ADVERTISEMENT

ಮೊದಲ ಓದು: ಗಮನ ಸೆಳೆಯುವ ಭಾಷಾ ಸೊಗಡು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 23:30 IST
Last Updated 19 ಅಕ್ಟೋಬರ್ 2024, 23:30 IST
ಡಿ.ಎಸ್‌.ಚೌಗಲೆ ಅವರ ಸದರ ಬಜಾರ್
ಡಿ.ಎಸ್‌.ಚೌಗಲೆ ಅವರ ಸದರ ಬಜಾರ್   

ಸದರ ಬಜಾರ್‌

  • ಲೇ: ಡಿ.ಎಸ್‌.ಚೌಗಲೆ

  • ಪ್ರಕಾಶಕರು: ವೀರಲೋಕ

    ADVERTISEMENT
  • ಸಂ: 70221 22121

ಎಂಬತ್ತರ ದಶಕದಲ್ಲಿ ಬೆಳಗಾವಿ ಮತ್ತು ಗಡಿಯ ಸುತ್ತಲಿನ ಕಥನ ಕಾದಂಬರಿ ಇದು. ವಿಡಿಯೊ ಕೇಂದ್ರಗಳು ಗ್ರಾಮೀಣ ಭಾಗಕ್ಕೆ ಪ್ರವೇಶಿಸಿದಾಗ ಬದುಕಿನಲ್ಲಾದ ಬದಲಾವಣೆಗಳೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಗ್ರಾಮೀಣ ಬದುಕಿನ ಚಿತ್ರಣ ಕಟ್ಟಿಕೊಡುತ್ತಲೇ ಆ ಭಾಗದ ಭಾಷೆಯ ಸೊಗಡು ಮನಸೆಳೆಯುತ್ತದೆ. ಶಿವು ಪಾತ್ರದಿಂದಲೇ ಕಥೆಯನ್ನು ನಿರೂಪಿಸುತ್ತ ಹೋಗುವ ಕಾದಂಬರಿಕಾರರು ಆ ಕಾಲದಲ್ಲಿ ಗುಳೆ ಹೋಗುವ, ಒಳ ಸಂಬಂಧಗಳಲ್ಲಿ ಮದುವೆಯಾಗುವ, ಬಾಂಧವ್ಯಗಳು ಬಂಧಗಳಾಗುವ, ಸಾಮಾಜಿಕ ಹಂದರವನ್ನು ಕಟ್ಟಿಕೊಡುತ್ತಾರೆ. ಲೈಂಗಿಕ ಕಾರ್ಯಕರ್ತೆಯರ ಬದುಕಿನ ಬಗ್ಗಡವನ್ನೂ ಕದಡಿ, ಬಂದ ಗ್ರಾಹಕರ ಮನ ತಿಳಿಯಾಗಿಸಿಕೊಳ್ಳುವ ದೃಶ್ಯ ಕಣ್ಮುಂದೆ ಕಟ್ಟಿದಂತಾಗುತ್ತದೆ. ಲೇಖಕರು ಚಿತ್ರ ಕಲಾವಿದರೂ ಆಗಿರುವುದರಿಂದ ಚಿತ್ರಕಶಕ್ತಿ ಇಲ್ಲಿ ಕಾಣಿಸಿಕೊಂಡಿದೆ. 

ಕಥೆಗಾರರು, ನಾಟಕಕಾರರೂ ಆಗಿರುವ ಲೇಖಕರಿಗೆ ಅಲ್ಲಲ್ಲಿ ಕಾದಂಬರಿ ಹಿಡಿತದಿಂದ ತಪ್ಪಿಸಿಕೊಂಡಂತೆ ಕಾಣುತ್ತದೆ. ನಡುನಡುವೆ ಲೇಖನವೊಂದು ಇಣುಕಿದಂತಾಗುತ್ತದೆ. ಲೈಂಗಿಕ ಘಟನೆಗಳು ಶೃಂಗಾರವೂ ಆಗದೆ, ಮಿಲನವೂ ಆಗದೆ, ನಡುನಡುವೆ ಸಿದ್ಧಸೂತ್ರದಂತೆ ಇಡುಕಿರಿದಂತೆ ಕಾಣಸಿಗುತ್ತವೆ. ಅವು ಬರೆಯದಿದ್ದರೂ ಕಥೆಯ ಓಘಕ್ಕೆ ತೊಂದರೆ ಆಗುತ್ತಿರಲಿಲ್ಲ. 

ಮೂಲ ಕಥೆಗಾರರಾಗಿರುವುದರಿಂದ ಪುಟ್ಟ ಪುಟ್ಟ ಕತೆಗಳನ್ನೇ ಹೆಣೆದು ದೊಡ್ಡ ಕ್ಯಾನ್ವಾಸಿನಲ್ಲಿ ತರಲು ಯತ್ನಿಸಿರುವುದು ಢಾಳವಾಗಿ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.