ADVERTISEMENT

ಕಲಾಲೋಕ ನಿನ್ನೆ ಕಂಡ ಕನಸು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 19:30 IST
Last Updated 16 ನವೆಂಬರ್ 2019, 19:30 IST
ಕಪಾಟು
ಕಪಾಟು   

ಸುಪ್ತ

ಲೇ: ಡಾ.ಕೆ.ಬಿ.ಶ್ರೀಧರ್

ಪ್ರ: ಅಭಿರುಚಿ ಪ್ರಕಾಶನ, ಮೈಸೂರು

ADVERTISEMENT

ಮೊ: 9980560013

ಬೆ: 175

ಪು: 200

ಬಾಲ್ಯ ಸ್ನೇಹಿತರಿಬ್ಬರ ಜಟಿಲ ಸಂಬಂಧವನ್ನು, ಸಾವನ್ನು ಎದುರಿಸುವ ಹಾಗೂ ಬದುಕನ್ನು ಕಟ್ಟುತ್ತಿರುವ ಕಾಲಘಟ್ಟಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನವೇಈ ಕಾದಂಬರಿಯ ಕಥಾವಸ್ತು.ಮೂರು ಅಧ್ಯಾಯಗಳನ್ನು ಕಾದಂಬರಿ ಒಳಗೊಂಡಿದೆ. ಲೇಖಕರೇ ಹೇಳಿಕೊಂಡಂತೆ, ಈ ಕಾದಂಬರಿಯ ಕಥೆಯು ಸಾಗುವ ಹಾದಿಯಲ್ಲಿ ಸಾವು ಮತ್ತು ಬದುಕು ಒಂದರೊಳಗೊಂದು ಮಿಳಿತಗೊಳ್ಳುತ್ತವೆ. ಯಾರಿಗೂ ಅರಗಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದ ಸಾವಿನ ವಿದ್ಯಮಾನ ಮನುಷ್ಯನನ್ನು ಯಾವ ರೀತಿಯಲ್ಲಿ ಬಾಧಿಸುತ್ತದೆ, ಸಂಬಂಧಗಳೇ ಪ್ರಧಾನವಾಗಿರುವ ಸಮಾಜದಲ್ಲಿ ಇದು ಹೇಗೆಲ್ಲ ಅಗಾಧ ಮತ್ತು ನಿಗೂಢ ಪರಿಣಾಮ ಬೀರುತ್ತದೆ ಎನ್ನುವುದನ್ನು ಈ ಕಾದಂಬರಿ ತೆರೆದಿಡುತ್ತದೆ.

