ADVERTISEMENT

ಭಾರತದ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 19:30 IST
Last Updated 28 ಆಗಸ್ಟ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಪಂಚದಲ್ಲಿ‌ಬುಡಕಟ್ಟುಸಮುದಾಯಗಳಅನನ್ಯತೆ

ಜಗತ್ತಿನಲ್ಲಿ ಹೆಚ್ಚಿನ ಎಲ್ಲಾ ದೇಶಗಳಲ್ಲೂ ತಮ್ಮದೇ ಆದ ಸ್ಥಳೀಯ ಸಮುದಾಯಗಳನ್ನು ಹೊಂದಿದೆ.ಅವು ಬಹಳ ಶಕ್ತಿಯುತವಾದ ಸಂಸ್ಕೃತಿ, ಕಲಾ ಪರಂಪರೆಗಳು, ಕರಕುಶಲ ಕಲೆ ಹಾಗೂ ಪಾರಿಸರಿಕ ಸಂಬಂಧಗಳು ಮುಂತಾದ ತಮ್ಮದೇ ಆದಸಾಂಸ್ಕೃತಿಕಅನನ್ಯತೆಯನ್ನು ಹೊಂದಿದೆ.

ಪ್ರಕೃತಿ ಮತ್ತು ಸಂಸ್ಕೃತಿಯ ಸಮತೋಲಿತವಾದ ಸಂಬಂಧವನ್ನು ರೂಪಿಸುವ ಹಾಗೂ ಸ್ಥಳೀಯಸಾಂಸ್ಕೃತಿಕಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಸ್ಥಳೀಯರ ಕೌಶಲ್ಯಗಳನ್ನು ಗುರುತಿಸಿ 2007ರಲ್ಲಿ ವಿಶ್ವಸಂಸ್ಥೆಯು ದೇಸೀಯ ಜನರ ಹಕ್ಕುಗಳ ಕುರಿತ ಘೋಷಣೆ ಯನ್ನು ಅಂಗೀಕರಿಸಿತು.

ADVERTISEMENT

*ಇದು ಜಗತ್ತಿನ ಸ್ಥಳೀಯ ಜನರ ಉಳಿವು ಘನತೆ ಮತ್ತು ಕಲ್ಯಾಣಕ್ಕಾಗಿ ಕನಿಷ್ಠ ಮಾನದಂಡಗಳ ಸಾರ್ವತ್ರಿಕ ಚೌಕಟ್ಟನ್ನು ರೂಪಿಸುತ್ತದೆ

*ಆಯಾ ಜನರ ಸ್ಥಳೀಯ ಪರಿಸ್ಥಿತಿಗೆ ಅನ್ವಯಿಸುವಂತೆ ಮಾನವ ಹಕ್ಕುಗಳ ಮಾನದಂಡಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ವಿವರಿಸುತ್ತದೆ. ಸ್ಥಳೀಯ ಸಮುದಾಯಗಳು ಜಗತ್ತಿನಲ್ಲಿ 90 ದೇಶಗಳಲ್ಲಿ ಹರಡಿಕೊಂಡಿದ್ದು 5000 ರೀತಿಯ ಭಿನ್ನವಾದ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಾರೆ. ಈ ಸಮುದಾಯಗಳು ಜಗತ್ತಿನ ಜನಸಂಖ್ಯೆಯ ಶೇಕಡಾ 6.2 ರಷ್ಟಿದ್ದು ಎಲ್ಲಾ ಬಗೆ ಭೌಗೋಳಿಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

*ಬುಡಕಟ್ಟುಜನಾಂಗದವರ ತಮ್ಮದೇ ರೀತಿಯ ಸಾಮಾಜಿಕ ಮತ್ತುಸಾಂಸ್ಕೃತಿಕಸಾಂಪ್ರದಾಯಗಳು ಹಾಗೂ ಭೂಮಿಯ ಒಡೆತನ ಪ್ರಕೃತಿಯ ಜೊತೆಗೆ ನಮ್ಮೊಡನಾಟ ಇವೆಲ್ಲವೂ ಅವರನ್ನು ವಿಶಿಷ್ಟವಾದ ಅಸ್ಮಿತೆಯನ್ನು ಒದಗಿಸುತ್ತದೆ.

