ADVERTISEMENT

ಶಿಕ್ಷಕನ ವೃತ್ತಿ ಬದುಕಿನ ಹೆಜ್ಜೆಗಳು

ಪ್ರಜಾವಾಣಿ ವಿಶೇಷ
Published 29 ಏಪ್ರಿಲ್ 2023, 19:59 IST
Last Updated 29 ಏಪ್ರಿಲ್ 2023, 19:59 IST
ಮುಖಪುಟ 
ಮುಖಪುಟ    

ಶಿಕ್ಷಕನೋರ್ವ ಹಲವರ ಭವಿಷ್ಯಗಳನ್ನು ರೂಪಿಸುವ ಶಿಲ್ಪಿ. ಆದರೆ ಕೆಲ ಶಿಕ್ಷಕರ ಅಸಭ್ಯ ವರ್ತನೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಇತರೆ ಶಿಕ್ಷಕರಿಗೂ ಸಂಕಷ್ಟ, ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇದು ಹಲವು ಶಾಲಾ ಕಾಲೇಜುಗಳಲ್ಲಿ ವಾಸ್ತವವೂ ಹೌದು. ಇಂಥ ಅನುಭವಗಳ ಬುತ್ತಿ ಈ ಕೃತಿ. 

ಶಿಕ್ಷಕರಾಗಿ, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ ವ್ಹಿ.ಎ.ಬೆನಕನಾಳ ತಮ್ಮ ಅನುಭಗಳನ್ನು ಇಲ್ಲಿ ದಾಖಲಿಸಿದ್ದಾರೆ. ಒಟ್ಟು 42 ಅಧ್ಯಾಯಗಳಲ್ಲಿ ಪದವಿ ವಿದ್ಯಾಭ್ಯಾಸ, ಶಿಕ್ಷಕ ವೃತ್ತಿಗೆ ಹೆಜ್ಜೆ ಇಟ್ಟ ಕ್ಷಣಗಳು, ತಾವು ಶಿಕ್ಷಕರಾಗಿದ್ದ ಹೈಸ್ಕೂಲ್‌ ಪರಿಸರ, ಅಲ್ಲಿನ ಸಿಬ್ಬಂದಿ, ಅನುಭವಿಸಿದ ಸಮಸ್ಯೆಗಳು, ಕಾಲೇಜು ಪ್ರಾಧ್ಯಾಪಕರಾಗಿ ಸೇರ್ಪಡೆ, ಅಲ್ಲಿನ ಸಹೋದ್ಯೋಗಿಗಳ ಅವಾಂತರಗಳನ್ನು ಬಿಚ್ಚಿಟ್ಟಿದ್ದಾರೆ ಲೇಖಕರು. ಕೃತಿಯನ್ನು ಆತ್ಮಕಥೆಯಂತೆ ಬರೆದರೂ, ಶಿಕ್ಷಕರು ಹೇಗಿರಬೇಕು? ಅವರ ಕರ್ತವ್ಯಗಳೇನು? ಎನ್ನುವ ಸಲಹೆಗಳನ್ನೂ ಪ್ರತ್ಯೇಕ ಅಧ್ಯಾಯದಲ್ಲಿ ಲೇಖಕರು ನೀಡಿದ್ದಾರೆ. 

ಶಿಕ್ಷಕನ ವೃತ್ತಿ ಬದುಕಿನ ತಲ್ಲಣಗಳು  ಲೇ: ಡಾ.ವ್ಹಿ.ಎ.ಬೆನಕನಾಳ  ಪ್ರ: ಶ್ರೀಶೈಲ ಪ್ರಕಾಶನ  ಸಂ: 9448986708 ದರ: 150 ಪುಟ: 176

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.