ADVERTISEMENT

‌ಹರಿದಾಸಿ ಮಾರ್ಪಳ್ಳಿ ಪದ್ಮಾವತಿ ನೆನಪಿನ ಕಥನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 0:50 IST
Last Updated 6 ಆಗಸ್ಟ್ 2023, 0:50 IST
   

ಬಾಲಭಾರತಿ ಹರಿಕೀರ್ತನಾ ವಿದುಷಿ ಮಾರ್ಪಳ್ಳಿ ಪದ್ಮಾವತಿ ಶಿವರಾಮ ರಾವ್‌ ಅವರ ಜನ್ಮಶತದಿನೋತ್ಸವದ ಅಂಗವಾಗಿ ಹೊರತಂದ ಕೃತಿ ‘ಶತದಳ ಪದ್ಮ’. ಪದ್ಮಾವತಿ ಅವರ ಪುತ್ರಿ ವಿಜಯಲಕ್ಷ್ಮಿ ನಂದಳಿಕೆ ಕುಟುಂಬದವರೇ ಸಂಪಾದಿಸಿರುವ ಕೃತಿಯಿದು. ಇದರಲ್ಲಿ ಪದ್ಮಾವತಿ ಅವರ ಕುರಿತು ನಾಡಿನ ವಿವಿಧ ಗಣ್ಯರು ಬರೆದ ಬಿಡಿ ಲೇಖನಗಳಿವೆ. ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆಯವರು ಸಂದೇಶದ ಮೂಲಕ ಹರಿಕಥಾ ಜಗತ್ತಿಗೆ ಪದ್ಮಾವತಿ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ನಾಡಿನ ಹಲವು ಯತಿಗಳು ಹರಿಕೀರ್ತನಾ ವಿದುಷಿ ಕುರಿತು ಬರೆದಿದ್ದಾರೆ.

‘ಶತದಳ ಪದ್ಮ–ನೆನಪಿನ ಗೋಪುರಕ್ಕೊಂದು ಕಲಶ’ ಎಂಬ ಕೃತಿಯ ಪ್ರಾರಂಭಿಕ ಲೇಖನದಲ್ಲಿ ಬಿ.ಎ.ವಿವೇಕ್‌ ರೈ ಅವರು ಪದ್ಮಾವತಿ ಶಿವರಾಮ ರಾವ್‌ ಅವರ ಕಿರುಪರಿಚಯ ಮಾಡಿಕೊಟ್ಟಿದ್ದಾರೆ. ಅವರು ಹರಿಕಥೆಯ ರಂಗಕ್ಕೆ ಪ್ರವೇಶಿಸಿದ್ದು, ಅದರಲ್ಲಿ ಮಾಡಿದ ಪ್ರಯೋಗಗಳು, ಅವರ ಕುರಿತು ಮೂಡಿಬಂದ ಸಂದರ್ಶನಗಳ ಮೆಲುಕು ಈ ಲೇಖನದಲ್ಲಿ ಸಿಗುತ್ತವೆ. 

ಭದ್ರಗಿರಿ ಅಚ್ಯುತ ದಾಸರ ಲೇಖನ ಹರಿಕಥಾ ಸಂಕೀರ್ತನ ಜಗತ್ತಿನಲ್ಲಿ ಪದ್ಮಾವತಿ ಅವರ ಸಾಧನೆಗಳ ಚಿತ್ರಣ ಕಟ್ಟಿಕೊಡುತ್ತದೆ. ‘ನಂದಳಿಕೆಯಿಂದ’ ಎಂಬ ಲೇಖನದಲ್ಲಿ ನಂದಳಿಕೆ ಬಾಲಚಂದ್ರ ರಾವ್‌ ಅವರು ತಮ್ಮ ಅತ್ತೆಯ ಅವರ ಬದುಕಿನ ಅನೇಕ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮಿ ನಂದಳಿಕೆ ಅಮ್ಮನ ಕುರಿತು ಬರೆದ ಬರಹ ಮಾರ್ಪಳ್ಳಿ ಪದ್ಮಾವತಿ ಅವರು ಬೆಳೆದು ಬಂದ ಹಾದಿಯನ್ನು ತೋರಿಸುತ್ತದೆ. ತಮ್ಮ ಬಾಲ್ಯದಿಂದಲೇ ಹರಿಕಥೆ ಪ್ರಾರಂಭಿಸಿದ ಪದ್ಮಾವತಿಯವರ ಅನೇಕ ಚಿತ್ರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. 

ADVERTISEMENT

ಶತದಳ ಪದ್ಮ ಸಂ: ವಿಜಯಲಕ್ಷ್ಮಿ ನಂದಳಿಕೆ ನಂದಳಿಕೆ ಬಾಲಚಂದ್ರ ರಾವ್‌ ಸೌಜನ್ಯ ರಾವ್‌ ಪ್ರ: ಆಕೃತಿ ಆಶಯ ಪಬ್ಲಿಕೇಶನ್ಸ್‌ ಸಂ: 9448144495 ದ: 115 ಪು: 128

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.