*ಸ್ಥಳೀಯ ಸಸ್ಯ ಮತ್ತು ಪಾಣಿ, ಬೀಜಗಳು, ಔಷಧಗಳು, ಕೃಷಿ, ಮೀನುಗಾರಿಕೆ, ವಾಸ್ತುಶಿಲ್ಪ, ಜವಳಿ, ಆಹಾರ - ಇತ್ಯಾದಿಗಳ ಬಗ್ಗೆ ಅವರಿಗಿರುವ ಆಳವಾದ - ಜ್ಞಾನವು ಅಭಿವೃದ್ಧಿಯ ಸುಸ್ಥಿರ ಮಾರ್ಗದ ಮಾರ್ಗದರ್ಶಿ ಜ್ಞಾನವಾಗಿದೆ.

*ಸ್ಥಳೀಯ ಜನರ ಕುರಿತಾದ ವಿಶ್ವಬ್ಯಾಂಕ್ ವರದಿಯು ಹೀಗೆ ಹೇಳುತ್ತದೆ, “ಸ್ಥಳೀಯ ಜನರು ಪ್ರಪಂಚದ ಕಾಲು ಭಾಗದಷ್ಟು ಪ್ರದೇಶದಲ್ಲಿದ್ದಾರೆ. ಅವರು ಪ್ರಪಂಚದಲ್ಲಿ ಉಳಿದಿರುವ ಜೀವವೈವಿಧ್ಯದ ಶೇ 80 ರಷ್ಟನ್ನು ರಕ್ಷಿಸುತ್ತಿದ್ದಾರೆ. ಹವಾಮಾನ ಹಾಗೂ ಅದರ ವೈಪರೀತ್ಯದ ಅಪಾಯಗಳನ್ನು ಹೇಗೆ ಎದುರಿಸುವುದು, ಹೇಗೆ ತಗ್ಗಿಸುವುದು ಎನ್ನುವುದರ ಕುರಿತಾದ ಪೂರ್ವಜರ ಜ್ಞಾನ ಹಾಗೂ ಪರಿಣತಿಯನ್ನು ಹೊಂದಿದ್ದಾರೆ”.

ದುರದೃಷ್ಟವಶಾತ್ ಭಾರತದಲ್ಲಿ ಈ ಸ್ಥಳೀಯಸಮುದಾಯಗಳಸಾಂಪ್ರದಾಯಿಕ ಜೀವನ ವಿಧಾನಗಳು ಹಾಗೂ ಅಭ್ಯಾಸಗಳು
ಬಹಳಷ್ಟು ರೀತಿಯ ಆತಂಕ ಮತ್ತು ಅಪಾಯವನ್ನು ಎದುರಿಸುತ್ತಿವೆ. ಅವರನ್ನು ಸಾಮಾಜಿಕವಾಗಿ ಗುರುತಿಸದಿರುವುದು, ಸರಿಯಾದ ಹಕ್ಕುಗಳ ರಕ್ಷಣೆ ಒದಗಿಸದಿರುವುದು, ಸಾರ್ವಜನಿಕ ನೀತಿಗಳು ಅವರನ್ನು ಒಳಗೊಳ್ಳದಿರುವುದು, ಹವಾಮಾನ ಬದಲಾವಣೆಯ ಪರಿಣಾಮಗಳು ಈ ಎಲ್ಲ ಅಂಶಗಳುಭಾರತದಬುಡಕಟ್ಟುಸಮುದಾಯಗಳಬಗ್ಗೆಗಿರುವ ಆತಂಕಕಾರಿ ಅಂಶವಾಗಿದೆ.

ಅರುಣಾಚಲ ಪ್ರದೇಶದ ಆದಿಗಳು

*ಆದಿಗಳು ಅರುಣಾಚಲ ಪ್ರದೇಶದ ಹಲವಾರು ಸ್ಥಳೀಯ ಸಮುದಾಯಗಳಲ್ಲಿ ಒಂದಾಗಿದೆ. ಸಿಯಾಂಗ್, ಪೂರ್ವ
ಸಿಯಾಂಗ್, ಮೇಲಿನ ಸಿಯಾಂಗ್, ಪಶ್ಚಿಮ ಸಿಯಾಂಗ್, ದಿಬಾಂಗ್ ಕಣಿವೆಯ ಕೆಳಭಾಗ, ಲೋಹಿತ್, ಶಿಯೋಮಿ ಮತ್ತು ನಾಮ್ಸಾಯಿ ಜಿಲ್ಲೆಗಳ ಸಮಶೀತೋಷ್ಣ ಮತ್ತು ಉಪ-ಉಷ್ಣವಲಯದ ಪ್ರದೇಶಗಳ ಪ್ರಸ್ತುತ ಸ್ಥಳಗಳಲ್ಲಿ ನೆಲೆಸಲು ಉತ್ತರದಿಂದ ವಲಸೆ ಬಂದರು ಎನ್ನುವುದು ಅವರ ನಂಬಿಕೆ.

