ADVERTISEMENT

ಕುವೆಂಪು ಪದ–ಪ್ರೇತವೃಕ್ಷ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 0:24 IST
Last Updated 27 ಅಕ್ಟೋಬರ್ 2024, 0:24 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಅಚಿನ್ನಿದ್ರೆ

ಅಚಿನ್ನಿದ್ರೆ (ನಾ). ಜಡತೆ ತುಂಬಿದ ನಿದ್ದೆ; ಎಚ್ಚರಗೊಳಿಸಲಾಗದ ನಿದ್ದೆ.

ADVERTISEMENT

(ಸಂ. ಅಚಿತ್ + ನಿದ್ರಾ)

ಗುರು ವಿಶ್ವಾಮಿತ್ರರೊಡನೆ ಕಾಡಿನಲ್ಲಿ ರಾಮ ಲಕ್ಷ್ಮಣರು ಸಾಗುವಾಗ ಗೌತಮ ಮಹಾಮುನಿಯ ಶಾಪದಿಂದ ಅಹಲ್ಯೆ ಬಂಡೆಯಾಗಿರುವ ಪ್ರದೇಶಕ್ಕೆ ಬರುತ್ತಾರೆ. ಅವಳ ಸ್ಥಿತಿಯನ್ನು ಕುವೆಂಪು ಅವರು ಹೀಗೆ ಚಿತ್ರಿಸಿದ್ದಾರೆ.

ಕನಿಕರದ

ಕಣ್ಗೆ ಬಾಹಿರೆಯಾಗಿ, ಜಗದ ನಿರ್ದಾಕ್ಷಿಣ್ಯ

ವಿಸ್ಮೃತಿಗೆ ತುತ್ತಾಗಿ, ವಜ್ರಮೌನದ ಅಚಿನ್

ನಿದ್ರೆಯಿಂದೆಳ್ಚರುವ ಬಯಕೆಯಿಂದೊರಗಿರ್ದ

ಸುಕ್ಷೇತ್ರಮಂ ಪ್ರವೇಶಿಸಿದುದೆ ತಡಂ, ಮರುಗಿ

ಕರಗಿದುದು ರಾಮಾತ್ಮವನಿಮಿತ್ತ ಶೋಕದಿಂ

ಅಹಲ್ಯೆಯಲ್ಲಿ ಚೈತನ್ಯ ಮರೆಯಾಗಿದೆ. ಅವಳು ಜಡತ್ವಕ್ಕೆ ಒಳಗಾಗಿದ್ದಾಳೆ. ಅದು ಅಚಿನಿದ್ರೆ. ಆ ಸುಕ್ಷೇತ್ರ ಪ್ರವೇಶಿಸಿದ ತಕ್ಷಣ ರಾಮನ ಆತ್ಮ ಮರುಗಿ ಕರಗಿತು.

ಇದೇ ಪದವನ್ನು ಅವರು ‘ಅಗ್ನಿಹಂಸ’ ಕವನ ಸಂಕಲನದ ‘ಋತ ಚಿನ್ಮಯೀ ಜಗನ್ಮಾತೆಗೆ’ ಕವನದಲ್ಲಿ ಆ ಜಗನ್ಮಾತೆಯನ್ನು ಪ್ರಾರ್ಥಿಸುವಾಗ ಹೀಗೆ ಬಳಸಿದ್ದಾರೆ:

ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆಯೆಲ್ಲವಾದೆ

ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮದ್ರೆಯಾದೆ.

ಎನಿತು ಕರೆದರೂ ಓಕೊಳ್ಳದಿರುವೆ ಅಚಿನ್ನಿದ್ರೆಯಾದೆ;

ಬೆಳಗಿ ನನ್ನಾತ್ಮಕಿಳಿದು ಬಾ, ತಾಯಿ, ನೀನೆ ಬ್ರಹ್ಮಬೋಧೆ.

ಕುರಂಗತನು

ಕುರಂಗತನು (ಗು). ಜಿಂಕೆಯ ಶರೀರವನ್ನು ತಾಳಿದ; ಜಿಂಕೆಯಂತೆ ವೇಷವನ್ನು ಹೊಂದಿದ

ಮಾರೀಚನು ಕಾಮರೂಪದಿಂದ ಜಿಂಕೆಯ ಶರೀರವನ್ನು ಹೊಂದಿ ಸೀತೆಯ ಮುಂದೆ ಸುಳಿದಾಡಿದನು ಎನ್ನುವುದನ್ನು ವರ್ಣಿಸುವಾಗ ಕುವೆಂಪು ‘ಕುರಂಗತನು’ ಪದ ರೂಪಿಸಿದ್ದಾರೆ.

ಕೊಂಕಿಸುತೆ

ಕೊರಳ ಬಿಂಕವನಕ್ಷಿಯಕ್ಷಿಣಿಯ ಬೇಟದಿಂ

ಬನಮೆಲ್ಲಮಂ ಗೋರಿಗೊಳ್ಳುತೆ ಕುರಂಗತನು

ಮಾರೀಚನಭಿನಯಿಸಿದನು ತನ್ನ ಪಾತ್ರಮಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.