ಕಲಾಲೋಕ ನಿನ್ನೆ ಕಂಡ ಕನಸು

ಸಂಪಾದನೆ: ಡಾ.ಎಚ್.ಎಸ್‌. ರಾಘವೇಂದ್ರರಾವ್‌

ಪ್ರ: ಕಲಾಮಂದಿರ, ಬೆಂಗಳೂರು

ಮೊ: 9886330207

ಪು: 290

ಬೆ: ₹300

ಈ ಕೃತಿಯು ಕಲೆಯ ಕುರಿತ ಅಕಾಡೆಮಿಕ್‌ ಬರಹಗಳ ಸಂಕಲನ. ನಾಲ್ಕು ಭಾಗಗಳಿದ್ದು, 164ಕ್ಕೂ ಹೆಚ್ಚು ಅಧ್ಯಾಯಗಳನ್ನು ಇದು ಒಳಗೊಂಡಿದೆ. 1930ರ ದಶಕದಲ್ಲಿ ಅ.ನ. ಸುಬ್ಬರಾಯರು ಸಂಪಾದಿಸಿ ಹೊರತರುತ್ತಿದ್ದ ‘ಕಲಾ‘ ಸಾಂಸ್ಕೃತಿಕ ಪತ್ರಿಕೆಯ ಆಯ್ದ ಕೆಲವು ಲೇಖನ, ಬಿಡಿ ಬರಹ, ಚಿತ್ರಗಳು ಇಂದಿಗೂ ಸಕಾಲಿಕವಾಗಿದ್ದು, ಬೋಧಪ್ರದವಾಗಿವೆ. ಕಲೆ, ಸಾಹಿತ್ಯ, ಸಾಮಾಜಿಕ ಸಂಗತಿಗಳನ್ನು ಕುರಿತ ಒಳನೋಟವನ್ನು ಹೊಂದಿದ್ದ ಪತ್ರಿಕೆಯನ್ನು ಹೊರ ತಂದ ಸಂಗತಿ ಹಾಗೂ ಅದರಲ್ಲಿದ್ದ ವಿಷಯ ವೈವಿಧ್ಯತೆಯನ್ನು ಹೆಕ್ಕಿ, ಕಲಾಸಕ್ತರಿಗೆ ಪರಿಚಯಿಸಲು ಮಾಡಿರುವ ಪ್ರಯತ್ನ ಎದ್ದು ಕಾಣುತ್ತದೆ. ಸರಿಯಾಗಿ ಒಂದು ಶತಮಾನದ ಹಿಂದೆ ಆರಂಭವಾದ ‘ಕಲಾಮಂದಿರ’ದ ಯಶೋಗಾಥೆಯನ್ನು ಈ ಕೃತಿ ತೆರೆದಿಟ್ಟಿದೆ.

ಸರ್ವಜ್ಞನ ವಚನಗಳಲ್ಲಿ ವೈದ್ಯಕೀಯ ವಿಚಾರಧಾರೆ

ಸಂಪಾದಕರು: ಡಾ.ಸಿ.ಎಸ್‌.ಕೆ

ಪ್ರ: ವೈದ್ಯ ವಾರ್ತಾ ಪ್ರಕಾಶನ, ಮೈಸೂರು

ಮೊ: 94484 02092

ಪು: 160

ಬೆಲೆ: ₹140

ಸರ್ವಜ್ಞನ ಹುಟ್ಟು, ವಿದ್ಯಾಭ್ಯಾಸ, ವ್ಯಕ್ತಿತ್ವ, ವಿರಕ್ತಿಭಾವ, ಕವಿಯಾಗಿ ಸರ್ವಜ್ಞ,ಕಾವ್ಯಶಕ್ತಿ ಮತ್ತು ಶೈಲಿ, ಬಿರುದಿನ ಮಹತ್ವ, ಲೋಕನೀತಿಯ ಪದ್ಧತಿಗಳು ಹೀಗೆ ಹಲವು ಆಯಾಮಗಳಲ್ಲಿ ಸರ್ವಜ್ಞನ ಬಗ್ಗೆ ಈ ಕೃತಿಯಲ್ಲಿ ಸವಿವರವಾಗಿ ತಿಳಿಸಿಕೊಡುತ್ತದೆ. ಇದರಲ್ಲಿ ನಲವತ್ತನಾಲ್ಕು ಅಧ್ಯಾಯಗಳಿವೆ. ಈ ಕೃತಿ ಯಾವುದಕ್ಕೆ ಬಹುಮುಖ್ಯವೆನಿಸುತ್ತದೆ ಎಂದರೆ, ಸರ್ವಜ್ಞ ಮಹಾಕವಿ ತನ್ನ ಅಪೂರ್ವವಾದ ಜ್ಞಾನದ ಆಧಾರದ ಮೇಲೆ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಮನುಷ್ಯನ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸುಮಾರು ನೂರೈವತ್ತು ತ್ರಿಪದಿಗಳನ್ನು ಹೆಕ್ಕಿ ಕೊಟ್ಟಿದೆ. ಆರೋಗ್ಯ ರಕ್ಷಣೆಗಾಗಿ ಸರ್ವಜ್ಞನು ಪ್ರಸ್ತಾಪಿಸಿರುವ ತ್ರಿಪದಿಗಳ ಒಳಾರ್ಥಗಳನ್ನು ಬಿಡಿಸಿ ಸರಳ ಭಾಷೆಯಲ್ಲಿ ಎಂತಹವರಿಗೂ ಅರ್ಥವಾಗುವಂತೆ ಈ ನಿರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.