ADVERTISEMENT

ಒಡನಾಟಗಳ ವಿಟಮಿನ್‌ ‘ಡಿ’: ಡಾ.ನಾ. ಮೊಗಸಾಲೆ ಅವರ ಪುಸ್ತಕದ ಮೊದಲ ಓದು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 0:15 IST
Last Updated 16 ಅಕ್ಟೋಬರ್ 2022, 0:15 IST
ಹೂ ಬಿಸಿಲಿನ ಕೆಳಗೆ... ಪುಸ್ತಕದ ಮುಖಪುಟ
ಹೂ ಬಿಸಿಲಿನ ಕೆಳಗೆ... ಪುಸ್ತಕದ ಮುಖಪುಟ   

ಸುದೀರ್ಘ ಬದುಕಿನಲ್ಲಿ ತಮ್ಮ ಒಡನಾಟಕ್ಕೆ ಬಂದ ಹಿರಿಕಿರಿಯ ಮಿತ್ರರ ವ್ಯಕ್ತಿತ್ವಗಳ ದಾಖಲೆ ಈ ಕೃತಿಯಲ್ಲಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ರಾಜ್ಯದ ವಿವಿಧ ಭಾಗಗಳ ಆಯ್ದ ವ್ಯಕ್ತಿಗಳ ವ್ಯಕ್ತಿತ್ವವನ್ನು ಹಾಗೂ ವೈಯಕ್ತಿಕ ಸ್ನೇಹವನ್ನು ದಾಖಲಿಸಿಕೊಟ್ಟಿದ್ದಾರೆ ಲೇಖಕ ಡಾ.ನಾ.ಮೊಗಸಾಲೆ. ಲೇಖಕರೊಂದಿಗಿನ ಒಡನಾಟ ಅನ್ನುವುದಕ್ಕಿಂತಲೂ ಆಯಾ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುವವರು ಓದಬಹುದಾದ ಕೃತಿ. ಈಗ ಇರುವವರು, ಆಗಿ ಹೋದವರು, ಅಪರೂಪದ ವ್ಯಕ್ತಿಗಳು, ಅಷ್ಟಾಗಿ ಪರಿಚಯಗೊಳ್ಳದವರು, ಸತ್ಕಾರ್ಯಗಳ ಹಿಂದಿದ್ದ ಉದ್ಯಮಿ ದಾನಿಗಳು... ಹೀಗೆ ಹಲವು ವ್ಯಕ್ತಿತ್ವಗಳ ಪರಿಚಯ ಇಲ್ಲಿದೆ.

ವಿವಿಧ ಅಭಿನಂದನಾ ಗ್ರಂಥ ಅಥವಾ ಸಂಸ್ಮರಣಾ ಗ್ರಂಥಗಳಿಗೆ ಬರೆದ ಲೇಖನಗಳನ್ನು ಒಟ್ಟಾಗಿಸಿ ‘ಹೂ ಬಿಸಿಲಿನ ಕೆಳಗೆ’ ಇಟ್ಟಿದ್ದಾರೆ. ಬರಹಗಳಲ್ಲಿ ಮೊಗಸಾಲೆಯವರ ಎಂದಿನ ಲವಲವಿಕೆ, ತಾಜಾತನ ಇದೆ. ಲೇಖಕರ ಹಿರಿ ಕಿರಿಯ ಮಿತ್ರದ ಒಡನಾಟದ ಹೂಬಿಸಿಲಿನಿಂದ ವಿಟಮಿನ್‌ ‘ಡಿ’ ಸಿಕ್ಕಿದೆ. ಆ ಬೆಚ್ಚನೆಯ ಸುಖದ ಅನುಭವವನ್ನು ಮತ್ತೆ ಮನಸ್ಸಿನ ಅಂಗಳಕ್ಕೆ ತಂದುಕೊಳ್ಳುವ ಪ್ರಯತ್ನವಿದು ಎಂದು ಅವರೇ ಹೇಳಿಕೊಂಡಿದ್ದಾರೆ. ಒಟ್ಟು 49 ವ್ಯಕ್ತಿಗಳ ವ್ಯಕ್ತಿ ಸಂಸ್ಕೃತಿ ಪರಿಚಯವಿದೆ.

ಕೃತಿ: ಹೂ ಬಿಸಿಲಿನ ಕೆಳಗೆ

ADVERTISEMENT

ಲೇ: ಡಾ.ನಾ. ಮೊಗಸಾಲೆ

ಪ್ರ: ಸ್ನೇಹಾ ಎಂಟರ್‌ಪ್ರೈಸಸ್‌, ಬೆಂಗಳೂರು

ಸಂ: 98450 62549

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.