*ಆದಿ ಎಂದರೆ ಬೆಟ್ಟ ಅಥವಾ ಪರ್ವತದ ತುದಿ ಎಂದು ಅರ್ಥ.

*ಆದಿಗಳು ಸೈನೋ-ಟಿಬೆಟಿಯನ್ ಭಾಷೆಯನ್ನು ಆಡುತ್ತಾರೆ.

*ಅವರು ಎಲ್ಲಾ ಬುಡಕಟ್ಟುಗಳಂತೆಯೇ ಸಾಂಪ್ರದಾಯಿಕವಾಗಿ ಪ್ರಕೃತಿಯ ಆರಾಧಕರಾಗಿದ್ದು ಡೊನಿ-ಪೋಲೊ ನಂಬಿಕೆಯ ಅನುಸಾರ ನಡೆಯುತ್ತಾರೆ.

*ತಮ್ಮ ಜೀವನೋಪಾಯ ಮತ್ತು ಜೀವನಶೈಲಿಯಲ್ಲಿ ಸಂಪೂರ್ಣವಾಗಿ ಸ್ವಾವಲಂಬಿಗಳಾಗಿದ್ದಾರೆ. ಅರಣ್ಯದಿಂದಲೇ ಅವರು ತಮ್ಮೆಲ್ಲ ಸಂಪನ್ಮೂಲಗಳನ್ನು ಅರಣ್ಯಗಳಿಂದ ಪಡೆಯುವುದರಿಂದ ಅರಣ್ಯವನ್ನು ತಮ್ಮಪ್ರಾಣದಂತೆ ರಕ್ಷಿಸುತ್ತಾರೆ.

ವಿಶೇಷ ಕೌಶಲ: ಕ್ಷಿಪ್ರ ಮನೆ ನಿರ್ಮಾಣ

*ಮನೆ ತಯಾರಿಕೆಯಲ್ಲಿನ ಅವರ ಕುಶಲತೆಯು ಆಶ್ಚರ್ಯಕಾರಿಯಾಗಿದೆ. ಅವರು ಮನೆಯನ್ನು ನಿರ್ಮಿಸಲು ಕೇವಲ ಒಂದು ಅಥವಾ ಎರಡು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಗಾತ್ರ ಮತ್ತು ನಿರ್ಮಾಣವು ತೊಡಗಿರುವ ವ್ಯಕ್ತಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

*ಆದಿಗಳು ಸಾಮಾನ್ಯವಾಗಿ ಆಯತಾಕಾರದ ಮತ್ತು ಊರುಗಂಬಗಳ ಮೇಲೆ ನಿರ್ಮಿಸಲಾದ ವಿಶಿಷ್ಟವಾದ ಎತ್ತರದ ಮನೆಗಳಲ್ಲಿ ವಾಸಿಸುತ್ತಾರೆ. ಆದಿಯ ಗಂಡಸರಲ್ಲಿ ಹೆಚ್ಚಿನವರು ಉತ್ತಮ ಕುಶಲಕರ್ಮಿಗಳಾಗಿದ್ದು ವಿವಿಧ ಬಗೆಯ ಸಸ್ಯಸಾಮಗ್ರಿಗಳನ್ನು ಬಳಸಿ ಮನೆಗಳನ್ನು ನಿರ್ಮಿಸುವ ವಿಶಿಷ್ಟ ವಿಧಾನದಲ್ಲಿ ಪರಿಣಿತರು. ಈ ಸಾಂಪ್ರದಾಯಿಕ ಮನೆಗಳನ್ನು ವಿವಿಧರೀತಿಯ ಬಿದಿರು, ಮರ, ಬೆತ್ತ, ಎಲೆಗಳು ಇತ್ಯಾದಿಗಳಿಂದ ನಿರ್ಮಿಸಲಾಗುತ್ತದೆ. ಅವುಗಳ ನಿರ್ಮಾಣದಲ್ಲಿ ಯಾವುದೇ ಮೊಳೆಗಳನ್ನು ಕೂಡಾ ಬಳಸಲಾಗುವುದಿಲ್ಲ.

