ಕೃತಿ: ನೆಲ್ಸನ್ ಮಂಡೇಲಾ ಜೀವನ ಚರಿತ್ರೆ
ಲೇ: ಡಾ.ಎಂ.ವೆಂಕಟಸ್ವಾಮಿ
ಪ್ರ: ನವಕರ್ನಾಟಕ ಪ್ರಕಾಶನ
ಬೆಲೆ: ₹350
ಪುಟಗಳು: 332
ಸಂ: 080 22161900
ಆಫ್ರಿಕಾದ ಪ್ರಜಾಪ್ರಭುತ್ವವಾದಿ ಹೋರಾಟಗಾರ, ಸಮಾನತೆಯ ಹರಿಕಾರ ನೆಲ್ಸನ್ ಮಂಡೇಲಾ ಅವರ ಹೋರಾಟ ಮತ್ತು ರಾಜಕೀಯ ಬದುಕನ್ನು ಅಷ್ಟೋ ಇಷ್ಟೋ ತಿಳಿದವರಿಗೆ ವಿಸ್ತಾರದ ಅರಿವು ಮೂಡಿಸುವ ಪ್ರಯತ್ನ ಮಾಡಿದೆ ಈ ಕೃತಿ.
ಒಂದೆಡೆ ಮಂಡೇಲಾ ಅವರ ಬದುಕನ್ನು ಹೇಳಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಮೂಲನಿವಾಸಿಗಳ ಅಂದಿನ ಜಗತ್ತು, ಆಚಾರ ವಿಚಾರ, ಬ್ರಿಟಿಷರ ಪ್ರಭಾವ ಎಲ್ಲವನ್ನೂ ಒಂದೊಂದಾಗಿ ಪರಿಚಯಿಸುತ್ತಾ ಸಾಗಿದೆ. ಎಗ್ಗಿಲ್ಲದೇ ನಡೆದ ಮಾನವ ಹಕ್ಕುಗಳ ದಮನ, ಮಂಡೇಲಾ ಅವರೊಳಗಿದ್ದ ಒಬ್ಬ ಹೋರಾಟಗಾರನ ಕಿಚ್ಚಿಗೆ ಕಿಡಿ ಹೊತ್ತಿದ ಕ್ಷಣ... ಪದೇ ಪದೇ ಮಂಡೇಲಾ ಅವರನ್ನು ಜೈಲಿಗೆ ತಳ್ಳಿದ ವಿದ್ಯಮಾನ, ಶಿಕ್ಷೆಗೊಳಪಡಿಸಿದ ಸಂದರ್ಭ, ವ್ಯವಸ್ಥೆಯ ದ್ವಂದ್ವ ನಿಲುವು, ಭಾರತದೊಂದಿಗೆ ಮಂಡೇಲಾ ನಂಟು ಇತ್ಯಾದಿ ವಿವರಗಳಿವೆ. ನಾಯಕನೊಬ್ಬನನ್ನು ಹೊಸಕಲು ಎಷ್ಟೊಂದು ಹಿತಾಸಕ್ತಿಗಳು ಒಂದಾಗುತ್ತವೆ ಎಂಬುದು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.
ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟ ಎಲ್ಲ ಕಾಲಗಳಿಗೂ ಮತ್ತು ಎಲ್ಲೆಡೆಗೂ ಅತ್ಯಂತ ಪ್ರಸ್ತುತ ಸಂಗತಿ. ಹಾಗಾಗಿ ಈ ಪುಸ್ತಕ ಕನ್ನಡದ ಓದುಗರಿಗೂ ಅಗತ್ಯವಾದಂಥದ್ದೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.