ADVERTISEMENT

ನೋಡಿ | ಜಸ್ಟ್‌ ಮ್ಯೂಸಿಕ್‌ –41: ಗಾಯನ ಸುಚೇತನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 3:24 IST
Last Updated 2 ಅಕ್ಟೋಬರ್ 2021, 3:24 IST

ವಿದ್ವಾನ್‌ ಡಾ.ಸುಚೇತನ್‌ ರಂಗಸ್ವಾಮಿ ಅವರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಸಮಕಾಲೀನ ಸಂಗೀತ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಶ್ರೇಷ್ಠ ಗುರುಗಳ ಮಾರ್ಗದರ್ಶನದಲ್ಲಿ ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡಿರುವ ಅವರು ಸಂಶೋಧಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮುಖ್ಯವಾಗಿ ಧ್ವನಿ ಸಂಸ್ಕೃತಿ ಕುರಿತಾಗಿ ಅವರು ಮಾಡಿರುವ ಸಂಶೋಧನೆಗೆ ಪಿಎಚ್‌ಡಿ ಲಭಿಸಿದೆ.

ಆಕಾಶವಾಣಿ ಕಲಾವಿದರಾಗಿ ದೊಡ್ಡ ಹೆಸರು ಮಾಡಿದ್ದಾರೆ. ಕತೆ, ಕವನ, ಕಾದಂಬರಿಯನ್ನೂ ಬರೆದು ಸಾಹಿತಿ ಎನಿಸಿಕೊಂಡಿದ್ದಾರೆ. ಹಲವು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿ ನಟ ಎನಿಸಿಕೊಂಡಿದ್ದಾರೆ. ಸುಂದರ ಧ್ವನಿಯ ಮೂಲಕ ಅವರು ಜನರಿಗೆ ಇಷ್ಟವಾಗಿದ್ದಾರೆ. ವೀಣಾವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸಂಗೀತ ರಿಯಾಲಿಟಿ ಶೋಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ಅವರು ಸ್ಪರ್ಧಿಗಳ ಸ್ಫೂರ್ತಿಯಾಗಿದ್ದಾರೆ. ಇಂತಹ ಸುಚೇತನ ರಂಗಸ್ವಾಮಿ ಅವರ ಹಿತಾನುಭವ ಈ ವಾರದ ಜಸ್ಟ್‌ ಮ್ಯೂಸಿಕ್‌ ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.