ಅರುಣಾಚಲ ಪ್ರದೇಶದ ತಂಗ್ಸಾಗಳು

ಅರುಣಾಚಲ ಪ್ರದೇಶದ ತಂಗ್ಸಾಗಳು ಪಟ್ಕೈ ಬೆಟ್ಟಗಳ ಮಡಿಲಲ್ಲಿರುವ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ವಾಸಿಸುತ್ತಾರೆ. ಇಲ್ಲಿನ‌ ಮನೋಹರವಾದ ನೋವಾ-ದೇಹಿಂಗ್ ಸುಂದರವಾದ ನದಿಯು ಸ್ಥಳೀಯ ನಿವಾಸಿಗಳ ಜೀವನಾಧಾರವಾದ ಪ್ರಾಚೀನ ಕಾಡುಗಳ ಮೂಲಕ ಹಾದುಹೋಗುತ್ತದೆ.

ತಂಗ್ಸಾಗಳ ವಿಶೇಷ ಪಾರಂಪರಿಕ ಕೌಶಲ್ಯ: ಬಿದಿರಿನ ಚಹಾ

*ತಂಗ್ಸಾಗಳು ಶ್ರೀಮಂತಸಾಂಸ್ಕೃತಿಕಪರಂಪರೆಯನ್ನು ಹೊಂದಿದ್ದಾರೆ. ನೈಸರ್ಗಿಕವಾಗಿ ಆಹಾರ ಸಂಸ್ಕರಣೆ, ಸಂರಕ್ಷಣೆ, ಅಡುಗೆ, ನೇಯ್ದೆ, ವಾಸ್ತುಶಿಲ್ಪ ದ ಮತ್ತು ಬುಟ್ಟಿ ಹೆಣಿಗೆಯ ಕುರಿತು ಅವರದೇ ಆದ ಸಾಂಪ್ರದಾಯಿಕ ಜ್ಞಾನ, ಕೌಶಲಗಳನ್ನು ಹೊಂದಿದ್ದಾರೆ.

*ಅವರು ಅನುಸರಿಸುತ್ತಿರುವ ಪದ್ಧತಿಗಳಲ್ಲಿ ಇಂದಿಗೂ ಅವರು ಉಳಿಸಿಕೊಂಡು ಬಂದಿರುವುದರಲ್ಲಿ ಅತ್ಯಂತ ಆಕರ್ಷಕವಾದದ್ದು ಬಿದಿರಿನಲ್ಲಿ ಚಹಾ ತಯಾರಿಕೆ. ಬ್ರಿಟಿಷರು ಭಾರತಕ್ಕೆ ಚಹಾವನ್ನು ಪರಿಚಯಿಸುವುದಕ್ಕೂ ಮೊದಲೇ ತಂಗ್ಸಾಗಳು ಈ‌ ಪಾನೀಯವನ್ನು ತಯಾರಿಸುತ್ತಿದ್ದರು ಎಂದು ಹೇಳಲಾಗುತ್ತದೆ.ಪುರಾತನ ಕಾಲದಿಂದಲೂ ತಂಗ್ಸಾಗಳು ಈ ಚಹಾ ಎಲೆಗಳನ್ನು ತಮ್ಮದೇ ಸಾಂಪ್ರದಾಯಿಕ ವಿಧಾನದಲ್ಲಿ ಸಂಸ್ಕರಿಸುತ್ತಿದ್ದಾರೆ. ಈ ವಿಧಾನವು - ಹುರಿದಿಟ್ಟ ಒಣ ಚಹಾವನ್ನು ನೈಸರ್ಗಿಕವಾಗಿ - ಹಲವು ವರ್ಷಗಳವರೆಗೆ ಸಂರಕ್ಷಿಸುತ್ತದೆ. ಚಹಾದ ಎಲೆಗಳನ್ನು ಕಿತ್ತ ಮೇಲೆ ಅದನ್ನು ಬಿದಿರಿನ ಕೊಳವೆಯಲ್ಲಿ ಹುರಿದು ಒಣಗಿಸುತ್ತಾರೆ. ಹಾಗೂ ಚಹಾವನ್ನು ಕೂಡ ಬಿದಿರಿನ ಕೊಳವೆಗಳಲ್ಲಿಯೇ ಈಗಿನ ಕೆಟೆಲ್ ಗಳಲ್ಲಿ ಕುದಿಸುವಂತೆ ತಯಾರಿಸುತ್ತಾರೆ. ಈ ಚಹಾದಲ್ಲಿ ಔಷಧೀಯ ಗುಣಗಳಿದೆ ಎಂದು ನಂಬಲಾಗಿದೆ.ತಂಗ್ಸಾಗಳು ಬಿದಿರಿನಲ್ಲಿ ಚಹವನ್ನು ಮಾತ್ರ ತಯಾರಿಸುವುದಿಲ್ಲ ಅದರ ಜೊತೆಗೆ ಅವರ ಪ್ರಧಾನ ಆಹಾರವಾದ ಅಕ್ಕಿ, ಮಾಂಸ ಮತ್ತು ಮೀನನ್ನು ಕೂಡ ಸಾಂಪ್ರದಾಯಿಕ ವಿಧಾನದಲ್ಲಿ ಬಿದಿರಿನ ಕೊಳವೆಗಳಲ್ಲಿಯೇ ಬೇಯಿಸುತ್ತಾರೆ. ಈ ರೀತಿ ಬೇಯಿಸಿದ ಆಹಾರಗಳು ಅತ್ಯಂತ ಆರೋಗ್ಯಕರವಾದುದು ಎಂದು ಭಾವಿಸುತ್ತಾರೆ.

