ADVERTISEMENT

ಕೂಚಿಪುಡಿ ಪರಂಪರಾ 30, 31ಕ್ಕೆ ಪ್ರಸಾರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 11:56 IST
Last Updated 27 ಅಕ್ಟೋಬರ್ 2021, 11:56 IST
ಲಕ್ಷ್ಮೀ ಬಾಬು, ಸ್ನೇಹಾ ಬಾಬು, ಅಮೆರಿಕ
ಲಕ್ಷ್ಮೀ ಬಾಬು, ಸ್ನೇಹಾ ಬಾಬು, ಅಮೆರಿಕ   

ಬೆಂಗಳೂರಿನ ಕೂಚಿಪುಡಿ ಪರಂಪರಾ ಫೌಂಡೇಷನ್‍ನ `ನಾಟ್ಯ ಪರಂಪರಾ ಉತ್ಸವ 2021’ರ ಎಂಟನೇ ಆವೃತ್ತಿಯು ಅ.30 ಮತ್ತು 31, 2021ರಂದು ಸಂಜೆ 6ಕ್ಕೆ ಕೂಚಿಪುಡಿ ಪರಂಪರಾ ಯೂಟ್ಯೂಬ್ ಚಾನೆಲ್‍ನಲ್ಲಿ ನೇರ ಪ್ರಸಾರ ಆಗಲಿದೆ.

ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಕೂಚಿಪುಡಿ ಕುಟುಂಬದ ಗುರು ಮಹಾಂಕಾಳಿ ಸೂರ್ಯನಾರಾಯಣ ಶರ್ಮಾ ಗುಂಟೂರು, ಬೆಂಗಳೂರಿನ ಭರತನಾಟ್ಯ ಪಟು ಬದರಿ ದಿವ್ಯ ಭೂಷಣ್, ಅಮೆರಿಕದ ಕಾಸಿ ಐಸೊಲಾ ಅವರಿಂದ ಕೂಚಿಪುಡಿ ಸೋಲೋ ನೃತ್ಯ, ಲಕ್ಷ್ಮಿ ಬಾಬು ಬಂಗಾರು ಮತ್ತು ಸ್ನೇಹಾ ಬಾಬು ಗುರು ದೀಪಾ ನಾರಾಯಣನ್,ಅಪರ್ಣಾ ನಂಗಿಯಾರ್ ಅವರಿಂದ ಕೂಡಿಯಾಟ್ಟಂನ ವಿಶೇಷ ಪ್ರಸ್ತುತಿ, ಸಶೀಂದ್ರನ್ ಅವರ ಶಿಷ್ಯೆ ಸೋನು ಸತೀಶ್ ಕುಮಾರ್, ತೈವಾನ್‍ನಿಂದ ಕೈಚಿ ಲೊ, ಕೇರಳದಿಂದ ರೇಷ್ಮಾ ಯು. ರಾಜ್, ಕೆನಡಾದಿಂದ ಪ್ರಿಯಾಂಕಾ ಪಹರಿ ಅವರ ನೃತ್ಯ ಪ್ರದರ್ಶನವಿದೆ. ಹೈದರಾಬಾದ್‍ನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ದೀಪಿಕಾ ರೆಡ್ಡಿ ಅವರ ಸಮಾರೋಪ ಭಾಷಣವಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT