ADVERTISEMENT

ಮೊದಲ ಓದು: ರಂಗಭೂಮಿಯ ಅಪ್ರತಿಮ ಸಾಧಕಿ ‘ರಾಮಿ’

ಬಿಟ್ಟೇನೆಂದರೂ ಬಿಡದು-ಈ ಮಾಯೆ’ ಪುಸ್ತಕದಲ್ಲಿದೆ.

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 22:49 IST
Last Updated 20 ಜುಲೈ 2024, 22:49 IST
ಮುಖಪುಟ
ಮುಖಪುಟ   

ಮೈಸೂರು ರಂಗಭೂಮಿಯಲ್ಲಿ ರಂಗನಟಿಯಾಗಿ, ನಿರ್ದೇಶಕಿಯಾಗಿ ಸಾಕಷ್ಟು ಹೆಸರು ಮಾಡಿರುವ ರಾಮೇಶ್ವರಿ ವರ್ಮ ಅವರ ರಂಗಭೂಮಿಯ ಜೊತೆಗಿನ ನಂಟಿನ ಬಗೆಗಿನ ಮಾಹಿತಿಯು ‘ಬಿಟ್ಟೇನೆಂದರೂ ಬಿಡದು-ಈ ಮಾಯೆ’ ಪುಸ್ತಕದಲ್ಲಿದೆ. 

ರಂಗಭೂಮಿ ಒಂದು ವಿಸ್ಮಯ ಜಗತ್ತು. ಈ ಜಗತ್ತನ್ನು ಒಮ್ಮೆ ಒಳಹೊಕ್ಕರೆ ಹೊರಬಹುದು ಕಷ್ಟ ಎನ್ನುವ ರಾಮೇಶ್ವರಿ ವರ್ಮ, ಪರಿಚಯದವರ ಪಾಲಿನ ‘ರಾಮಿ’ ಆಗಿದ್ದರು. ರಂಗಭೂಮಿಯಲ್ಲಿ 60ಕ್ಕೂ ಅಧಿಕ ವರ್ಷಗಳ ಕಾಲ ರಂಗನಟಿಯಾಗಿ, ನಿರ್ದೇಶಕಿಯಾಗಿ, ಸಂಘಟಕಿಯಾಗಿ ರಂಗ ಪಯಣ ನಡೆಸಿದ್ದಾರೆ. ಅದರ ಚಿತ್ರಣ ಈ ಪುಸ್ತಕದ ಉದ್ದಕ್ಕೂ ಇದೆ‌. ಅಲ್ಲಿನ ಅನುಭವಗಳು ಹಾಗೂ ದಿಗ್ಗಜ ನಿರ್ದೇಶಕರ ನಾಟಕಗಳಲ್ಲಿ ನಟಿಸಿದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಈ ಕೃತಿಯನ್ನು ಓದುಗರು ಎರಡು ಭಾಗಗಳಾಗಿ ವಿಂಗಡಿಸಿಕೊಳ್ಳಬಹುದು. ಮೊದಲ ಭಾಗದಲ್ಲಿ ರಾಮೇಶ್ವರಿ ವರ್ಮ ಅವರ ರಂಗಭೂಮಿಯ ಜೊತೆಗಿನ ನಂಟು, ಹವ್ಯಾಸಿ ರಂಗಭೂಮಿಯ ಅಭಿರುಚಿ, ಅಭಿನಯದ ನಾಟಕಗಳು, ಅವರು ನೋಡಿದ ನಾಟಕಗಳು, ರಂಗಭೂಮಿ ನಟಿ ಹಾಗೂ ನಿರ್ದೇಶಕಿಯಾಗಿ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಮೈಸೂರು ಹವ್ಯಾಸಿ ರಂಗಭೂಮಿಯಲ್ಲಿನ ಹಿರಿಯ, ಸಮಕಾಲೀನ, ಹೊಸ ತಲೆಮಾರಿನ ಕಲಾವಿದರ ಜೊತೆಗಿನ ಒಡನಾಟ, ಅನುಭವಗಳು, ರಂಗಭೂಮಿಯಲ್ಲಿನ ಬದಲಾವಣೆ, ಸುಧಾರಣೆ ಹಾಗೂ ತಂತ್ರಗಾರಿಕೆಯ ಬಗೆಗಿನ ಒಳನೋಟಗಳಿವೆ. ಇವುಗಳು ರಂಗಭೂಮಿಯ ಬಗ್ಗೆ ಮಾಹಿತಿ ನೀಡಿವುದರ ಜೊತೆಗೆ ಹೊಸ ಒಳವುಗಳನ್ನು ಓದುಗರಲ್ಲಿ ಮೂಡಿಸುತ್ತವೆ‌. ಈಗಾಗಲೇ ಇರುವ ದಾಖಲೆಗಳ ಜೊತೆಗೆ ತಮ್ಮ 60 ವರ್ಷಗಳ ರಂಗಭೂಮಿಯಲ್ಲಿನ ಅನುಭವಗಳನ್ನು ಸೇರಿಸಿ ಪ್ರಸ್ತುತ ಪಡಿಸಿದ್ದಾರೆ‌. ರಂಗಭೂಮಿಯ ಸವಾಲುಗಳು, ವಾಸ್ತವದ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.

ADVERTISEMENT

ಇದರಲ್ಲಿ ರಾಮೇಶ್ವರಿ ವರ್ಮ ಅವರ ಆರಂಭದ
ರಂಗ ಪಯಣದ ಜೀವನ ಕಥನದಿಂದ ಹಿಡಿದು ರಂಗಭೂಮಿಯಲ್ಲಿನ ಇತ್ತೀಚಿನ ಪ್ರಯೋಗಗಳವರೆಗೆ
ಹಾಗೂ ಮೈಸೂರು ಹವ್ಯಾಸಿ ರಂಗಭೂಮಿಯ ಕುರಿತಾದ ಉಪಯುಕ್ತ ಮಾಹಿತಿ ಇದೆ.

ಬಿಟ್ಟೇನೆಂದರೂ ಬಿಡದು ಈ ಮಾಯೆ ಸಂ: ಮೀನಾ ಮೈಸೂರುಪ್ರ : ಅಪರಾಜಿತೆ ಪ್ರಕಾಶನ ಸಂ: 9845790862

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.