ADVERTISEMENT

ಪುಸ್ತಕ ವಿಮರ್ಶೆ | ಕನ್ನಡದಲ್ಲಿ ‘ಗಾಡ್‌ಫಾದರ್‌’ನ ರೋಚಕ ಕಥನ

ಪ್ರಜಾವಾಣಿ ವಿಶೇಷ
Published 2 ಜುಲೈ 2023, 1:43 IST
Last Updated 2 ಜುಲೈ 2023, 1:43 IST
book
book   

ಅಮೆರಿಕದ ಕ್ರೈಂ ಥ್ರಿಲ್ಲರ್‌ ಕಾದಂಬರಿಕಾರ ಪೂಜೋ ಅವರ ‘ಗಾಡ್‌ಫಾದರ್‌’ ಜನಪ್ರಿಯವಾಗಿತ್ತು. ನಂತರ ಸಿನಿಮಾ ಆಗಿ ವಿಶ್ವವ್ಯಾಪಿ ಮನ್ನಣೆ ಪಡೆಯಿತು. ‘ಗಾಡ್‌ಫಾದರ್‌’ ಯಶಸ್ಸಿನ ಬಳಿಕ ಅದರ ಮುಂದುವರಿದ ಕಥೆಗಳು ಹಲವು ಭಾಗಗಳಲ್ಲಿ ತೆರೆಕಂಡವು. ಅಂತಹ ಜನಪ್ರಿಯ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ.ನೇಸರ ಕಾಡನಕುಪ್ಪೆ.

‘ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿನ ಇಟಲಿಯ ಮಾಫಿಯಾ ಕುಟುಂಬದವರ ಜೀವನದ ಸುತ್ತ ಹೆಣೆದ ಕಾಲ್ಪನಿಕ ಕಥೆ ಒಳಗೊಂಡ ಕೃತಿಯಿದು. ಡ್ರಗ್ಸ್‌, ಕೊಲೆ, ಸುಲಿಗೆ, ಬಂದೂಕಿನಂತಹ ಭೂಗತ ಚಟುವಟಿಕೆಗಳನ್ನು ಚಿತ್ರಿಸಿರುವ ಗಾಡ್‌ಫಾದರ್‌ ಚಲನಚಿತ್ರವಾಗಿ 1970ರ ದಶಕದಲ್ಲಿ ಅದ್ಭುತ ಯಶಸ್ಸು ಕಂಡಿತು. ಫ್ರಾನ್ಸೆಸ್‌ ಫೋರ್ಡ್‌ ಕೋಪ್ಪಾಲಾನ ಅತ್ಯಂತ ಶ್ರೇಷ್ಠ ಚಿತ್ರ. ಇಂತಹ ಕೃತಿಯನ್ನು ಬಹಳ ಪ್ರಬುದ್ಧವಾಗಿ ಅನುವಾದಿಸಿದ್ದಾರೆ ನೇಸರ’ ಎಂದು ಬೆನ್ನುಡಿಯಲ್ಲಿ ಪ್ರೊ.ಎನ್‌.ಉಷಾರಾಣಿ ಬರೆದಿದ್ದಾರೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಅನುವಾದ ಕಾರ್ಯಕ್ಕೆ ಸ್ಫೂರ್ತಿ ಎಂದಿರುವ ನೇಸರ, ‘ಗಾಡ್‌ಫಾದರ್‌’ನಂತಹ ಸಂಕೀರ್ಣವಾದ ಕಾದಂಬರಿಯನ್ನು ಬಹಳ ಸರಳವಾಗಿ ಕನ್ನಡಿಗರಿಗೆ ಅರ್ಥಮಾಡಿಸುವ ಯತ್ನ ಮಾಡಿದ್ದಾರೆ. ಪಾತ್ರಗಳ ಹೆಸರುಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಘಟನೆಗಳು ನಮ್ಮ ನೆಲದಲ್ಲಿಯೇ ನಡೆದಿವೆ ಎನ್ನುವಷ್ಟು ಭಾಷಾಂತರ ಸೊಗಸಾಗಿದೆ. ಕಾದಂಬರಿಗೆ ತಕ್ಕಂತೆ ಕಥನ ಶೈಲಿಯನ್ನು ರೋಚಕವಾಗಿಸಿದ್ದಾರೆ. ಇಲ್ಲಿನ ಪಾತ್ರಗಳ ವಿವರಣೆ ರಾಜಾ ಚೆಂಡೂರ್‌ ಅನುವಾದದ ಯಂಡಮೂರಿಯವರ ಥ್ರಿಲ್ಲರ್‌ ಕಾದಂಬರಿಗಳನ್ನು ಮತ್ತೆ ನೆನಪಿಸುತ್ತದೆ.  

ADVERTISEMENT

ಗಾಡ್‌ಫಾದರ್‌–1

ಮೂಲ:ಮಾರಿಯೋ ಪೂಜೋ

ಕನ್ನಡಕ್ಕೆ:ಡಾ.ನೇಸರ ಕಾಡನಕುಪ್ಪೆ

ಪ್ರ: ಸಂವಹನ ಮೈಸೂರು

ಸಂ:9844206083

ಬೆಲೆ:250

ಪು:240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.