ADVERTISEMENT

ಮೊದಲ ಓದು | ಸಂಚಿಯೊಳಗೆ ಒಡಮೂಡಿದ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಮುಖಪುಟ
ಮುಖಪುಟ   

ಯಾವುದೇ ಸಾಹಿತ್ಯದ ಕೃತಿಗೆ ಮುನ್ನುಡಿ ಮತ್ತು ಬೆನ್ನುಡಿ ಆಭರಣಗಳಿದ್ದಂತೆ. ಓದುಗನಿಗೆ ಪುಸ್ತಕದ ಹೂರಣವನ್ನು ಕಟ್ಟಿಕೊಡುವ ಮುನ್ನುಡಿ ಬರೆಯುವುದು ಒಂದು ಕಲೆಯೇ ಸರಿ. ತಾವು ಎರಡು ದಶಕಗಳಲ್ಲಿ ಬರೆದ ಮುನ್ನಡಿಗಳನ್ನೆಲ್ಲ ಈ ‘ಸಂಚಿ’ಯೊಳಗಿಟ್ಟಿದ್ದಾರೆ ಲೇಖಕಿ ಎಂ.ಎಸ್‌.ಆಶಾದೇವಿ.

ಕಾವ್ಯ, ಕಥೆ–ಕಾದಂಬರಿ, ಸಂಕೀರ್ಣ, ಪ್ರಸ್ತಾವನೆ ಎಂದು ನಾಲ್ಕು ವಿಭಾಗಗಳಲ್ಲಿ ಕೃತಿಯನ್ನು ವಿಂಗಡಿಸಲಾಗಿದ್ದು ಒಟ್ಟು 62 ಮುನ್ನುಡಿಗಳಿವೆ. ಲೇಖಕಿಯರ ಕೃತಿಗಳಿಗೆ ಬರೆದ ಪ್ರಾಸ್ತಾವಿಕ ಮಾತುಗಳೇ ಹೆಚ್ಚು.  ‘ನಮ್ಮ ಕಾಲದ ಒಂದು ಅತ್ಯುತ್ತಮ ಸಾಹಿತ್ಯಕ ಮತ್ತು ಬೌದ್ಧಿಕ ಮನಸ್ಸಿಗೆ ಸಾಕ್ಷಿಯಾಗಿರುವ ಇಲ್ಲಿನ ಮುನ್ನುಡಿಗಳು ಆಶಾದೇವಿಯವರ ವ್ಯಾಪಕ ವಿಚಾರಗಳ ವಿಕಾಸವನ್ನೂ ಅವರ ಸಂವೇದನೆಯ ಹರವನ್ನೂ ಮನವರಿಕೆ ಮಾಡಿಕೊಡುತ್ತವೆ’ ಎಂದು ಎಸ್‌.ದಿವಾಕರ್‌ ಕೃತಿಯ ಕುರಿತು ಬೆನ್ನುಡಿಯಲ್ಲಿ ಬರೆಯುತ್ತಾರೆ.

‘ಎರಡು ದಶಕಗಳಲ್ಲಿ ಕನ್ನಡದ ಪ್ರತಿಭೆ ಮತ್ತು ಬೌದ್ದಿಕತೆಗಳು ನಡೆಸಿದ ಘನವಾದ ಪ್ರಯಾಣದ ಜೊತೆ ಒಂದೆರಡು ಹೆಜ್ಜೆಗಳನ್ನು ಹಾಕಿದ ದನಿಗೆ ದನಿಗೂಡಿಸಿದ ಅನುಭವವನ್ನು ಈ ಮುನ್ನುಡಿಗಳು ನೀಡಿವೆ’ ಎಂದು ಎಂ.ಎಸ್‌.ಆಶಾದೇವಿ ಈ ಕೃತಿಯ ಮುನ್ನುಡಿಯಲ್ಲಿ ಬರೆಯುತ್ತಾರೆ. 

ADVERTISEMENT

ಸಂಚಿ

ಲೇ: ಎಂ.ಎಸ್‌. ಆಶಾದೇವಿ

ಪ್ರ: ಪ್ರಿಸಮ್‌ 

ಸಂ: 08026714108

ಪು: 400

ಬೆ: 495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.