‘ಗೋಪಿ ಮತ್ತು ಗಾಂಡಲೀನ’ ಕನ್ನಡ ಕಾವ್ಯ ಪರಂಪರೆಯ ಒಂದು ತುಂಟ ಅಧ್ಯಾಯ. 1971ರಲ್ಲಿ ಪ್ರಕಟವಾದ ಗೋಪಿ ಕಾವ್ಯದ ಸಂಕಲನಕ್ಕೀಗ ಐವತ್ತು ವರ್ಷ. ಕವಿಗೆ ಎಪ್ಪತ್ತೈದರ ಮಾಯದ ಪ್ರಾಯ (ಸೆ. 9, 1946). ಕವಿ-ಕಾವ್ಯದ ಬಗ್ಗೆ ಮಾತನಾಡುತ್ತಾ ಕವಿತೆಗಳನ್ನು ಹಾಡಾಗಿಸುವ ಕಾರ್ಯಕ್ರಮ ಪ್ರಜಾವಾಣಿ ಫೇಸ್‌ಬುಕ್ ನೇರಪ್ರಸಾರದಲ್ಲಿ ನಡೆಯಲಿದೆ.
ವಿಶೇಷ ಕಾರ್ಯಕ್ರಮದಲ್ಲಿ ಬಿ.ಆರ್.ಲಕ್ಷ್ಮಣ ರಾವ್ ಅವರ ಕಾವ್ಯದ ಬಗ್ಗೆ ಮಾತುಕತೆ ಮತ್ತು ಕವಿತೆಗಳನ್ನು ಹಾಡಾಗಿ ಕೇಳುವ ಅವಕಾಶವೂ ಸಿಗಲಿದೆ.ಬಿ.ಆರ್.ಎಲ್ ಮತ್ತು ಗಾಯಕಿಎಂ.ಡಿ.ಪಲ್ಲವಿ ಮುಖಾಮುಖಿಯಾಗಲಿದ್ದಾರೆ. ಹಾಡಾಗುವ ಕವಿತೆಗಳಿಗೆಕೃಷ್ಣ ಉಡುಪ, ಪ್ರದ್ಯುಮ್ನ, ವಾದಿ ಮೇಳವಾಗಲಿದ್ದಾರೆ.
ಶ್ರೀನಿವಾಸ ಜಿ ಕಪ್ಪಣ್ಣ ಅವರು ಕಾರ್ಯಕ್ರಮದ ಸಂಯೋಜನೆಯ ಹೊಣೆ ಹೊತ್ತಿದ್ದಾರೆ.12ನೇ ಸೆಪ್ಟೆಂಬರ್ 2021,ಭಾನುವಾರ ಮಧ್ಯಾಹ್ನ12:30ಕ್ಕೆ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಕವಿ–ಕಾವ್ಯ ವಿಶೇಷ ಪ್ರಸಾರವಾಗಲಿದೆ.
ಕಾವ್ಯ ಲೋಕದ ಅಪೂರ್ವ ಚಿಂತಾಮಣಿ ಬಿ.ಆರ್.ಎಲ್ -75
ಕವಿ- ಕಾವ್ಯದ ಬಗ್ಗೆ ಮಾತನಾಡುತ್ತಾ ಕವಿತೆಗಳನ್ನು ಹಾಡಾಗಿಸುತ್ತಾರೆ!
ಬಿ.ಆರ್. ಲಕ್ಷ್ಮಣ ರಾವ್ - ಎಂ.ಡಿ.ಪಲ್ಲವಿ ಮುಖಾಮುಖಿ
ವಾದ್ಯ ಕಲಾವಿದರಾದ ಕೃಷ್ಣ ಉಡುಪ, ಪ್ರದ್ಯುಮ್ನ, ವಾದಿ ಹಾಡುಗಳನ್ನು ಮೇಳೈಸುತ್ತಾರೆ!
ಸಂಯೋಜನೆ: ಶ್ರೀನಿವಾಸ ಜಿ ಕಪ್ಪಣ್ಣ
ಭಾನುವಾರ, 12ನೇ ಸೆಪ್ಟೆಂಬರ್ 2021 ಬೆಳಗ್ಗೆ 12.30ಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.