ADVERTISEMENT

ಅವಳೇ ನನ್ನವಳು...

ಸಂಪತ್ ಬೆಟ್ಟಗೆರೆ
Published 5 ಸೆಪ್ಟೆಂಬರ್ 2018, 19:30 IST
Last Updated 5 ಸೆಪ್ಟೆಂಬರ್ 2018, 19:30 IST
ಸಂಪತ್‌ ಬೆಟ್ಟಗೆರೆ
ಸಂಪತ್‌ ಬೆಟ್ಟಗೆರೆ   

ಧರ್ಮ, ಅರ್ಥ, ಕಾಮ, ಮೋಕ್ಷ ಮಾರ್ಗದಲ್ಲಿ ನಿಷ್ಕಲ್ಮಶಭಾವವಾಗಿ ಬಾಳುವ ಕಾವ್ಯಕನ್ನಿಕೆಯೇ ಪ್ರಾಣ ಸ್ನೇಹಿತೆ. ಅವಳೇ ನನ್ನವಳು. ಅವಳಿಗಾಗಿ ಸದಾ ಹೃದಯ ಮಿಡಿಯುತ್ತಿದೆ.

ನನ್ನ ಮದುವೆ ಸರಳತೆಯಿಂದ ಕೂಡಿರಲಿ, ಜೀವನಪ್ರೀತಿ ಅದ್ದೂರಿಯಾಗಿರಲಿ. ಇದಕ್ಕೆ ಸಹೃದಯವಂತರ ಹಾರೈಕೆ ಬೇಕು. ನನ್ನ ಬಾಳ ಸಂಗಾತಿ ಸಾಹಿತ್ಯ ಪ್ರೇಮಿಯಾಗಿದ್ದರೆ ಚೆನ್ನ. ಆಕೆ ಕವಿ ಜಯಂತಕಾಯ್ಕಿಣಿ ಅವರ ಹಾಡೊಂದರ ಸಾಲಿನಂತೆ ‘ನಾ ಬರೆಯದ ಕವಿತೆಗಳ ಸಂಕಲನ’ವಾಗಿರಬೇಕು. ನನ್ನಂತರಂಗದಲ್ಲಿ ಅಕ್ಷರದ ಒರತೆಯಾಗಿ ಸದಾ ಜಿನುಗುತ್ತಿರಬೇಕು.

ಅವಳು, ನಾನು ಪ್ರತಿದಿನವು ನಮ್ಮ ಮನೆಯ ಕಾಫಿತೋಟದ ಓಣಿದಾರಿಯಲ್ಲಿ ಪರಸ್ಪರ ಕೈ ಕೈ ಹಿಡಿದು ಸಾಗಬೇಕು. ಹುಲ್ಲಿನ ಮೆತ್ತೆಯ ಮೇಲೆ ಕುಳಿತು ಪ್ರತಿದಿನವು ಮದುವೆಯಾದಂತೆ ಕನಸು ಕಾಣಬೇಕು. ಅಂತಹ ಕನಸುಗಾರ್ತಿ ನನ್ನವಳಾಗಬೇಕೆಂದು ಬಯಸುವ ಕನಸುಗಾರ ನಾನು. ನಮ್ಮಿಬ್ಬರ ನಡುವೆ ಯಾವುದೇ ಸಂಶಯಗಳಿರಬಾರದು. ಪರಸ್ಪರ ನಂಬಿಕೆಯೇ ಸಂಸಾರಕ್ಕೆ ಜೀವದ್ರವ್ಯ. ಆರ್ಥಿಕವಾಗಿ ಬಡತನವಿದ್ದರೂ ಹೃದಯ ಶ್ರೀಮಂತಿಕೆಗೆ ಯಾವತ್ತೂ ಕೊರತೆ ಇರದಂತೆ ಬದುಕಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.