ಕುಚಿಪೂಡಿ ನೃತ್ಯಗಾರ್ತಿ ವೈಜಯಂತಿ ಕಾಶಿ ನೇತೃತ್ವದ ಶಾಂಭವಿ ನೃತ್ಯ ಶಾಲೆಯಲ್ಲಿ 9ನೇ ಆವೃತ್ತಿಯ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಮತ್ತು ನೃತ್ಯೋತ್ಸವ ‘ಮೂಲಂ 2024’ ಕಾರ್ಯಕ್ರಮವನ್ನು ಜುಲೈ 20 ಮತ್ತು 21ರಂದು ಆಯೋಜಿಸಲಾಗಿದೆ.
‘ಬದಲಾಗುವ ಗುರು ಶಿಷ್ಯ ಪರಂಪರೆಯ ಪಯಣ’ ಎನ್ನುವ ವಿಷಯವನ್ನು ಆಧರಿಸಿ ಈ ವರ್ಷದ ಸಮಾರಂಭ ನಡೆಯಲಿದೆ. ಕಲಾರಾಧನೆಯಲ್ಲಿ ಗುರು ಹಾಗೂ ಶಿಷ್ಯರ ಅವಿನಾಭಾವ ಸಂಬಂಧದ ಅನನ್ಯತೆಯನ್ನು ಎತ್ತಿಹಿಡಿಯುತ್ತದೆ. ಉತ್ಸಾಹಿ ನೃತ್ಯಗಾರರು, ವಿದ್ವಾಂಸರು ಭಾಗವಹಿಸಿ ಕಲೆಯ ಶ್ರೀಮಂತಿಕೆಯ ಮಹತ್ವವನ್ನು ತಿಳಿಸಲಿದ್ದಾರೆ.
ಕಾರ್ಯಕ್ರಮವನ್ನು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಲಲಿತ ಕಲಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ ನಾಗೇಶ್.ವಿ.ಬೆಟ್ಟಕೋಟೆ ಉದ್ಘಾಟಿಸಲಿದ್ದಾರೆ. ಜೈನ್ ವಿಶ್ವವಿದ್ಯಾಲಯದ ಕಲೆ ಮತ್ತು ಸಂಸ್ಕೃತಿ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ರಾವ್ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನೃತ್ಯಗಾರರು ಹಾಗೂ ವಿದ್ಯಾರ್ಥಿಗಳು ವಿಷಯಾಧಾರಿತ ಪ್ರಬಂಧವನ್ನು ಮಂಡಿಸಲಿದ್ದಾರೆ. ಭಾರತದ ವಿವಿಧ ಕಡೆಗಳಿಂದ ಹಲವು ನೃತ್ಯಪಟುಗಳು ನೃತ್ಯ ಕಾರ್ಯಕ್ರಮವನ್ನು ನೀಡಲಿದ್ದಾರೆ. ಅವನಿ ಗಾರ್ಗೆ, ಅವಜಿತ್ ದಾಸ್, ಸಂಧ್ಯಾ ಉಡುಪ, ಗೀತಾ ಪದ್ಮಕುಮಾರ್, ಶರ್ಮಿಳಾ ಬಿಸ್ವಾಸ್, ಮೈಸೂರು ಬಿ ನಾಗರಾಜ್, ಮತ್ತು ವೈಜಯಂತಿ ಕಾಶಿ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.
ಸ್ಥಳ: ಕೊಂಡಾಜಿ ಬಸಪ್ಪ ಸಭಾಂಗಣ. ಸಂಜೆ 4.30 ರಿಂದ 8.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.