ಕೃತಿ: ಬಿಫೋರ್ ಯು ಫಾಲ್
ಲೇ: ಅಭಿಲಾಷ್ ಗೌಡ
ಪುಟಗಳು: 132
ಬೆಲೆ: ₹250
ಪ್ರ: ಸಹ್ಯಾದ್ರಿ ಪಬ್ಲಿಕೇಷನ್ಸ್ ಬೆಂಗಳೂರು
ಸಂ: 9916383383
ಬದುಕಿನಲ್ಲಿ ಭಾವನೆಗಳಿಗಿಂತ ವಾಸ್ತವದ ನೆಲೆಗಟ್ಟು ಎಷ್ಟು ಮುಖ್ಯ ಎಂಬುದರ ಕುರಿತು ಮಾತನಾಡಿದೆ ಈ ಕೃತಿ. ಹಣಕಾಸಿನ ಯೋಜನೆ ಬಾಲ್ಯದಿಂದ ಬದುಕಿನುದ್ದಕ್ಕೂ ಹೇಗಿರಬೇಕು ಎಂಬುದನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಸ್ಟಾರ್ಟ್ ಅಪ್ ಪ್ರಯತ್ನಗಳೇಕೆ ವಿಫಲವಾಗುತ್ತವೆ ಎಂಬುದನ್ನೂ ವಿಶ್ಲೇಷಿಸಲಾಗಿದೆ. ವರ್ಣರಂಜಿತ ಯಶೋಗಾಥೆಗಳ ಹಿಂದಿನ ಸತ್ಯ–ಮಿಥ್ಯೆಗಳ ಬಗ್ಗೆಯೂ ಕೃತಿ ಮಾತನಾಡಿದೆ. ಮಗಳ ಮದುವೆಗೂ ಮುನ್ನ ಅಳಿಯನ ಸಾವಿನ ಬಗ್ಗೆ ಚಿಂತನೆ, ಮ್ಯೂಚುವಲ್ ಫಂಡ್‌ಗಳ ಪರಿಚಯ, ಸರ್ಕಾರಿ ಯೋಜನೆಗಳ ಮಾಹಿತಿ, ಪೊಲೀಸ್, ಕಾನೂನು ಪ್ರಕ್ರಿಯೆಗಳ ಸಂಕ್ಷಿಪ್ತ ವಿವರಗಳು ಆಸಕ್ತಿದಾಯಕವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.