ಆರೋಗ್ಯದ ಚಿಂತನೆಯೆಂದರೆ ಕೇವಲ ದೇಹ ರಚನೆ ಮತ್ತು ಅದರ ಕಾರ್ಯಗಳಷ್ಟೇ ಅಲ್ಲ. ಅದರಾಚೆಗಿನ ವಿಸ್ತಾರವನ್ನೂ ಹೊಂದಿದೆ. ನಮ್ಮ ಮಾನಸಿಕ, ಸಾಮಾಜಿಕ ಸ್ಥಿತಿಗತಿಗಳು, ಬದಲಾದ ಜೀವನ ಶೈಲಿ, ಉದ್ಯೋಗ, ಒತ್ತಡಗಳು ಎಲ್ಲವೂ ಒಟ್ಟಾಗಿ ನಮ್ಮ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಆಪ್ತ ಸಮಾಲೋಚನೆಯ ರೀತಿಯಲ್ಲಿ ಹೇಳುತ್ತಾ ಹೋಗಿದೆ ಈ ಕೃತಿ.
ಕೇವಲ ಆರೋಗ್ಯದ ಸಲಹೆಯ ಪುಸ್ತಕ ಇದಲ್ಲ. ನಮ್ಮ ವರ್ತನೆ, ಆಲೋಚನಾ ಕ್ರಮಗಳ ಮೇಲೂ ಬೆಳಕು ಚೆಲ್ಲಿದೆ. ಸಕಾರಾತ್ಮಕ ಆಲೋಚನೆ ಮತ್ತು ಕ್ರಿಯೆಗಳ ಸಲಹೆ ಮಾಡಿದೆ. ಅಷ್ಟೇ ಅಲ್ಲ, ವೈದ್ಯ ವೃತ್ತಿಯ ನೈತಿಕ ಮೌಲ್ಯಗಳನ್ನೂ (ಅಧ್ಯಾಯ 4) ಚರ್ಚಿಸಿದೆ. ಜೀವನ ಮೌಲ್ಯಗಳ ಬಗ್ಗೆಯೂ ಮಾತನಾಡಿದೆ. ಹಾಗಾಗಿ ಪುಸ್ತಕ ವ್ಯಕ್ತಿತ್ವ ವಿಕಸನದ ಅಂಶಗಳನ್ನೂ ಒಳಗೊಂಡಿದೆ.35 ಅಧ್ಯಾಯಗಳಲ್ಲಿ ಮನುಷ್ಯನ ಬದುಕಿನ ವಿವಿಧ ಮಜಲುಗಳಲ್ಲಿ ಎದುರಾಗುವ ಸನ್ನಿವೇಶಗಳು, ಅವುಗಳನ್ನು ಅವಕಾಶಗಳನ್ನಾಗಿಸುವ ಪರಿ, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ... ಇತ್ಯಾದಿಗಳ ಕುರಿತು ಮಾತನಾಡಿದೆ. ಹಲವು ಚಿಂತಕರ ಉಲ್ಲೇಖಗಳು, ಉದಾಹರಣೆಗಳು ಲೇಖನಗಳ ತೂಕ ವೃದ್ಧಿಸಿವೆ. ಲೇಖಕರ ಜೀವನಾನುಭವದ ಮೂಸೆಯಲ್ಲಿ ಹೊರಬಂದ ಲೇಖನ ಗುಚ್ಛ ಎನ್ನಬಹುದು.
ಕೃತಿ: ಆರೋಗ್ಯ
ಲೇ: ಡಾ.ಪಿ.ಎಸ್. ಶಂಕರ್
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಸಂ. 9448110034
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.