ADVERTISEMENT

ಮೊದಲ ಓದು: ಅಸಮಾನತೆಯ ಆತ್ಮಾವಲೋಕನ

ಪ್ರಜಾವಾಣಿ ವಿಶೇಷ
Published 23 ನವೆಂಬರ್ 2024, 23:57 IST
Last Updated 23 ನವೆಂಬರ್ 2024, 23:57 IST
 ಆ ಲಯ ಈ ಲಯ
 ಆ ಲಯ ಈ ಲಯ   

ದಕ್ಷಿಣ ಆಫ್ರಿಕಾದ ಲೇಖಕ ಲೂಯಿ ನಕೋಸಿ, ವೃತ್ತಿಯಿಂದ ಅಧ್ಯಾಪಕ ಮತ್ತು ಪತ್ರಕರ್ತ ಕೂಡ. ವಸಾಹತು ಆಡಳಿತಕ್ಕೆ ತುತ್ತಾದ ತನ್ನ ತಾಯಿನಾಡಿನ ಕಾನೂನು ಅವರನ್ನು ದೇಶ ಬಿಟ್ಟು ಅಲೆದಾಡುವಂತೆ ಮಾಡಿತ್ತು. ಸಾಹಿತ್ಯದ ವಿವಿಧ ಪ್ರಕಾರದಲ್ಲಿ ಬರೆದ ಅವರ ನಾಟಕ ‘ದ ರಿದಮ್‌ ಆಫ್‌ ವಯಲೆನ್ಸ್‌’ ನ ಕನ್ನಡ ರೂಪ ‘ಆ ಲಯ ಈ ಲಯ’. 

ಹಲವು ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಈ ನಾಟಕವನ್ನು ರಂಗಕರ್ಮಿ ನಟರಾಜ್‌ ಹೊನ್ನವಳ್ಳಿ ಕನ್ನಡಕ್ಕೆ ತಂದಿದ್ದಾರೆ. ವಾಸ್ತವ ರಾಜಕೀಯ ವಿಡಂಬನೆಯ ಈ ನಾಟಕ ಸೃಜನಶೀಲ ಚಿಂತನೆಗೆ ಒಡ್ಡುವ ವಸ್ತು ವಿವರಣೆಯನ್ನು ಒಳಗೊಂಡಿದೆ. 

ನಾಟಕ ಮೂರು ಅಂಕಗಳ, ಎಂಟು ದೃಶ್ಯಗಳನ್ನು ಒಳಗೊಂಡಿದೆ. ಜನಾಂಗೀಯ ಅಸಮಾನತೆಯನ್ನು ಧ್ವನಿಸುವ ಇದು ವಿಶ್ವದ ಎಲ್ಲೆಡೆಯಲ್ಲಿ ನಡೆಯುತ್ತಿರುವ ದಮನಕಾರಿ ಆಡಳಿತದ ಹಿಂಸೆಯನ್ನು ನೆನಪಿಗೆ ತರುವಂತೆ ಇದೆ. ವಸ್ತು–ನಿರೂಪಣೆ ವ್ಯಕ್ತಿ ಮತ್ತು ಸಿದ್ಧಾಂತದ ಆದರ್ಶವನ್ನು ಸಂಘರ್ಷಾತ್ಮಕವಾಗಿ ಅನಾವರಣ ಮಾಡಿದೆ. ಈ ಮೂಲಕ ದೇಶ ಗಡಿಗಳ ಆಚೆ ಜನಾಂಗೀಯ ದ್ವೇಷ ಮತ್ತು ಅಸಮಾನತೆಯ ಬಗ್ಗೆ ಆತ್ಮಾವಲೋಕನವನ್ನು ಮಾಡಿಸುತ್ತದೆ. ಆರು ದಶಕಗಳ ಹಿಂದಿನ ರಂಗ ಪಠ್ಯವೊಂದು ಇವತ್ತಿಗೂ ಪ್ರಸ್ತುತ ಆಗುತ್ತಿದೆ.

ADVERTISEMENT

ಆ ಲಯ ಈ ಲಯ

ಮೂಲ: ಲೂಯಿ ನಕೋಸಿ ಕನ್ನಡಕ್ಕೆ: ನಟರಾಜ್‌ ಹೊನ್ನವಳ್ಳಿ

ಮಿಸ್‌ರೆಡ್‌ ಬುಕ್ಸ್‌ ತುಮಕೂರು

ಪುಟ: 176 ಬೆಲೆ: 200 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.