ADVERTISEMENT

ಕನ್ನಡ ರಂಗಭೂಮಿಯಲ್ಲಿ ಹಾಸ್ಯ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 19:30 IST
Last Updated 29 ಫೆಬ್ರುವರಿ 2020, 19:30 IST
ರಂಗಭೂಮಿಯಲ್ಲಿ ಹಾಸ್ಯ 
ರಂಗಭೂಮಿಯಲ್ಲಿ ಹಾಸ್ಯ    

ಸಂಶೋಧನೆ ಎನ್ನುವುದು ಸೃಜನಾತ್ಮಕ ಕಲೆಯಷ್ಟು ಪ್ರತಿಭೆಯನ್ನು ಬೇಡದಿರಬಹುದು. ಆದರೆ, ಡಾ. ಚಿದಾನಂದಮೂರ್ತಿ ಅರ್ಥೈಸುವಂತೆ ‘ಹುಡುಕು’ ಎಂಬರ್ಥವೇ ಬಲವಾಗಿದೆ. ಈ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ ಡಾ.ಎಂ.ಎಸ್‌.ವಿದ್ಯಾ. ಅವರಿಗೆ ಬಹು ಇಷ್ಟವಾದ ಕನ್ನಡ ರಂಗಭೂಮಿಯಲ್ಲಿ ‘ಹಾಸ್ಯ’ ರಸವನ್ನು ಹುಡುಕಿ ತೆಗೆದಿದ್ದಾರೆ.

ಹಾಸ್ಯ ಮತ್ತು ದುರಂತ ನಾಟಕಗಳು ಹೇಗೆಲ್ಲ ಅನಾದಿಕಾಲದಿಂದಲೂ ಮನುಷ್ಯ ಜಗತ್ತಿನೊಳಗೆ ಪ್ರವೇಶ ಪಡೆದಿದೆ. ಅದು ಸಾಗಿ ಬಂದ ಹಾದಿಯನ್ನು ನೆನಪಿಸಲಾಗಿದೆ. ಹಾಸ್ಯದಲ್ಲಿಯೂ ಆಂಗಿಕ ಹಾಸ್ಯ, ಪಾತ್ರಜನಿತ ಹಾಸ್ಯ, ಸನ್ನಿವೇಶದಿಂದುಂಟಾದ ಹಾಸ್ಯ, ವ್ಯಂಗ್ಯ ಹೀಗೆ ಬಹುಬಗೆಯ ಹಾಸ್ಯದ ಮಾದರಿಗಳನ್ನು ಪರಿಚಯಿಸಲಾಗಿದೆ. ಹಲವು ಜನಪ್ರಿಯ ನಾಟಕಗಳು ಸಣ್ಣ ಸಣ್ಣ ಟಿಪ್ಪಣಿಗಳನ್ನು ನೋಡಬಹುದು ಈ ಕೃತಿಯಲ್ಲಿ.

ಹಾಸ್ಯ ನಾಟಕಗಳು ಕನ್ನಡದ ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಟ್ಟ ಬಗೆಯನ್ನು ಅರಿಯಲು ಈ ಪುಸ್ತಕ ನೆರವಾಗುತ್ತದೆ.

ADVERTISEMENT

ಕೃತಿ: ಕನ್ನಡ ರಂಗಭೂಮಿಯಲ್ಲಿ ಹಾಸ್ಯ
ಪ್ರಕಾಶಕರು: ಚಾರುಮತಿ ಪ್ರಕಾಶನ
ಪುಟಗಳು: 376
ದರ: 300
ಮೊಬೈಲ್‌: 94482 35553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.