ADVERTISEMENT

ಮೊದಲ ಓದು: ಅಘನಾಶಿನಿ ತಟದ ಕಥೆಗಳು

ಚಿಂತಾಮಣಿ ಕೊಡ್ಲೆಕೆರೆ
Published 24 ಮಾರ್ಚ್ 2024, 0:18 IST
Last Updated 24 ಮಾರ್ಚ್ 2024, 0:18 IST
<div class="paragraphs"><p>ಮುಖಪುಟ</p></div>

ಮುಖಪುಟ

   

21 ಕಥೆಗಳ ಈ ಸಂಕಲನವು ’ಭರತದ ಮಧ್ಯಾಹ್ನ’ ಎನ್ನುವ ವಿಶೇಷ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ. ಸರಳ ಭಾಷೆ ಹಾಗೂ ಸಹಜ ಎನಿಸುವ ನಿರೂಪಣೆ ಕತೆಗಾರನ ಭಾವವನ್ನು ಓದುಗರ ಮನಸಿಗೆ ಸುಲಭವಾಗಿ ದಾಟಿಸುತ್ತದೆ. ಕತೆಗಾರ ಚಿಂತಾಮಣಿ ಕೊಡ್ಲೆಕೆರೆ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿಯಾಗಿದ್ದರಿಂದ, ಕತೆಗಳಲ್ಲಿ ಅಲ್ಲಿನ ಪರಿಸರ ಇಣುಕುತ್ತಿರುತ್ತವೆ.

ತಮ್ಮ ಅನುಭವಗಳನ್ನು, ಸಮಾಜದ ಪಾತ್ರಗಳ ಮೂಲಕ ಓದುಗರ ಮನಸ್ಸಿಗೆ ಧಾರೆ ಎರೆಯುವ ಕಲೆ ಕತೆಗಾರನ ಹೆಚ್ಚುಗಾರಿಗೆ. ಕುತೂಹಲ ಮೂಡಿಸುತ್ತಾ ಕಥಾಲೋಕವು ಓದುಗನನ್ನು ಆವರಿಸಿಕೊಂಡು, ನಡುವೆ ರೋಚಕ ಅನುಭವ ನೀಡುತ್ತಾ ಸಾಗುತ್ತಿದ್ದಾಗ ಕೊನೆಗೆ ವಿಷಾದ ಭಾವ ಮೂಡುಸುತ್ತದೋ ಅಥವಾ ಸಂತಸದ ಹೊನಲು ಹರಿಸುತ್ತದೋ ಎಂಬುದು ಈ ಗುಚ್ಛದಲ್ಲಿನ ಗುಟ್ಟು.

ADVERTISEMENT

ಭಕ್ತಿ–ಶ್ರದ್ಧೆ, ತಮಾಷೆ–ವಾಸ್ತವ, ಸಿಟ್ಟು–ಸಮಾಧಾನ ಮುಂತಾದವುಗಳ ಅನುಸಂಧಾನ ಕತೆಗಳಲ್ಲಿ ಇದ್ದು, ಓದುಗರಿಗೆ ವಿಶೇಷ ಭಾವವನ್ನು ಮೂಡಿಸುತ್ತದೆ. ನಮ್ಮದೇ ಕಥೆಗಳಿವು ಅನಿಸುತ್ತದೆ. ಸರಳ ಸಂದೇಶವನ್ನು ಪರಿಣಾಮಕಾರಿಯಾಗಿ ಹೇಳುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕತೆಗಳಲ್ಲಿನ ಪಾತ್ರಗಳು ನಮ್ಮ ಜೀವನದಲ್ಲಿ ಆಗಾಗ ಎದುರುಗೊಂಡವರಂತೆ ಅನಿಸುತ್ತದೆ. ಮನುಷ್ಯನ ಮನಸಿನ ತಳಮಳ, ಜಿಜ್ಞಾಸೆ, ಕುತೂಹಲ, ವಿಷಾದ, ಭಾವುಕತೆ, ತುಮುಲ, ಸಂತೋಷ ಮುಂತಾದ ಭಾವವಗಳನ್ನು ಕತೆಗಾರ ಸರಳವಾಗಿ ಹೇಳಿದ್ದಾರೆ. ಆಧ್ಮಾತ್ಮಿಕ-ಲೌಕಿಕವನ್ನು ಸ್ಪರ್ಶಿಸುವ ಸಾಹಸವನ್ನೂ ಲೇಖಕರು ಮಾಡಿದ್ದಾರೆ. ಆರೋಗ್ಯಕರ ಬದುಕಿಗೆ ಬೇಕಾದ ಮೌಲ್ಯಗಳನ್ನೂ ಕತೆಗಳಲ್ಲಿ ಲೇಖಕರು ಸಾರಿದ್ದಾರೆ. ಕತೆಗಳ ಪಾತ್ರಗಳು ತುಂಬಾ ಹೊತ್ತಿನವರೆಗೂ ಕಾಡುತ್ತವೆ.

ಭರತದ ಮಧ್ಯಾಹ್ನ

ಲೇ: ಚಿಂತಾಮಣಿ ಕೊಡ್ಲೆಕೆರೆ

ಪ್ರ: ಅಂಕಿತ ಪುಸ್ತಕ

ಸಂ: 90191 90502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.