*ಬುಟ್ಟಿಗಳು, ಪಾತ್ರೆಗಳು, ಚಾಪೆಗಳು ಇತ್ಯಾದಿಗಳ ತಯಾರಿಕೆಗೆ ಸ್ಥಳೀಯವಾಗಿ ದೊರೆಯುವ ವಿವಿಧರೀತಿಯ ಬಿದಿರು ಹಾಗೂ ಎಲೆಗಳನ್ನೇ ಬಳಸುತ್ತಿದ್ದು ಇವರ ಬದುಕು ಸುಸ್ಥಿರ ಬದುಕಿನ ಸುಂದರ ಮಾದರಿಯಾಗಿದೆ.

ರಾಜಸ್ತಾನದ ಕಲ್ಬೆಲಿಯಾಗಳು

*ಸಾಂಪ್ರದಾಯಿಕವಾಗಿ ಹಾವಾಡಿಗ ವೃತ್ತಿಯಲ್ಲಿ ತೊಡಗಿಸಿಕೊಂಡ ಕಲ್ಬೆಲಿಯಾಗಳು ಯೋಗಿ ಪಂಥಕ್ಕೆ ಸೇರಿದ ಅಲೆಮಾರಿ ಸಮುದಾಯವಾದ ನವನಾಥ ಕುಟುಂಬಕ್ಕೆ ಸೇರಿದವರು. ಸ್ಥಳೀಯವಾಗಿ ಅವರನ್ನು ಘೂಮಂತರ್‌ ; ಎಂದರೆ ಅಲೆಮಾರಿಗಳು ಎನ್ನಲಾಗುತ್ತದೆ.

*ಕಲ್ಬೆಲಿಯಾ ಎಂದರೆ ಸ್ಥಳೀಯ ಭಾಷೆಯಲ್ಲಿ ಕಾಲ್ ಎಂದರೆ ಹಾವು ಹಾಗೂ ಬೆಲಿಯಾ ಎಂದರೆ ಸ್ನೇಹ ಎಂದು ಅರ್ಥ.ಅಂದರೆ ಹಾವಿನ ಸ್ನೇಹ ಹೊಂದಿದವರು.

