ಆಕಾಶಕ್ಕೆ ಹಲವು ಬಣ್ಣಗಳು
ಲೇ: ಸಿದ್ಧರಾಮ ಹೊನ್ಕಲ್
ಪ್ರ: ಸಿದ್ಧಾರ್ಥ ಎಂಟರ್‌ಪ್ರೈಸಿಸ್
ಮೊ: 9916015005
ಕಲ್ಯಾಣ ಕರ್ನಾಟಕದ ಭೂಮಿಯಲ್ಲಿ ಲಾಗಾಯ್ತಿನಿಂದಲೂ ಗಜಲ್ ‘ಫಸಲಿ’ಗೆ ಮುಂದು. ಶಾಂತರಸರ ಕಾಲದಿಂದಲೂ ಆ ಕಾವ್ಯ ಪ್ರಕಾರ ಪರಂಪರೆಯಾಗಿ ಬೆಳೆದು ಬಂದಿದೆ. ಆ ಭಾಗದ ಹೊಸ ತಲೆಮಾರಿನ ಹಲವು ಕವಿಗಳ ಪಡೆಯೊಂದು ಈಗ ಗಜಲ್ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅದಕ್ಕೆ ಸೇರ್ಪಡೆಯಾದ ಮತ್ತೊಂದು ಹೆಸರು ಸಿದ್ಧರಾಮ ಹೊನ್ಕಲ್ ಅವರದು. ಸಮಾಜಶಾಸ್ತ್ರದ ಬೋಧಕರಾಗಿರುವ ಹೊನ್ಕಲ್ ಅವರು ಈಗಾಗಲೇ ಕಥೆಗಾರರಾಗಿಯೂ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರ ಗಜಲ್‌ಗಳ ಸಂಗ್ರಹವೇ ‘ಆಕಾಶಕ್ಕೆ ಹಲವು ಬಣ್ಣಗಳು’. ಹೌದು, ಇಲ್ಲಿನ ಗಜಲ್‌ಗಳಿಗೆ ಹಲವು ಬಣ್ಣಗಳಿವೆ; ಪ್ರೀತಿ, ಪ್ರೇಮ, ನೋವು, ನಲಿವು... ಹೀಗೆ. ಸಮಾಜದ ಸಂಕಟಗಳಿಗಾಗಿ ಮಿಡಿಯುವ ಮನಸ್ಸೂ ಇಲ್ಲಿನ ಗಜಲ್‌ಗಳ ಸಾಲಿಗಿದೆ. ಗಜಲ್‌ನ ಪುಟ್ಟ ಇತಿಹಾಸವನ್ನೂ ಕೊಟ್ಟಿರುವುದು ಈ ಕೃತಿಯ ಹೆಚ್ಚುಗಾರಿಕೆ. ಗಜಲ್ ಜಗತ್ತಿಗೆ ಪ್ರವೇಶಿಕೆಯಾಗಿ ಆರಂಭದಲ್ಲಿ ಕೆಲವು ಲೇಖನಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.