ADVERTISEMENT

ಪ್ರಶಸ್ತಿಗೆ ಆಹ್ವಾನ| ನೇಚರ್ ಇನ್‍ಫೋಕಸ್ ಸಿನಿಮಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 16:55 IST
Last Updated 13 ಜೂನ್ 2019, 16:55 IST
ಯುವ ಛಾಯಾಗ್ರಾಹಕ ಪ್ರಶಸ್ತಿ ಪಡೆದ ಚಿತ್ರ (ಛಾಯಾಗ್ರಾಹಕ–ಶ್ಯಾಮ್‌ ಶಂಕರ್‌)
ಯುವ ಛಾಯಾಗ್ರಾಹಕ ಪ್ರಶಸ್ತಿ ಪಡೆದ ಚಿತ್ರ (ಛಾಯಾಗ್ರಾಹಕ–ಶ್ಯಾಮ್‌ ಶಂಕರ್‌)   

ನೇಚರ್ ಇನ್‍ಫೋಕಸ್ ಫಿಲ್ಮ್ (ಎನ್‍ಐಎಫ್) ವತಿಯಿಂದನೇಚರ್ ಇನ್‍ಫೋಕಸ್ ಸಿನಿಮಾ ಪ್ರಶಸ್ತಿ-2019ಗೆ ಅರ್ಜಿ ಆಹ್ವಾನಿಸಲಾಗಿದೆ.ಜೂನ್ 30ರ ವರೆಗೆ ಆಸಕ್ತರು ಪ್ರವೇಶಗಳನ್ನು ಸಲ್ಲಿಸಬಹುದು.

ನೇಚರ್ ಇನ್‍ಫೋಕಸ್ ವನ್ಯಜೀವಿ ಸಿನಿಮಾ ಪ್ರಶಸ್ತಿಗೆ ವೃತ್ತಿಪರ ಹಾಗೂ ಉದಯೋನ್ಮುಖ ಚಿತ್ರ ನಿರ್ಮಾಪಕರಿಬ್ಬರಿಂದಲೂ ಪ್ರವೇಶ ಆಹ್ವಾನಿಸಲಾಗಿದೆ. ಈ ಎರಡೂ ವಿಭಾಗದಲ್ಲಿ ನೇಚರ್ ಹಿಸ್ಟರಿ ಹಾಗೂ ಕನ್ಸರ್ವೇಷನ್ ಎಂಬ ಇನ್ನೆರಡು ಉಪ ವಿಭಾಗಗಳಿವೆ.

ಉದಯೋನ್ಮುಖ ಚಿತ್ರ ನಿರ್ಮಾಪಕರು ನೇಚರ್ ಹಿಸ್ಟರಿ ವಿಭಾಗದಲ್ಲಿ ಒಂದು ಪ್ರಾಣಿಯ, ಸಸ್ಯದ ಅಥವಾ ಆವಾಸ ಸ್ಥಾನದ ಕತೆಯನ್ನು 5 ನಿಮಿಷಗಳಲ್ಲಿ ಹೇಳಬೇಕು. ಅಥವಾ ಕನ್ಸರ್ವೇಷನ್ ವಿಭಾಗದಲ್ಲಿ ಸ್ಪರ್ಧೆಗೆ ಪಾಲ್ಗೊಳ್ಳುವವರು ಪ್ರಕೃತಿ ಸಂರಕ್ಷಣೆಗೆ ಸಂಬಂಧಿಸಿದ 5 ನಿಮಿಷದೊಳಗಿನ ಕಿರುಚಿತ್ರ ಸಲ್ಲಿಸಬೇಕು. ಮೊಬೈಲ್ ಮೊಮೆಂಟ್ಸ್ ಎಂಬ ಇನ್ನೊಂದು ವಿಭಾಗದಲ್ಲೂ ಸ್ಪರ್ಧಿಗಳು ಭಾಗವಹಿಸಬಹುದಾಗಿದ್ದು, ಅದರಲ್ಲಿ ಮೊಬೈಲ್‍ನಲ್ಲಿ ಸೆರೆಹಿಡಿಯಲಾದ ಪ್ರಾಣಿಯೊಂದರ ನಡವಳಿಕೆಯ ಎಡಿಟೆಡ್ ಅಥವಾ ಅನ್‍ಎಡಿಟೆಡ್ ವಿಡಿಯೋ ಕ್ಲಿಪ್‍ಗಳನ್ನು ಸಲ್ಲಿಕೆ ಮಾಡಬಹುದು. http://awards.natureinfocus.in/ ಮೂಲಕ ಮಾತ್ರ ಸ್ಪರ್ಧಿಗಳು ತಮ್ಮ ಪ್ರವೇಶಗಳನ್ನು ಸಲ್ಲಿಕೆ ಮಾಡಬೇಕು.

ADVERTISEMENT

ಉದಯೋನ್ಮುಖ ಪ್ರತಿಭೆ ಮತ್ತು ವೃತ್ತಿಪರ ವಿಭಾಗದಲ್ಲಿ ವಿಜೇತರಿಗೆ ಪ್ರತ್ಯೇಕವಾಗಿ ₹50 ಸಾವಿರ, ನಗದು, ಮೊಬೈಲ್ ಮೊಮೆಂಟ್ ವಿಭಾಗದಲ್ಲಿ ವಿಜೇತರಿಗೆ ₹10ಸಾವಿರ ನಗದು ಬಹುಮಾನವಿದೆ. ಹೆಚ್ಚಿನ ಮಾಹಿತಿಗೆ ಇಮೇಲ್: contests@natureinfocus.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.