*1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಯಾದಾಗಿಂದ ಮತ್ತು ಹಾವು ಸಾಕುವುದರ ಮೇಲೆ ನಿಷೇಧ ಹೇರಿದ್ದರಿಂದ ಕಲ್ಲೆಲಿಯಾಗಳು ತಮ್ಮ ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಕಳೆದುಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ಪ್ರದರ್ಶನ ಕಲೆಯನ್ನು ಮುಂದುವರೆಸುತ್ತಿದ್ದಾರೆ. ಕಲ್ಬೆಲಿಯಾದ ಸಾಂಪ್ರದಾಯಿಕ ದೇಸಿ ಸಂಗೀತ, ಹಾಡು, ನೃತ್ಯ ಮತ್ತು ಕರಕುಶಲಕಲೆಗಳು (ಕಸೂತಿ, ಸಾಂಪ್ರದಾಯಿಕ ಆಭರಣಗಳು) - ಎಲ್ಲವೂ ಒಟ್ಟಾಗಿ ವರ್ಣರಂಜಿತವಾದ ಜಾನಪದ ಪ್ರಕಾರವನ್ನು ರೂಪಿಸಿದೆ.

*ಅವರಬುಡಕಟ್ಟುಅಸ್ಮಿತೆಯ ಜೀವಾಳವಾಗಿರುವ ಹಾವಿನಂತಹ ಚಲನೆಗಳನ್ನು ಅನುಸರಿಸುವ ನರ್ತಕರ ಚಲನೆಗಳು ಅವರ ಜಾನಪದ ನೃತ್ಯಪ್ರಕಾರವನ್ನು ಅನನ್ಯವಾಗಿಸಿದೆ.

*ಕಲ್ಬೆಲಿಯಾದ ನೃತ್ಯಗಾರರ ಉತ್ಸಾಹಭರಿತ, - ಶಕ್ತಿಯುತವಾದ ನೃತ್ಯಕ್ಕಾಗಿ ಪ್ರಪಂಚದಾದ್ಯಂತ -ಹೆಸರುವಾಸಿಯಾಗಿದ್ದಾರೆ. ಗಂಡಸರು ಸಂಗೀತವನ್ನು ನುಡಿಸುತ್ತಾರೆ ಅವರು ಬಳಸುವ ಮುಖ್ಯ ವಾದ್ಯ ಪುಂಗಿ ಅಥವ ಬೀನ್.

*ರಾಜಸ್ಥಾನದ ಕಲ್ಪೆಲಿಯಾಗಳು ಹಾಗೂ ಅವರ ಪೂರ್ವಜರ ಕುರಿತು ಅನೇಕ ಸಂಶೋಧನೆಗಳು ಮತ್ತು ಚಲನಚಿತ್ರಗಳಿವೆ. ಇವರ ಪೂರ್ವಜರು ದಶಕಗಳ ಹಿಂದೆ ಅಮೆರಿಕ ಮತ್ತು ಯುರೋಪ್‌ಗೆ ವಲಸೆ ಹೋಗಿ ನೆಲೆಸಿದ ರೋಮನ್ನರಿಗಿಂತಲೂ ಹಿಂದಿನವರು ಎಂದು ಹೇಳಲಾಗುತ್ತದೆ.

*ಯುನೆಸ್ಕೊ 2003ರ ತನ್ನ ಹೆರಿಟೇಜ್ ಆಫ್ ಹ್ಯುಮ್ಯಾನಿಟಿಯ ಪ್ರಾತಿನಿಧಿಕ ಪಟ್ಟಿಯಲ್ಲಿ ಕಲ್ಬೆಲಿಯಾ ವನ್ನು ಸೇರಿಸಿದೆ.

*ಈ ಹಳ್ಳಿಗಳಲ್ಲಿರುವ ಕಲಾವಿದರ ಬದುಕು ದುಸ್ಥರವಾಗಿದ್ದು ಕಲ್ಬೆಲಿಯಾದ ಸಂಗೀತಗಾರರು ಹಾಗೂ ನರ್ತಕರ - ಸಂಖ್ಯೆ ಕಡಿಮೆಯಾಗುತ್ತಿದೆ.

*ಕಲ್ಬೆಲಿಯಾದ ಕಲಾವಿದರನ್ನು ಲಮ್ಹೆ, ರುಡಾಲಿ ಹಾಗೂ ಹಲವು ಸಾಕ್ಷ್ಯಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಕಲೆಲಿಯಾ ನೃತ್ಯ ಕುರಿತು ಪುಸ್ತಕಗಳನ್ನು ಕೂಡ ಬರೆಯಲಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಂಚಿಗೆ ಸರಿಸಿರುವುದರಿಂದ ಅವರ ಜೀವನೋಪಾಯ ಹಾಗೂ ಸ್ಥಾನಮಾನಗಳ ಮೇಲೆ ಪರಿಣಾಮ ಬೀರಿದೆ. ಕಲ್ಬೆಲಿಯ ಮಹಿಳೆಯರು ನರ್ತಕಿಯರಾಗಿ ತಮ್ಮಸಾಂಸ್ಕೃತಿಕಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ.

