ADVERTISEMENT

ಕುವೆಂಪು ಪದ ಸೃಷ್ಟಿ–ಕೀಳ್ಪರಿಜು

ಜಿ.ಕೃಷ್ಣಪ್ಪ
Published 7 ಜನವರಿ 2024, 3:17 IST
Last Updated 7 ಜನವರಿ 2024, 3:17 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಕೀಳ್ಪರಿಜು

ಕೀಳ್ಪರಿಜು (ನಾ). ಹೀನವಾದ ರೂಪ (ಕೀಳಾದ ರೂಪ)

ADVERTISEMENT

(ಕೀಳ್ + ಪರಿಜು)

ವಾಲ್ಮೀಕಿಯ ಮಂಥರೆ ಪಾತ್ರವು ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಗಳ ವಿಶಾಲ ನೆಲೆಯಲ್ಲಿ ಮರುಸೃಷ್ಟಿಗೊಂಡಿದೆ. ಅವರಿಗೆ ಮಂಥರೆ ಪಾತ್ರದ ಬಗ್ಗೆ ವಿಶೇಷ ಒಲವು. ಅವರು ಮಂಥರೆಗೆ ಕಾವ್ಯ ಕರುಣಾರಸದ ಲಹರಿಯ ಹರಿಯ ಸಿರಿ ಕೈಗಳ ಸ್ಪರ್ಶದಿಂದ ಹೀನವಾದ ರೂಪ ಇಲ್ಲವಾಗುತ್ತದೆ ಎಂದು ಹೇಳಿ, ಅವಳ ಆತ್ಮ ಸೌಂದರ್ಯವನ್ನು ಪ್ರಕಾಶಿಸಿದ್ದಾರೆ. ಆ ಸಂದರ್ಭದಲ್ಲಿ ‘ಕೀಳ್ವರಿಜು’ ಪದ ಸೃಷ್ಟಿಸಿದ್ದಾರೆ. ಪಾತ್ರಕ್ಕೆ ಅಂಟಿದ ಕಳಂಕವನ್ನು ತೊಡೆದು ಮಮತೆಯ ಮಂಥರೆಯನ್ನಾಗಿಸಿದ್ದಾರೆ.


ಕಾವ್ಯ ಕರುಣಾರಸದ ಲಹರಿಯ ಹರಿಯ ಸಿರಿಯ

ಕರಪದ್ಮ ಚುಂಬನಕೆ ನಿನ್ನ ಕೀಳ್ವರಿಜಳಿದು

ಮತ್ತೆ ಹೃದಯದ ಲಸದ್ರೂಪಂ ಮೆರೆಯದಿಹುದೆ? (1.6: 88-90)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.