೆ ರಾಜಕೀಯ ನಾಯಕರು ಇವರನ್ನು ಸ್ಮರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಣೆಯ ಫೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬ್ರಿಟಿಷರಿಗೆ ದುಃಸ್ವಪ್ನವಾಗಿ ಕಾಡಿದ್ದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಮೇಲೆ ಹತ್ಯೆ ಹಾಗೂದೆಹಲಿಯ ಸೆಂಟ್ರಲ್ ಅಸೆಂಬ್ಲಿಗೆ ಬಾಂಬ್ ಎಸೆದ ಆರೋಪ ಇತ್ತು.1928ರಲ್ಲಿ ಬ್ರಿಟಿಷ್‌ ಅಧಿಕಾರಿ ಜೆ.ಪಿ.ಸೌಂದರ್ ಅವರು ಈ ಮೂವರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದ್ದರು.

ADVERTISEMENT

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ಅವರನ್ನು 1931ರ ಮಾರ್ಚ್‌ 23ರಂದು ಬ್ರಿಟಿಷರು ಗಲ್ಲಿಗೇರಿಸಿದರು. ಬ್ರಿಟಿಷ್‌ ಅಧಿಕಾರಿಗಳೇ ಸಟ್ಲೇಜ್‌ ನದಿಯ ತೀರದಲ್ಲಿ ಅವರ ಅಂತ್ಯಕ್ರಿಯೆ ಮಾಡಿದ್ದರು. ಭಗತ್‌ ಸಿಂಗ್‌ ಅವರನ್ನು ಮಾರ್ಚ್‌ 24ರಂದು ನೇಣಿಗೆ ಹಾಕಲಾಗುವುದು ಎಂದು ಬ್ರಿಟಿಷರು ಹೇಳಿದ್ದರು. ಆದರೆ ಒಂದು ದಿನ ಮುಂಚಿತವಾಗಿ ಅವರನ್ನು ನೇಣಿಗೆ ಏರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.