ADVERTISEMENT

ಕುವೆಂಪು ಪದ ಸೃಷ್ಟಿ: ಕಬ್ಬಗಣ್

ಜಿ.ಕೃಷ್ಣಪ್ಪ
Published 24 ನವೆಂಬರ್ 2024, 0:32 IST
Last Updated 24 ನವೆಂಬರ್ 2024, 0:32 IST
<div class="paragraphs"><p>ಕುವೆಂಪು</p></div>

ಕುವೆಂಪು

   
ಕಬ್ಬಗಣ್

ಕಬ್ಬಗಣ್ (ನಾ). ಕಾವ್ಯದೃಷ್ಟಿ (ಕಬ್ಬ + ಕಣ್)

ವಜ್ರರೋಮ ಮಹರ್ಷಿಗಳ ಕೃಪೆಯಿಂದ ಮತ್ತು ಅವರ ಶಿಷ್ಯರ ಸಹಾಯದಿಂದ ಲಕ್ಷ್ಮಣನು ಚಿತ್ರಕೂಟದಲ್ಲಿ ಪರ್ಣಶಾಲೆಯನ್ನು ಕಟ್ಟಿದನು. ಆಗಿನ ರಾಮಚಂದ್ರನ ಮನಸ್ಸಿನ ಉಲ್ಲಾಸವನ್ನು ಕವಿ ಹೀಗೆ ಚಿತ್ರಿಸಿದ್ದಾರೆ.

ADVERTISEMENT

‘ಅರಮನೆಯೊಳಿಹುದೇನೊ?

ಅರಸುತನಮೆದೆಯೊಳಿರೆ ಕಾಡರಮನೆಗೆಕೀಳೇ?

ರಸವಿಲ್ಲದಿಹ ಬಾಳಿಗರ ಮನೆಯೆ ಮರುಭೂಮಿ

ರಸಿಕಂಗಡವಿ ಸಗ್ಗಕಿಂ ಮಿಗಿಲ್ ಸೊಗಸಲ್ತೆ,

ಜೊತೆಯಿರಲ್ಕೊಲಿದ ಪೆಣ್, ಮೇಣ್ ಕಾಣ್ಬಕಬ್ಬಗಣ್? (1.8 : 72 - 76)

ಕಬ್ಬಗಣ್

ಕೆಯ್ಗೊಯ್ (ಕ್ರಿ). ಹೊಲದ ಬೆಳೆಯನ್ನು ಕುಯ್ಯು

(ಕೆಯ್ + ಕೊಯ್)

‘ಅದ್ವಿತೀಯಮಾ ದ್ವೀತಿಯ ದಿನಂ’ ಎಂಬ ರಾಕ್ಷಸ ಮತ್ತು ವಾನರರ ಭಯಂಕರ ಯುದ್ಧವನ್ನು ಕುವೆಂಪು ಒಕ್ಕಲಿಗರ ಹೊಲದ ಬೆಳೆ ಕೊಯ್ಯುವ ರೂಪಕದಲ್ಲಿ ಚಿತ್ರಿಸಿದ್ದಾರೆ. ರಾಕ್ಷಸ ವಜ್ರದಂಷ್ಟ್ರನ ಆಹುತಿಗೆ ಅಂಗದನ ಪಡೆ ತರಿದು ಬಿದ್ದದ್ದನ್ನು ಹೀಗೆ ವರ್ಣಿಸಿದ್ದಾರೆ:

ಕಿಡಿಗರೆವ ತನ್ನ ಕರಚಕ್ರಮಂ

ಗಿರ್ರನೆ ತಿರುಗಿಸುತ್ತಾ ಕರ್ಬುರಂ ಕೆಯ್‍ಗೊಯ್ವ

ಪೇರೊಕ್ಕಲಿಗನಂತೆ ತರಿದೊಟ್ಟಿದನು ಬಣಬೆಯಂ. (3.14 : 64 - 66)

ಕೆಯ್ = ಪೈರು, ಬೆಳೆ.

ಬಣಬೆ = ಮೆದೆ; ರಾಶಿ; ಒಟ್ಟಿಲು

ವಜ್ರದಂಷ್ಟ್ರನ್ನು ಕುಯ್ಯುವಂತೆ ತರಿದು ಮೆದೆ ಹಾಕಿದನು.

ಇದು ರೈತರ ಹೊಲಕುಯ್ಯುವ ಚಿತ್ರಣವಾಗಿ ರಾಕ್ಷಸತ್ವದ ಅಮಾನುಷ ಬಣ್ಣನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.