ಪಶ್ಚಿಮ ಬಂಗಾಳದ ರಾಜ್ಬೊಂಗ್ಶಿಗಳು

*ಭಾರತದಈಶಾನ್ಯ ಭಾಗದಲ್ಲಿ ನೆಲೆಸಿರುವ ಇವರು ಅತಿದೊಡ್ಡ ಹಾಗೂ ಪ್ರಾಚೀನ ಜನಾಂಗಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದ್ದಾರೆ.

*ನೈಸರ್ಗಿಕವಾಗಿ ಶ್ರೀಮಂತ ಪ್ರದೇಶದಲ್ಲಿದ್ದು ಕೃಷಿಯು ಇವರ ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿದೆ.

*ಈ ಸಮುದಾಯವು ತಮ್ಮ ಹಿರಿಕರಿಂದ ಪಡೆದ ಶ್ರೀಮಂತಸಾಂಸ್ಕೃತಿಕಪರಂಪರೆಯೊಂದಿಗೆ ಸ್ವಂತ ಉಪಭಾಷೆಗಳು, ಕಲಾ ಪ್ರಕಾರಗಳು ಹಾಗೂ ಜೀವನ ವಿಧಾನವನ್ನು ಹೊಂದಿದೆ. ರಾಜೇಂಗಿ ಎಂದರೆ ರಾಜ ಸಮುದಾಯ ಎಂದರ್ಥ. ಅವರು

*ಕೋಚ್ ಸಾಮ್ರಾಜ್ಯಕ್ಕೆ ಹೇಳಲಾಗುತ್ತದೆ. ಬ್ರಿಟಿಷರು ಮತ್ತಿತರ ಅನ್ಯರ ದಾಳಿಯಿಂದ ಅವರು ತಮ್ಮ ಭೂಮಿಯ ಒಡೆತನ ಹಾಗೂ ಸುಸ್ಥಿರವಾಗಿದ್ದ ಗ್ರಾಮೀಣ ಆರ್ಥಿಕತೆಯನ್ನು ಕಳೆದುಕೊಂಡರು.

ರಾಜ್ಬೊಂಗ್ಶಿಗಳ ಕಲಾ ಪರಂಪರೆ

*ರಾಜ್ಬೊಂಗ್ಶಿಗಳು ವೈವಿಧ್ಯಮಯವಾದ ಜಾನಪದ ಕಲಾಪ್ರಕಾರಗಳನ್ನು ಹೊಂದಿದ್ದಾರೆ. ಇವರು ಬಿದಿರು ಮತ್ತು ಧೋಕ್ರಾದಂತಹ ಕರಕುಶಲಕಲೆಗಳು, ಪ್ರದರ್ಶನ ಕಲೆಗಳಾದ ಗೋಮಿರಾ ನೃತ್ಯ (ಮುಖ ನಾಚ್ ) ಮತ್ತು ವಿಡಂಬನಾತ್ಮಕ ಜಾನಪದ ನಾಟಕ ಪ್ರಕಾರವಾದ ಖೋನ್‌ಗಳನ್ನು ಹೊಂದಿದ್ದಾರೆ. ಸಾಂಪ್ರದಾಯಿಕವಾಗಿ ಈ ಸಮುದಾಯದ ಎಲ್ಲಾ ಕಲಾಪ್ರಕಾರಗಳು ನಿಸರ್ಗ ಮತ್ತು ಆಧ್ಯಾತ್ಮಿಕತೆಯೊಂದಿಗೆ ಬೆಸೆದುಕೊಂಡಿದೆ.

