ADVERTISEMENT

ಮೊದಲ ಓದು: ಸಿನಿಮಾಸಕ್ತರಿಗೆ ಕುತೂಹಲದ ಖನಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 23:34 IST
Last Updated 17 ಆಗಸ್ಟ್ 2024, 23:34 IST
ಬೆಳ್ಳಿ ತೆರೆಯ ಮಿಂಚು
ಬೆಳ್ಳಿ ತೆರೆಯ ಮಿಂಚು   

ಪುಸ್ತಕದ ಶೀರ್ಷಿಕೆಯ ಅಡಿ ಬರಹ ‘ಸಿನಿಮಾದವರೊಂದಿಗಿನ ಕ್ಲೋಸ್‌ ಅಪ್‌ ಶಾಟ್ಸ್‌ʼ ಹೇಳುವಂತೆ ಲೇಖಕ ಬಿ.ಎಲ್‌. ವೇಣು ಅವರು ತಮ್ಮ ನಾಲ್ಕು ದಶಕಗಳ ಚಿತ್ರರಂಗದ ಅನುಭವವನ್ನು ಈ ಕೃತಿ  ಕಟ್ಟಿಕೊಟ್ಟಿದೆ. 

ಸರ್ಕಾರಿ ನೌಕರಿಯಲ್ಲಿದ್ದುಕೊಂಡೇ ಸಿನಿಮಾ ಸಾಹಿತಿಯಾಗಿ ತಮ್ಮನ್ನು ರೂಪಿಸಿಕೊಂಡ, ಬರವಣಿಗೆಯ ಅಂತಃಸತ್ವ ಕಾಪಿಟ್ಟುಕೊಂಡ, ಬರವಣಿಗೆಯಿಂದಲೇ ಬದುಕು–ಭಾವವನ್ನೂ ಹಸನಾಗಿಸಿಕೊಂಡ ಬಗೆಯನ್ನು, ಜನಪ್ರಿಯತೆ ಸಂಪಾದಿಸಿದ್ದನ್ನೂ ಮುಕ್ತವಾಗಿ ತೆರೆದಿಟ್ಟಿದ್ದಾರೆ ಲೇಖಕರು. 

ಕನ್ನಡದ ಹೆಸರಾಂತ ನಿರ್ದೇಶಕರಾದ ಕೆ.ವಿ.ಜಯರಾಂ, ಪುಟ್ಟಣ್ಣ ಕಣಗಾಲ್‌, ಭಾರ್ಗವ, ದೊರೆ ಭಗವಾನ್‌, ನಟರಾದ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಸೇರಿದಂತೆ ಈಗಿನ ಕೆಲವು ನಿರ್ದೇಶಕರು ಮತ್ತು ಕಲಾವಿದರೊಂದಿಗಿನ ತಮ್ಮ ಒಡನಾಟ-ಚಿತ್ರರಂಗದ ನಂಟಿನಲ್ಲಿ ಇಷ್ಟು ವರ್ಷ ಕಂಡುಂಡಿದ್ದನ್ನು ‘ಸೆನ್ಸಾರ್‌’ ಮಾಡದೆ ಹಂಚಿಕೊಂಡಿದ್ದಾರೆ. ಸಂದರ್ಭೋಚಿತವಾಗಿ ಬಳಕೆಯಾಗಿರುವ ಅಪರೂಪದ ಚಿತ್ರಗಳು ಕೃತಿಗೆ ಮೆರುಗು ತಂದುಕೊಟ್ಟಿವೆ.

ADVERTISEMENT

ವೇಣು ಅವರು ಆರಂಭದಲ್ಲಿ ಬರೆದ ಕಥೆಗಳಲ್ಲಿ ‘ದೊಡ್ಮನೆ’ ಕಥೆ ಮೊದಲ ಬಾರಿಗೆ ‘ದೊಡ್ಡಮನೆ ಎಸ್ಟೇಟ್‌’ ಹೆಸರಿನಲ್ಲಿ ಸಿನಿಮಾ ಆಗುತ್ತಿದೆ ಎಂದಾಗ ಅವರಿಗೆ ಆದ ಖುಷಿ, ಪುಳಕ–ಆ ಚಿತ್ರ ಬಿಡುಗಡೆಯಾದಾಗ ಅದರಲ್ಲಿ ತಮ್ಮ ಕಥೆಯೇ ಮಾಯವಾಗಿರುವುದನ್ನು ಕಂಡಾಗ ಆದ ವ್ಯಥೆಯನ್ನು ಇಲ್ಲಿ ಮೆಲುಕು ಹಾಕಿದ್ದಾರೆ.  

ವೇಣು ಅವರ ದಂಡಿ ದಂಡಿ ಪ್ರಸಂಗಗಳು ಸಿನಿಪ್ರಿಯರಿಗೆ, ಸಿನಿಮಾ ರಂಗದ ಅಧ್ಯಯನನಿರತರಿಗೂ ಒಂದಿಷ್ಟು ಉಪಯುಕ್ತ ಮತ್ತು ಕುತೂಹಲದ ಮಾಹಿತಿಗಳು ಆಗಿವೆ.   

ಬೆಳ್ಳಿ ತೆರೆಯ ಮಿಂಚು
ಲೇ: ಡಾ. ಬಿ.ಎಲ್‌. ವೇಣು
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ
ಮೊ: 94498 86390
ಪುಟ 292

ಬೆಲೆ 350

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.