ADVERTISEMENT

ಪುಸ್ತಕ ವಿಮರ್ಶೆ: ಬಣ್ಣದ ಕಥೆಗಳಲ್ಲಿನ ಬೆರಗು...

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 23:35 IST
Last Updated 21 ಸೆಪ್ಟೆಂಬರ್ 2024, 23:35 IST
ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ   

ಮನಸ್ಸು ಸದಾ ಸಂಚಾರಿ. ಇದ್ದಲ್ಲೇ ಇದ್ದು ಬೇರು ಬಿಡುವಾಗೆಲ್ಲ, ದೂರ ತೀರ ಯಾನವೂ ಕೈ ಬೀಸಿ ಕರೆಯುತ್ತಿರುತ್ತದೆ. ಹೆಚ್ಚು ಹೆಚ್ಚು ತಿಳಿದುಕೊಳ್ಳುವುದಕ್ಕೆ ಈಗಂತೂ ಜ್ಞಾನ ಸಾಗರವೇ ಕಣ್ಮುಂದಿದೆ. ಆದರೆ ನಮ್ಮ ಕುತೂಹಲವಿರುವುದೆಲ್ಲ ಮನುಷ್ಯರ ಕಥೆಗಳತ್ತವೇ. ಕಟ್ಟಿ, ಕೆಡವಿಕೊಂಡ ಸಾಮ್ರಾಜ್ಯಗಳು, ಶತಮಾನ ಕಳೆದರೂ ಅದರ ನೆನಪಿನೊಂದಿಗೆ ಬದುಕನ್ನು ಹುಡುಕುತ್ತಿರುವವರ ಕಥೆಗಳು, ಪ್ರತಿ ಗೋಡೆಯೂ ಸಾರುವ ಅನೂಹ್ಯ ಸಂಗತಿಗಳು ಹೀಗೆ ಇಂಥವನ್ನೆಲ್ಲ ತಿಳಿದುಕೊಳ್ಳಬೇಕಾದರೆ ಆಗಾಗಂತೂ ಒಂದಷ್ಟು ಪ್ರವಾಸ ಹೊರಡಲೇಬೇಕು.

ಎಲ್ಲೆಲ್ಲೂ ಇರಬಹುದಾದ, ನಮ್ಮ ನಿಮ್ಮಂತೆ ಯೋಚಿಸುವ. ಸಹಜ ಬದುಕಿನ ಅನುಭವವನ್ನು ಮೊಗೆದುಕೊಡುವ ಸ್ನಿಗ್ಧ ನಗುವಿನ ಮನುಷ್ಯರ ಕಥೆಗಳನ್ನು ಕಟ್ಟಿಕೊಟ್ಟಿದೆ ‘ಹಾರೈಸಿ ತೆರೆದ ಕಣ್ಣ ಕೋರೈಸೋ ನೂರು ಬಣ್ಣ’ ಕೃತಿ.

ಲೇಖಕ ಡಿ.ಜಿ.ಮಲ್ಲಿಕಾರ್ಜುನ ಛಾಯಾಗ್ರಾಹಕರೂ ಆಗಿರುವುದರಿಂದ ಚಿತ್ರ ಸಮೇತ ಕಥೆ ಹೇಳಿದ್ದಾರೆ. ಈ ಬಣ್ಣದ ಕಥೆಗಳಲ್ಲಿ ಬೆರಗು ಇದೆ. ಭೂತಾನ್, ಬ್ಯಾಂಕಾಕ್ ಪಟ್ಟಾಯ್. ಥಾಯ್ಲೆಂಡ್, ಟರ್ಕಿ, ಇಸ್ತಾನ್ ಬುಲ್. ಯುಎಇ ಹೀಗೆ ಈ ದೇಶಗಳನ್ನು ನೋಡಬೇಕೆನ್ನುವವರಿಗೆ ಇದೊಂದು ಮಾರ್ಗದರ್ಶಿ ಕೈಪಿಡಿಯಾಗಬಲ್ಲದು.

ADVERTISEMENT

ಸಂಚಾರ ಹೊರಟಂತೆ ಎಷ್ಟೊಂದು, ನಂಬಿಕೆಗಳು, ಆಚಾರ ವಿಚಾರಗಳು, ಹೇಗಿರಬೇಕು, ಹೇಗಿರಬಾರದು ಎನ್ನುವ ಅಂಶಗಳು ಮನದಟ್ಟಾಗುತ್ತಾ ಹೋಗುತ್ತವೆ. ಮನಸ್ಸು ಕಟ್ಟಿಕೊಂಡ ಗೋಡೆಗಳನ್ನು ಕೆಡವಿಕೊಳ್ಳಲು ಪ್ರವಾಸಕ್ಕಿಂತ ಉತ್ತಮ ದಾರಿ ಏನಿದೆ?. 

ಒಂದೂರಿನಿಂದ ಮತ್ತೊಂದು ಊರಿಗೆ ಬದಲಾಗುವ  ಆಹಾರ, ಅಧ್ಯಾತ್ಮ, ಆಚಾರ ವಿಚಾರಗಳೆಲ್ಲವೂ ತುಲನಾತ್ಮಕ ಅಧ್ಯಯನಕ್ಕೆ ಯೋಗ್ಯವಾಗಿವೆ.  ಆಯಾ ಊರಿನ ಕಥೆಗಳನ್ನು ಸಾಂಕೇತಿಕವಾಗಿ ಬಿಂಬಿಸುವ ಛಾಯಾಚಿತ್ರಗಳು ತುಸು ಬಣ್ಣ ಕಂಡಿದ್ದರೆ ಈ ಪುಸ್ತಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುತ್ತಿತ್ತು.

ಹಾರೈಸಿ ತೆರೆದ ಕಣ್ಣ ಕೋರೈಸೋ ನೂರು ಬಣ್ಣ

ಲೇ: ಡಿ.ಜಿ.ಮಲ್ಲಿಕಾರ್ಜುನ

ಪ್ರ: ನವಕರ್ನಾಟಕ

ಸಂ: 08022161900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.