ಒಂದು ಕಡೆ ಕಡಲು, ಇನ್ನೊಂದು ಕಡೆ ಸಹ್ಯಾದ್ರಿ ಬೆಟ್ಟಗಳ ಸಾಲು. ನಡುವೆ ಕೋಟ. ಅಲ್ಲಿ ಜನಿಸಿದವರು ಮಕ್ಕಳ ಪಾಲಿನ ಪ್ರೀತಿಯ ಕಾರಂತಜ್ಜ. ಅಂದರೆ, ಕೋಟ ಶಿವರಾಮ ಕಾರಂತ. ಜೀವನದ ಅನುಭವಗಳನ್ನೇ ಕಲಿಕೆಯಾಗಿ ಪರಿವರ್ತಿಸಿಕೊಂಡ ಚೇತನ ಈ ಕಾರಂತಜ್ಜ.
ಗಾಂಧೀಜಿ ಕರೆಗೆ ಓಗೊಟ್ಟು, ಶಾಲೆ ಬಿಟ್ಟು, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಕಾರಂತರು, ನಂತರ ಕಲಿತಿದ್ದು ಒಂದೆರಡು ವಿಷಯಗಳನ್ನು ಮಾತ್ರವೇ ಅಲ್ಲ. ಪರಿಸರ, ವಿಜ್ಞಾನ, ಸಾಹಿತ್ಯ, ಯಕ್ಷಗಾನ... ಹೀಗೆ ಅವರ ಅರಿವಿನ ವಿಸ್ತಾರ ಬಹುದೊಡ್ಡದು. ಕಾರಂತರು ಕಲಿತಿದ್ದೆಲ್ಲವೂ ಶಾಲೆ, ಕಾಲೇಜಿನಲ್ಲಿ ಅಲ್ಲ ಎಂಬುದು ಗಮನಾರ್ಹ.
ಹೊಸದನ್ನು ಕಲಿಯುವ ಹಂಬಲ ಇರುವ ಚಿಣ್ಣರಿಗೆ ಕಾರಂತರು ಸದಾ ಒಂದು ಮಾದರಿ. ತಮ್ಮ ಅನುಭವಕ್ಕೆ ಬಾರದ್ದನ್ನು ನಂಬುತ್ತಿರಲಿಲ್ಲ ಕಾರಂತರು. ಹೊಸದೊಂದು ವಿಚಾರ ತಮ್ಮ ಅನುಭವಕ್ಕೆ ಬಂದಾಗ, ತಮ್ಮ ಹಿಂದಿನ ನಿಲುವುಗಳನ್ನು ಬದಲಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.