ADVERTISEMENT

'ದೀಪಾವಳಿ ವಿಶೇಷಾಂಕ': ಕಥೆ, ಕವನ ಹಾಗೂ ಮಕ್ಕಳ ವರ್ಣಚಿತ್ರ ಸ್ಪರ್ಧೆಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 15:47 IST
Last Updated 17 ಜುಲೈ 2018, 15:47 IST
   

ಬೆಂಗಳೂರು:ಕನ್ನಡ ಕಥಾ ಜಗತ್ತಿನ ವಾರ್ಷಿಕ ಸಂಭ್ರಮ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಗೆ ಪ್ರವೇಶಗಳನ್ನು ಆಹ್ವಾನಿಸಲಾಗಿದೆ. ಹೊಸ ಪ್ರಯತ್ನಗಳನ್ನು ಉತ್ತೇಜಿಸಲು ಈ ಸ್ಪರ್ಧೆ. ಕಥೆ ಎರಡು ಸಾವಿರ ಪದಗಳನ್ನು ಮೀರಬಾರದು.
ಸ್ಪರ್ಧೆಯ ನಿಯಮಗಳು
* ಸ್ಪರ್ಧೆಗೆ ಕಳುಹಿಸುವ ಕಥೆ, ಕವನ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ, ಬ್ಲಾಗ್, ಜಾಲತಾಣ, ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಹೀಗೆ ಎಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

* ನುಡಿ ಅಥವಾ ಬರಹ ಇಲ್ಲವೇ ಯೂನಿಕೋಡ್ ತಂತ್ರಾಂಶದಲ್ಲಿ ಕಥೆ– ಕವನಗಳನ್ನು ಸಿದ್ಧಪಡಿಸಿ ಇ– ಮೇಲ್ ಮೂಲಕ ಕಳಿಸಿಕೊಡಿ. ಇ– ಮೇಲ್: deepavali@prajavani.co.in

* ಮಕ್ಕಳ ವರ್ಣಚಿತ್ರಗಳು ಕೂಡ ಸ್ವತಂತ್ರ ರಚನೆಯಾಗಿದ್ದು ಎ– 4 ಅಳತೆಯಲ್ಲಿರಲಿ. ವಿದ್ಯಾರ್ಥಿಗಳು ತಮ್ಮ ಪ್ರವೇಶಗಳನ್ನು ಶಾಲೆಯ ಮುಖ್ಯಸ್ಥರಿಂದ ದೃಢೀಕರಿಸಿ ಕಳುಹಿಸಬೇಕು.

ADVERTISEMENT

* ಸ್ಪರ್ಧಿಗಳು ಕಥೆ/ ಕವನ/ ಚಿತ್ರ ಇರುವ ಪುಟದಲ್ಲಿ ಹೆಸರು, ವಿವರ ಬರೆಯಬಾರದು. ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು, ಅಂಚೆ ವಿಳಾಸ, ಫೋನ್ ನಂಬರ್, ಇ– ಮೇಲ್ ವಿಳಾಸ ಇರಲಿ. ಜೊತೆಗೆ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 80 ಪದ ಮೀರದಂತೆ ಕಿರು ಪರಿಚಯವನ್ನು ಬರೆದು ಕಳುಹಿಸಬೇಕು.

* ಪ್ರವೇಶಗಳ ಲಕೋಟೆಯ ಮೇಲೆ ತಾವು ಕಳುಹಿಸುತ್ತಿರುವ ಸ್ಪರ್ಧೆಯ ವಿಭಾಗವನ್ನು ಸ್ಪಷ್ಟವಾಗಿ ನಮೂದಿಸಬೇಕು.

* ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ.

* ಸ್ಪರ್ಧೆಗೆ ಕಳುಹಿಸಿರುವ ರಚನೆಗಳನ್ನು ಹಿಂದಿರುಗಿಸುವುದಿಲ್ಲ.

* ಬಹುಮಾನಿತ ಕಥೆ, ಕವನಗಳನ್ನು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ಕಾಯ್ದಿರಿಸಿಕೊಂಡಿದೆ.

* ಸಂಪಾದಕರ ತೀರ್ಮಾನವೇ ಅಂತಿಮ.

ಕಥಾ ಸ್ಪರ್ಧೆ
ಮೊದಲ ಬಹುಮಾನ ರೂ 20,000

ಎರಡನೇ ಬಹುಮಾನ ರೂ 15,000

ಮೂರನೇ ಬಹುಮಾನ ರೂ 10,000

ಕವನ ಸ್ಪರ್ಧೆ

ಮೊದಲ ಬಹುಮಾನ ರೂ 5,000

ಎರಡನೇ ಬಹುಮಾನ ರೂ 3,000

ಮೂರನೇ ಬಹುಮಾನ ರೂ 2,500

ಮಕ್ಕಳ ವರ್ಣಚಿತ್ರ ಸ್ಪರ್ಧೆ

ಮೊದಲ ಮೂರು ಬಹುಮಾನಗಳು ಮತ್ತು ಐದು ಸಮಾಧಾನಕರ ಬಹುಮಾನಗಳು

ತಲಾ ರೂ 2,500
***

* ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ದೀಪಾವಳಿ ವಿಶೇಷಾಂಕ ವಿಭಾಗ, ‘ಪ್ರಜಾವಾಣಿ’, ನಂ. 75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು–560001

* ಪ್ರವೇಶಗಳು ನಮಗೆ ತಲುಪಲು ಕೊನೆಯ ದಿನಾಂಕ ಆಗಸ್ಟ್ 14, 2018

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.