ಗೋಮಿರಾ ನೃತ್ಯ

*ಸ್ಥಳೀಯವಾಗಿ ಮುಖ ನಾಚ್ ಎಂದು ಕರೆಯಲಾಗುವ ಗೋಮಿರಾ ನೃತ್ಯವು ಧಾರ್ಮಿಕ ನೃತ್ಯ ಅಥವ ಜಾನಪದ ರಂಗಭೂಮಿಯ ಸಂಗೀತ ನಾಟಕ ಪ್ರಕಾರವಾಗಿದೆ. ಗೋಮಿರಾ ಮರದಿಂದ ಮಾಡಿದ ವಿವಿಧ ದೇವರ ಮುಖವಾಡಗಳನ್ನು ಧರಿಸಿ ಈ ನೃತ್ಯವನ್ನು ಮಾಡುತ್ತಾರೆ. ಒಮ್ಮೆ ಮುಖವಾಡವನ್ನು ಧರಿಸಿದರೆ ಆ ಮುಖವಾಡವೇ ಆ ನೃತ್ಯಗಾರರಲ್ಲಿ ಜೀವಂತವಾಗಿ ನರ್ತಕರ ವ್ಯಕ್ತಿತ್ವವು ಇಲ್ಲವಾಗಿ ಅವರು ಮುಖವಾಡವೇ ಆಗಿಬಿಡುತ್ತಾರೆ ಎಂದು ನಂಬಲಾಗುತ್ತದೆ. ನೃತ್ಯವು ಡ್ರಮ್‌ಗಳು, ಧಕ್, ಶಹನಾಯಿ ಮತ್ತು ಲೋಹದಗಾಂಗ್ ನಂತಹ ವಾದ್ಯಗಳು, ಪಾತ್ರಕ್ಕನುಗುಣವಾದ ವರ್ಣರಂಜಿತವಾದ ವೇಷಭೂಷಣಗಳನ್ನು ಒಳಗೊಂಡಿರುತ್ತದೆ. ಈ ಪ್ರದರ್ಶನಗಳು ಈ ಸಮುದಾಯಗಳಿಗೆ ಜೀವನೋಪಾಯಕ್ಕೊಂದು ಸಣ್ಣ ಆಧಾರವನ್ನು ಒದಗಿಸುತ್ತದೆ.

*ಗೋಮಿರಾ ಮುಖವಾಡಗಳನ್ನು ತಯಾರಿಸುವವರು ದಕ್ಷಿಣ ದಿನಾಜ್‌ಪುರದ ಕುಷ್ಮಾಂಡಿ ಮತ್ತು ಉತ್ತರ ದಿನಾಜ್‌ಪುರದ ಕಲಿಯಾ ಗಂಜ್ನಲ್ಲಿದ್ದಾರೆ.

*ಈ ನೃತ್ಯವನ್ನು ಗ್ರಾಮ ದೇವತೆ ಚಂಡಿಯನ್ನು ಪ್ರಸನ್ನ ಗೊಳಿಸಲು ಮತ್ತು ಆಕೆ ಆಶೀರ್ವಾದ ಪಡೆಯಲು ನಡೆಸಲಾಗುತ್ತದೆ. ಹರಕೆ ಹೊತ್ತು ಭಕ್ತರು ಕೂಡ ಮುಖವಾಡಗಳನ್ನು ಹಾಕುತ್ತಾರೆ.

ಖೋನ್ ನಾಟಕ‌ ಪ್ರಕಾರ

*ಇದೇ ಸಮುದಾಯದ ಸಾಂಪ್ರದಾಯಿಕ ಜಾನಪದ ಹಾಸ್ಯ ನಾಟಕ ಪ್ರಕಾರವಾದ ಖೋನ್‌ 200 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಸ್ಥಳೀಯ ಘಟನೆಗಳನ್ನು ಮೂಲವಾಗಿಟ್ಟು ನಾಟಕವಾಗಿ ಇದನ್ನು ಪ್ರಸ್ತುತ ಪಡಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

*ಈ‌ ಖೋನ್ ಹಾಡುಗಳು ರಾಮಾಯಣದ ಹಾಡುಗಳಿಂದ ಹುಟ್ಟಿಕೊಂಡಿವೆ ಎಂದು ಪ್ರತೀತಿ ಇದೆ.

*ಈ ರೀತಿಯಾಗಿ ದೇಶಾದ್ಯಂತ ಹರಡಿಕೊಂಡಿರುವ ಸ್ಥಳೀಯಸಮುದಾಯಗಳಸಾಂಸ್ಕೃತಿಕವಿಶಿಷ್ಟ ಪರಂಪರೆಗಳನ್ನು ರಕ್ಷಿಸಬೇಕಿರುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.