ADVERTISEMENT

ಮೊದಲ ಓದು | ಮೊರಸುನಾಡಿಗರು: ಸಶಕ್ತ ವ್ಯಕ್ತಿಗಳ ದರ್ಶನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
<div class="paragraphs"><p>‘ಮೊರಸುನಾಡಿಗರು’ ಮುಖಪುಟ</p></div>

‘ಮೊರಸುನಾಡಿಗರು’ ಮುಖಪುಟ

   

ಕರ್ನಾಟಕದ ತೆಲುಗಿನ ಗಡಿನಾಡನ್ನು–ಕೋಲಾರಕ್ಕೆ ಹೊಂದಿಕೊಂಡ ಪ್ರದೇಶ–‘ಮೊರಸುನಾಡು’ ಎಂದು ಕರೆಯುತ್ತಾರೆ. ಇಂತಹ ಪ್ರದೇಶಗಳಲ್ಲಿ ನಿತ್ಯದ ಬದುಕಿನಲ್ಲಿ ಸಹಜ ಎನ್ನುವಂತೆಯೇ ವಿಶೇಷತೆ ಉಳಿಸಿಕೊಂಡಿರುವ ಅನೇಕರಿದ್ದಾರೆ. ಅಂಥವರನ್ನು ಸ.ರಘುನಾಥ ಗುರುತಿಸಿದ್ದಾರೆ. ಅವರೇ ಬರೆದುಕೊಂಡಂತೆ, ‘ಇವನ್ನು ಬರೆದವನು ನಾನಲ್ಲ. ಅವರ ವ್ಯಕ್ತಿತ್ವಗಳು ಬರೆಸಿದವು.’ ನಲವತ್ತು ವ್ಯಕ್ತಿಚಿತ್ರಗಳು ಈ ಸಣ್ಣ ಪುಸ್ತಕದಲ್ಲಿವೆ. ಒಂದೊಂದೂ ಒಂದೆರಡು ನಿಮಿಷಗಳ ಓದನ್ನಷ್ಟೆ ಬಯಸುತ್ತದೆ. ಆದರೆ, ಅಷ್ಟರಲ್ಲೆ ಆ ವ್ಯಕ್ತಿಗಳು ನಮ್ಮ ಮನದಲ್ಲಿ ಅಲೆಗಳನ್ನು ಎಬ್ಬಿಸಬಲ್ಲಷ್ಟು ಶಕ್ತರು.

‘ಊರವರ ಮನೆಗಳಲ್ಲಿ ಕಾಳುಕಡಿ ಕೇರುವುದು–ಮಾಡುವುದು ಕಕ್ಕಮ್ಮ ಮಾಡುತ್ತಿದ್ದ ಕೆಲಸಗಳು. ಅದಕ್ಕೆ ಸಿಗುತ್ತಿದ್ದುದು ತಂಗಳು ಮುದ್ದೆಗಳು. ಬೆಳಗಿನ ಹೊತ್ತು ಮನೆಮನೆ ತಿರುಗಿ ತಂಗಳು ಮುದ್ದೆಗಳನ್ನು ಸೆರಗಿಗೆ ಹಾಕಿಸಿಕೊಂಡು ಗುಡಿಸಲಿಗೆ ಬರುತ್ತಿದ್ದರು. ಬೀದಿಗಳಲ್ಲಿ ಆಡುವ, ಕೂಲಿನಾಲಿಗೆ ಹೋದವರ ಮಕ್ಕಳನ್ನು ಹುಡುಕಿ ಕರೆತಂದು ಸಾರಿನಲ್ಲೋ ಉಪ್ಪಿನಕಾಯಲ್ಲೋ ಅದ್ದಿ ಕೈತುತ್ತು ಹಾಕುತ್ತಿದ್ದರು.’– ಇದು ಪುಸ್ತಕದ ಮೊದಲ ಅಗುಳು. ಓದುತ್ತಾ ಹೋದಂತೆ ಇಂತಹ ಇನ್ನಷ್ಟು ಸಶಕ್ತ ಮನಸ್ಸುಗಳು ನಮ್ಮ ಎದೆಗೆ ಇಳಿಯುತ್ತವೆ. 

ADVERTISEMENT

ಮೊರಸುನಾಡಿಗರು– ವ್ಯಕ್ತಿ ಚಿತ್ರಗಳು

ಲೇ: ಸ. ರಘುನಾಥ

ಪ್ರ: ನಿವೇದಿತ ಪ್ರಕಾಶನ ಬೆಂಗಳೂರು

ಸಂ: 9448733323

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.